Anitha!!!!
ಬೆಳಿಗ್ಗೆ ಎಳುವುದಕ್ಕಿಂತ ಮುಂಚೆಯಿಂದ ಹಳೆ ನೆನಪುಗಳು ಕಣ್ ಮುಂದೆ ಬರ್ತಾ ಇವೆ. ಇವತ್ತು ನನ್ನ ಕ್ಲೋಸ್ ಫ್ರೆಂಡ್ ಮದ್ವೆ. ಅವಳನ್ನು ನಾನು ಮೊದಲ ಸಾರಿ ಮಾತಾಡಿದ್ದು, ಜೊತೆಯಲ್ಲಿ ಹಾಸ್ಟೆಲ್ನಲ್ಲಿ ಓದಿದ್ದು , ಮದ್ಯ ಮದ್ಯ ಆಗೋ ಸಣ್ಣ ಪುಟ್ಟ ಜಗಳ , ನಕ್ಕು ನಕ್ಕು ಕಣ್ಣೀರು ಬಂದಂತ ಹಲವು ಸನ್ನಿವೇಶ , ಹಾಸ್ಟೆಲ್ ನ ಕೊನೆಯ ದಿನದ ಮೌನ , ಕಾಲೇಜ್ ಗೆ ಇಬ್ಬರು ಬೇರೆ ಕಡೆ ಸೇರಿದಾಗ ಬರೆದ ಲೆಟರ್ ಗಳು, ರಿಪ್ಲೈ ಮಾಡ್ಲಿಕ್ಕೆ ಆಗದೆ ಹೋದಾಗ ಕಳ್ಸೋ ಸಾರೀ ಕಾರ್ಡ್ಸ್ ಹೀಗೆ ಸುಮಾರು ನೆನಪುಗಳು ಫಿಲಂ ಸೀನ್ ಗಳ ಹಾಗೆ ಓಡ್ತಾ ಇವೆ. ಬೆಳಿಗ್ಗೆ ಎದ್ದು, ಇಸ್ತ್ರಿ ಮಾಡಿದ ಸೀರೆ ಉಟ್ಟು, ದೀಪಾವಳಿ ದಿನ ಕೊಂಡ ಹೊಸ ಸರ ಹಾಕಿ ಅಮ್ಮನ ಕಾಮೆಂಟ್ಸ್ ಕೇಳಿ ಎಲ್ಲ ಸರಿಯಾಗಿದೆ ಅಂದ ಮೇಲೆ ನಾನು , ರಮೇಶ್ ಹಾಗು ನನ್ನ ಪಪ್ಪಾ ಕಾರ್ ಏರಿದ್ವಿ. ಮದ್ವೆ ಇದ್ದಿದ್ದು ಮಡಿಕೇರಿ ಲಿ. ನಾನು 6 ರಿಂದ 12 ನೆ ತರಗತಿ ವರೆಗೆ ಓದಿದ್ದು ಮಡಿಕೇರಿ ಹತ್ತಿರ ಗಾಳಿಬೀಡಿನಲ್ಲಿರುವ ನವೋದಯ ಶಾಲೆಯಲ್ಲಿ. ಅಲ್ಲೇ ನನ್ನ ಮತ್ತು ಅನಿತಾ ಪರಿಚಯವಾಗಿದ್ದು. ನಾವು ಸೋಮವಾರಪೇಟೆ ರೋಡ್ ಮೂಲಕ ಹೊರಟ್ವಿ. ನಾನು ಸ್ಕೂಲ್ ಬಿಟ್ಟ ಮೇಲೆ ಇದೆ ಮೊದಲ ಬಾರಿಗೆ ಮಡಿಕೇರಿ ಗೆ ಹೋಗ್ತಾ ಇರೋದು ಅಂತ ಆಗ ಅನ್ನಿಸ್ತು....