Posts

Showing posts from May, 2016

ಮಾತು!

ಮಾತು ಮಾತಲ್ಲೇ ಮೆಲಕು ಹಾಕುತ ಮಾತು ಮಾತನ್ನೇ ತಿಂದು ತೇಗುತ ಮಾತಲ್ಲೇ ಮೂಕಳಾಗಿ , ಮಾತು  ನುಂಗಿ ಮಾತಲ್ಲೇ ಜೊತೆಯಾಗಿ ಮಾತಲ್ಲೇ ಹಿತವಾಗಿ ಮಾತನ್ನೇ ನಂಬಿ, ಅದರಿಂದ ನಕ್ಕಿ, ಮಾತಿಂದ ಕಣ್ಣೀರು, ಅದರಿಂದ ಬಾಷ್ಪ ಅದರಲ್ಲೇ ಆನಂದ, ಅದರಲ್ಲೇ ಅಂತ್ಯ ಮಾತೆ ಮೌನ, ಮೌನವೇ ಮಾತು ಮನದೊಳಗಿನ ಮಾತು, ಬಾಹ್ಯ ತೋರಿಕೆಯ ಮಾತು ದುಗುಡದ ಕಿರು ಮಾತು ಧೈರ್ಯದ ದೃಡ ಮಾತು ಕಹಿಯ ಮೃದು ಮಾತು ಸಿಹಿಯಾದ ಜೇನು ಮಾತು! ಮಾತು ಮಾತಲ್ಲೇ ಮನೆಯಾಗಿಸೋ, ಮಾತು ಮಾತಲ್ಲೇ ಕನಸು ಕಟ್ಟಿ, ಮಾತನ್ನೇ ಜೇವಾಳವಾಗಿಸೋ ಎರಡಂಗುಲದ ಜಿಹ್ವೆಯೇ !! ನೀನಿರದೇ ಜಗ ಮೌನ!!