Anitha!!!!

ಬೆಳಿಗ್ಗೆ ಎಳುವುದಕ್ಕಿಂತ  ಮುಂಚೆಯಿಂದ ಹಳೆ ನೆನಪುಗಳು ಕಣ್ ಮುಂದೆ ಬರ್ತಾ ಇವೆ.  ಇವತ್ತು ನನ್ನ ಕ್ಲೋಸ್ ಫ್ರೆಂಡ್  ಮದ್ವೆ.  ಅವಳನ್ನು ನಾನು ಮೊದಲ ಸಾರಿ ಮಾತಾಡಿದ್ದು, ಜೊತೆಯಲ್ಲಿ  ಹಾಸ್ಟೆಲ್ನಲ್ಲಿ  ಓದಿದ್ದು ,  ಮದ್ಯ  ಮದ್ಯ ಆಗೋ ಸಣ್ಣ ಪುಟ್ಟ ಜಗಳ ,   ನಕ್ಕು ನಕ್ಕು ಕಣ್ಣೀರು ಬಂದಂತ ಹಲವು  ಸನ್ನಿವೇಶ , ಹಾಸ್ಟೆಲ್ ನ ಕೊನೆಯ ದಿನದ ಮೌನ , ಕಾಲೇಜ್ ಗೆ ಇಬ್ಬರು ಬೇರೆ ಕಡೆ ಸೇರಿದಾಗ  ಬರೆದ ಲೆಟರ್ ಗಳು, ರಿಪ್ಲೈ ಮಾಡ್ಲಿಕ್ಕೆ  ಆಗದೆ ಹೋದಾಗ ಕಳ್ಸೋ ಸಾರೀ ಕಾರ್ಡ್ಸ್ ಹೀಗೆ ಸುಮಾರು ನೆನಪುಗಳು  ಫಿಲಂ ಸೀನ್ ಗಳ ಹಾಗೆ ಓಡ್ತಾ ಇವೆ.

ಬೆಳಿಗ್ಗೆ ಎದ್ದು, ಇಸ್ತ್ರಿ ಮಾಡಿದ ಸೀರೆ ಉಟ್ಟು, ದೀಪಾವಳಿ ದಿನ ಕೊಂಡ ಹೊಸ ಸರ ಹಾಕಿ ಅಮ್ಮನ ಕಾಮೆಂಟ್ಸ್ ಕೇಳಿ  ಎಲ್ಲ ಸರಿಯಾಗಿದೆ ಅಂದ ಮೇಲೆ ನಾನು , ರಮೇಶ್  ಹಾಗು ನನ್ನ ಪಪ್ಪಾ ಕಾರ್ ಏರಿದ್ವಿ. ಮದ್ವೆ ಇದ್ದಿದ್ದು ಮಡಿಕೇರಿ ಲಿ. ನಾನು 6 ರಿಂದ 12 ನೆ ತರಗತಿ ವರೆಗೆ ಓದಿದ್ದು ಮಡಿಕೇರಿ ಹತ್ತಿರ ಗಾಳಿಬೀಡಿನಲ್ಲಿರುವ  ನವೋದಯ ಶಾಲೆಯಲ್ಲಿ. ಅಲ್ಲೇ ನನ್ನ ಮತ್ತು ಅನಿತಾ ಪರಿಚಯವಾಗಿದ್ದು. ನಾವು ಸೋಮವಾರಪೇಟೆ ರೋಡ್ ಮೂಲಕ ಹೊರಟ್ವಿ. ನಾನು ಸ್ಕೂಲ್ ಬಿಟ್ಟ ಮೇಲೆ ಇದೆ ಮೊದಲ ಬಾರಿಗೆ ಮಡಿಕೇರಿ ಗೆ ಹೋಗ್ತಾ ಇರೋದು ಅಂತ ಆಗ ಅನ್ನಿಸ್ತು. ಮಾದಪುರ ತಲುಪುವ ವರೆಗೆ ಏನು ಅನ್ನಿಸಲಿಲ್ಲ , ಅದು ಬಿಟ್ಟ ಮೇಲೆ ಏನೋ ಒಂಥರಾ ಅನ್ನಿಸಲಿಕ್ಕೆ ಶುರುವಾಯ್ತು. ಆಹ್ ! ಗೊತ್ತಾಯ್ತು ! ರಜೆಯಿಂದ ಮತ್ತೆ ಶಾಲೆಗೆ ಹೋಗುವಾಗ ಆಗ್ತಾ ಇದ್ದ ಏನೋ ಒಂಥರದ ದುಃಖ. ಇನ್ನೇನು ಮಡಿಕೇರಿ ತಲುಪಬೇಕು , ಅಷ್ಟು ದೂರದಿಂದಲೇ ಕಾಣಿಸ್ತ ಇರೋ ಮಂಜು ಇನ್ನಷ್ಟು  ನೆನಪುಗಳನ್ನ ಕೆದಕಿತ್ತು. ಅರುಣ್ ಬುಕ್ ಸ್ಟೋರ್ , ಹಾಲ್ ಮಾರ್ಕ್ಸ್  ಗ್ರೀಟಿಂಗ್ಸ್ ಸ್ಟೋರ್ , ಪ್ರೈವೇಟ್ ಬಸ್ ಸ್ಟಾಂಡ್ ನಲ್ಲಿ  ಅಶೋಕ  ಬಸ್ ಗೆ ವೈಟ್  ಮಾಡಿದ್ದು - ಬಸ್ ಬರ್ದೇ ಇರ್ಲಿ , ಮತ್ತೆ ಊರಿಗೆ ಹೋಗೋ ಆಗೆ ಆಗ್ಲಿ ಅಂತ ಮನಸಲ್ಲೇ ಅನ್ಕೊಂಡಿದ್ದು  ಹೀಗೆ ಮತ್ತಷ್ಟು ನೆನಪುಗಳು ಸುರಳಿಯಾಗಿ ಸುತ್ತುಕೊಳ್ತಾ  ಇವೆ.

ಅನಿತಾ ಬಗ್ಗೆ ಹೇಗೆ ಹೇಳಲಿ . ಈಗಂತೂ ನನಗಿಂತ  ನನ್ನ ಅಮ್ಮನ ಕ್ಲೋಸ್ ಫ್ರೆಂಡ್ ಆಗಿದ್ದಾಳೆ ಅವ್ಳು. ನಂಗೆ ಕಾಲ್ ಮಾಡ್ತಾಳೋ ಬಿಡ್ತಾಳೋ , ಆದ್ರೆ  ನನ್ನ ಅಮ್ಮಂಗೆ ಕಾಲ್ ಮಾಡಿ ಎಲ್ಲ ಡೀಟೇಲ್ಸ್  ನನ್ನ ಸೀಕ್ರೆಟ್ಸ್ ಎಲ್ಲಾನು ಬಿಚ್ಚಿಡ್ತಾಳೆ. ಅವಳಿಗೆ ನನ್ನ ಮನೆಯವರೆಲ್ಲ ಹಳಬರು. ಅದು ಅಲ್ದೆ ನನ್ನ ದೊಡ್ಡಪ್ಪ , ದೊಡ್ಡಮ್ಮ , ಚಿಕ್ಕಪ್ಪ, ಆಂಟಿ , ನನ್ನ ಕಸಿನ್ಸ್ ಗೆಲ್ಲ  ಇವಳ ಸಿಂಪ್ಲಿಸಿಟಿ ತುಂಬ ಹಿಡಿಸ್ಬಿಟ್ಟಿದೆ. ಅವಳ ಒಂದು ವಿಶೇಷ ಗುಣ ಅಂದ್ರೆ ಎಲ್ಲರಿಗು ಕಾಲ್ ಮಾಡಿ contancts ನ renew ಮಾಡ್ಕೊತಾಳೆ. ನನ್ನ engagement , ಮದ್ವೆ ಗೆಲ್ಲ  ಇವಳ presence, ರಜೆಯಲ್ಲಿ ನಮ್ಮ ಮನೆಗೆ ಬಂದಿದ್ದರಿಂದ ಎಲ್ಲರಿಗು ಇವಳು ಪರಿಚಿತ. ಶಾಲೆಯಲ್ಲಿ ಮೊದಲ ದಿನ  ಸುಮ್ನೆ ಪರಿಚಯದ ಸಲುವಾಗಿ ಹಾಗೆ ಮಾತುಕತೆ  ಶುರು ಆಯಿತು. ಎಲ್ಲೋ ಏನೋ  ನಮ್ಮಿಬ್ಬಿರ  wavelenght match ಆಗಿತ್ತು. ಊಟಕ್ಕೆ dining ಹಾಲ್ ಗೆ ಹೋಗೋದು, ಬಟ್ಟೆ ಒಗಿಲಿಕ್ಕೆ , ಕ್ಲಾಸ್ ಗೆ ಎಲ್ಲ ಕಡೆ ಅವಳೇ ನನ್ನ ಜೊತೆ.ಬೇರೆ ಹುಡುಗಿಯರು ಇಬ್ಬರಿಗೂ ಪರಿಚಯವಿತ್ತು , ಎಲ್ಲರೊಂದಿಗೆ ಚೆನ್ನಾಗೆ ಹರಟ್ತಾ ಇದ್ವಿ ಆದರೂ, ನನ್ನೆಲ್ಲ ಸೀಕ್ರೆಟ್ ಗಳ owner ಅನಿತಾ  ಮಾತ್ರ. ನನ್ನ ಕೈ fracture ಆಗಿದ್ಡಾಗ ನನ್ನ ಬಟ್ಟೆ  ಹಾಗು ಶೂ ಗಳನ್ನೂ ಒಗೆಯೋದು ಇವಳ ಪಾಲು. ಪೇರೆಂಟ್ಸ್ ತರೋ ತಿಂಡಿಯಲ್ಲಿ ಇಬ್ಬರದು ಸಮಪಾಲು. ಆದ್ರೆ ಚಿಕ್ಕ ಚಿಕ್ಕ ವಿಷಯಕ್ಕೆ  ಇಬ್ಬರೂ ಜಗಳ ಆಡ್ತಾ  ಇದ್ವಿ.ಅಷ್ಟೇ ಬೇಗ fevicol ಆಗ್ತಿದ್ವಿ. PUC  ನಲ್ಲಿ  ನಾನು sciene , ಅವ್ಳು vocational. ನನ್ನ ಲ್ಯಾಬ್ ರೆಕಾರ್ಡ್ಸ್ ಇರೋ ಎಲ್ಲಾ  ಚಿತ್ರಗಳ  credits ಅವಳಿಗೆ ಸೇರಬೇಕು. ಹಾಗು ಹೀಗೂ ನವೋದಯ ಬಿಡುವ ಸಮಯ ಬಂದಿತ್ತು. ನಮ್ಮಿಬ್ಬರಲ್ಲೂ ಗಾಡವಾದ ಮೌನ ಶುರುವಾಗಿತ್ತು. ಆದರೆ ಒಂದು ಸಮಾಧಾನದ ವಿಷ್ಯ  ಅಂದ್ರೆ  ಇಬ್ರು ಮೈಸೂರ್  ಗೆ ಬಂದ್ವಿ ಕಾಲೇಜ್ ಗೋಸ್ಕರ. ಅವ್ಳು  ನರ್ಸಿಂಗ್ ಜಾಯಿನ್ ಆದ್ಲು. ಆದ್ರೆ ಅವಳು ಅಲ್ಲೇ ಇರೋ ಹಾಸ್ಟೆಲ್ ನಲ್ಲಿ  ಇರಬೇಕಿತ್ತು . ಆದರೆ, ನಮ್ಮ ಭೇಟಿ ಸರಾಗವಾಗಿ ಸಾಗ್ತಾ ಇತ್ತು. ಕೆಲಸಕ್ಕೋಸ್ಕರ  ಇಬ್ರು ಬೆಂಗಳೂರಿಗೆ ಬಂದ್ವಿ. ಅಲ್ಲೂ ಕೂಡ ನಾವು ಪ್ರತಿ ಚಿಕ್ಕ ಪುಟ್ಟ ವಿಷಯಗಳನ್ನ exchange ಮಾಡ್ಕೋತಾ ಇದ್ವಿ. ಸ್ಕೂಲ್ ಬಿಟ್ಟು ಸುಮಾರು ವರ್ಷ ಆದ್ರೂ, ಅವ್ಳು ಮಾತ್ರ ಪ್ರತಿ ಸಲ ಕಾಲ್ ಮಾಡಿದಾಗಲೂ ಸ್ಕೂಲ್ ನ ಯವದದ್ರೊಂದು ಘಟನೆ ನ ನೆನಪು ಮಾಡ್ಕೊಡ್ತಾಳೆ.ನನ್ನ ಬೇರೆ ಫ್ರೆಂಡ್ಸ್ ಎಲ್ಲ ಈಗ ಅವಳ ಫ್ರೆಂಡ್ಸ್ ಆಗ್ಬಿಟ್ಟಿ ದಾರೆ.

ಅಂತು ಇಂತು ಸಣ್ಣ ಪುಟ್ಟ  ಗಲ್ಲಿಗಳನ್ನ ದಾಟಿ  ಕಲ್ಯಾಣ ಮಂಟಪಕ್ಕೆ ಬಂದ್ವಿ. ಅವಳ ಅಮ್ಮ ಸಿಕ್ಕಿದರು. ಎಲ್ಲಿದಾಳೆ ಅವ್ಳು ಅಂದೆ. ಫಸ್ಟ್  ಒಳಗೆ ಹೋಗು , ನೀನು  ಬರಲ್ಲ ಅಂತ  ಹೇಳಿದ್ದಕ್ಕೆ ಬೇಜಾರು ಮಾಡ್ಕೊತ ಇದ್ಲು ಅಂದ್ರು. ಮದ್ವೆಗೆ ಎರಡು ದಿನದ ಮುಂಚೆ ಕಾಲ್  ಮಾಡಿದ್ಲು , ಕಾಲು ಎಳೆಯೋಕೆ ಅಂತ ಬರಕಾಗಲ್ಲ , important ಕೆಲಸ ಇದೆ ಅಂತ ಸುಳ್ಳು ಹೇಳಿದ್ದೆ. ಒಳಗೆ ಹೋದೆ, ಮಂಟಪದ ಸುತ್ತ ಹೆಂಗಸರು ಏನೋ ಶಾಸ್ತ್ರ ಮಾಡ್ತಾ ಇದ್ರು, ಅವ್ಳು ಕಾಣಿಸಲೇ ಇಲ್ಲ. ನನ್ನ  ಪತಿರಾಯ ಹಾಗು ಅಪ್ಪ ಆಗ್ಲೇ ಹೋಗಿ ಚೇರ್  ಮೇಲೆ ಕೂತಿದ್ದಾರೆ , ನನ್ನಿನ್ನೂ ಸ್ಟೇಜ್ ಹತ್ರ ಹಾಗೆ ನಿಂತಿದೀನಿ. ಸುತ್ತುವರೆದ ಹೆಂಗಸರ ಮದ್ಯ ಒಂದು ಕಿಂಡಿಯಲಿ ಅವಳ ಮುಖ ನೋಡ್ದೆ, ಅವ್ಳು ಏನೋ ನೋಡ್ತಾ  ನನ್ನ ಹಾಗೆ ದಿಟ್ಟಿಸಿದಳು. ನಾನು ಅವಳನ್ನು ನೋಡಿ ಆರೇಳು ತಿಂಗಳಾಗಿತ್ತು. ಇಬ್ರು ಹಲ್ಕಿರಿದು  ದೊಡ್ಡದಾಗಿ ನಕ್ವಿ. ಆಮೇಲೆ ಸುಮ್ನೆ ಹೋಗಿ ಚೇರ್ ಮೇಲೆ ಕೂತೆ. ಒಂದಾದ ಮೇಲೆ ಒಂದು ಶಾಸ್ತ್ರ, ಅವಳನ್ನ ಮಾತಾಡಿಸಲಿಕ್ಕೆ ಆಗ್ತಾನೆ ಇಲ್ಲ. ಅಂತು ಇಂತು ಮೇಲೆದ್ದಳು, reception ಗೆ ಡ್ರೆಸ್ ಚೇಂಜ್ ಮಾಡ್ಲಿಕ್ಕೆ ರೂಮ್ ಗೆ  ಹೊರಡ್ತಾ ಇದ್ಲು. ಇದೆ ಸರಿಯಾದಸಮಯಅಂತ ಎದ್ದು ಹೊರಟೆ. ಖುಷಿ ಪಡ್ತಾಳೆ ಮದ್ವೆಗೆ ಬಂದಿದ್ದಕ್ಕೆ ಅನ್ಕೊಂಡ್ರೆ  , ಏ  ಕಪಿ! ಯಾಕೆ ಲೇಟ್  ಅಂತಾ ನಂಗೆ ಕ್ಲಾಸ್. ಇಬ್ಬರ ಮಾತು ಮುಗಿತಾನೆ ಇಲ್ಲ, ಲೇಟ್  ಆಗತ್ತೆ ಅಂತ ಎಲ್ಲ ಅರ್ಜೆಂಟ್  ಮಾಡ್ತಾ ಇದಾರೆ, ಇನ್ನು ಇಲ್ಲೇ ಇದ್ರೆ ಒದೆ  ಗ್ಯಾರಂಟಿ ಅಂತ ವಾಪಾಸ್ ನನ್ನ ಜಾಗಕ್ಕೆ ಬಂದು ಕೂತೆ. ಮದುವೆ ಆಯ್ತು . ಅದ್ದೂರಿ ಭೋಜನ ಕೂಡ ಜೊತೆಗೆ.

ಗಂಟೆ 3 ಆಯಿತು , ವಾಪಾಸ್ ಬೆಂಗಳೂರಿಗೆ ಹೋಗ್ಬೇಕು. ನಂಗಂತೂ  ಅವಳ ಜೊತೆ ಮಾತಾಡ್ಲಿಕ್ಕೆ ಬೇಜಾನ್ ವಿಷಯಗಳು ಇದ್ವು. ಅವಳಿಗೂ ಹಾಗೇ ಅನ್ನಿಸ್ತಾ ಇದೆ ಅಂತ ಅವಳು ಮುಖ ನೋಡ್ದಾಗ ಅನ್ನಿಸ್ತು. ಆದ್ರೆ ಸಮಯ ಸಂದರ್ಭ ಅದಕ್ಕೆ ಪೂರಕ ಆಗಿರಲಿಲ್ಲ. ನವ ದಂಪತಿಗಳಿಗೆ ಶುಭಾಶಯ ಹೇಳಿ, ಮಾಡುವೆ ಮಂಟಪ ದಿಂದ  ಹೊರಟ್ವಿ. ದಾರಿಯುದ್ದಕ್ಕೂ ಅವಳ ಬಗ್ಗೆ ಹೇಳ್ತಾ ಇದ್ದೆ. ರಮೇಶ್ ಗೆ ಮತ್ತೆ ನನ್ನ ಅಪ್ಪಂಗೆ ಏನು ಅನ್ನಿಸ್ತೋ.. ನಾನು ಹೇಳಿದ್ದೆಲ್ಲ ಕೇಳ್ತಾ ಇದ್ರೂ.. ಯಾರು ಏನು ಹೇಳಲಿಲ್ಲ. ಕುಶಾಲನಗರದಲ್ಲಿ ಪಪ್ಪ ನ  ಡ್ರಾಪ್  ಮಾಡಿ ಬೆಂಗಳೂರಿಗೆ ಹೊರಟ್ವಿ.

ನನ್ನ  ಪ್ರೀತಿಯ ಗೆಳತಿಗೆ ಹೊಸ ಜೀವನ ಎಲ್ಲ ಸುಖ ಸಂತೋಷ ಗಳನ್ನ ತರಲಿ. ಅವಳು ಪಟ್ಟ ಕಷ್ಟಗಳು ಮರುಕಳಿಸದಿರಲಿ, ಅವಳ ಎಲ್ಲ ಇಷ್ಟಗಳು ಈಡೇರಲಿ.

Comments

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020