ಅವಳು!!!

ಓಡಿ ಆಡೋ ಹೆಣ್ಣು ಮಗು ಮುಖ ಬಾಡಿ ಏಕೆ ನಿಂತಿಹುದೋ !!!
ಕುಣಿದಾಡಿ ಆಡೋ ವೇಳೆಯಲ್ಲಿ ಹಲ ಭಾರಗಳ ಹೊತ್ತಿಹಳೊ !!

ತಾಯಿ ಜೊತೆ ಮನೆ ಕೆಲಸ , ಮಗಳಿಗೆ ಪ್ರತಿ ದಿವಸ ,
ರೋಗದಿ ಮಲಗಿದರೆ ಪಕ್ಕದಲ್ಲಿ ಪ್ರತಿ ನಿಮಿಷ!

ಬಾಗಿಲಿಗೆ ನೀರು ಹಾಕಿ, ಹಸುಗಳಿಗೆ ಹುಲ್ಲು ಹಾಕಿ,
ಪಾತ್ರೆ ತೊಳೆವ , ಬಟ್ಟೆ ಒಗೆವ -ಹುಟ್ಟಿಸಿದನು ಬ್ರಹ್ಮ ಇವಳನು !!

ಈ ಎಳೆ ಮಲ್ಲಿಗೆ ಬಾಲೆ, ಹಲ ಹೊರೆಯು ಇವಳ ಮೇಲೆ ,
ಅದ ನೆನೆದು ನೆನೆದು ಕೊರಗಿ ಕೊರಗಿ ಮನಸು ಮುಳ್ಳಿನ ಮಾಲೆ!!

ಹಾಗೆ ಸುಮ್ಮನೆ ಮೇಲಿನ ಸಾಲುಗಳು ನೆನಪಾದವು!!! ನಾನು ಶಾಲೆಯಲ್ಲಿ ಓದುವಾಗ ಹಾಡಿದ ಹಾಡಿದು !! ಆಗ ಸುಮ್ಮನೆ ಬಾಯಿ ಪಾಠ ಮಾಡಿ ಹೇಳಿದ್ದೆ , ಯಾಕೋ ಇವತ್ತು ಗುನುಗುವಾಗ ನಿಜವಾದ ಅರ್ಥ ಅರಿವಾಯ್ತು !!

ಮನೆಯಲ್ಲಿ ಯಾವುದೇ ಕೆಲಸಕ್ಕೆ ಅವಳು ಬೇಕು !! ಬೆಳಿಗ್ಗೆ ಎದ್ದೊಡನೆ ಹೀರುವ ಚಹಾ ಅವಳೇ ಮಾಡಿಡಬೇಕು! ನಂತರದ ತಿಂಡಿಯು ಅವಳೇ ಮಾಡಬೇಕು! ಜೊತೆಗೆ ಮಗುವಿದ್ದರೆ , ಅದಕ್ಕೂ ಅವಳ ಕೈಯಾರ ಮಾಡುಣಿಸಬೇಕು!! ಜೊತೆಗೆ ಅವಳು ಹೊರಗೆ ದುಡಿಯುವುದಾದರೆ ಮದ್ಯಾಹ್ನಕ್ಕೂ ಬೇಯಿಸಬೇಕು !! ಮನೆಯವರ ಇಷ್ಟಗಳನ್ನು ಪರಿಗಣಿಸಬೇಕು, ಅವರಿಗನುಗುಣವಾಗಿ  ಅವಳು ಕೆಲಸ ಮಾಡಬೇಕು !! ಅಳುವ ಮಗುವನ್ನು ಸಂತೈಸಿ ಮಲಗಿಸಬೇಕು , ನಂತರ ಆಫೀಸ್ ಗೆ ಹೊರಡಬೇಕು! ಆಫೀಸ್ ನಲ್ಲಿರೋ  ಭಾರಗಳನ್ನೂ ಸರಿದೂಗಿಸಬೇಕು!! ಮನೆಗೆ ಸಂಜೆ ವಾಪಾಸಾದರೆ ಯಥಾ ಪ್ರಕಾರದ ಕೆಲಸ ಅವಳಿಗೆ !! ಅವಳೇನಾದರೂ ಯಂತ್ರವೇ?

 ಅವಳಿಗೇನು ಬೇಕು??? ಈ ಪ್ರಶ್ನೆ ಯಾಕೆ ಯಾರಿಗೂ ತೋಚದು !!!

ಮೇಲಿನ ಕವಿತೆಯ ಸಾಲುಗಳನ್ನು ಈಗಿನ ಕಾಲಕ್ಕೆ ಅನುಕರಿಸಿದರೆ ಹೇಗಿರಬಹುದು..

ಓಡಾಡೋ working women ಯಾಕೆ stress  ಆಗಿರುವಳೋ !!
ಆರಾಮಾಗಿ ಇರೋದು ಬಿಟ್ಟು  ವರ್ಕ್-ಲೈಫ್ balance  ಬಗ್ಗೆ ತುಂಬ ಚಿಂತೆ ಮಾಡಿಹಳೋ!!

ಬೆಳಿಗ್ಗಿನ ಮನೆ ಕೆಲಸ, ಆಫೀಸ್  ಅಲ್ಲಿ call  ಪ್ರತಿ ನಿಮಿಷ !!
deadLine  ಮುಗಿದರೆ  ಮ್ಯಾನೇಜರ್ ಅರಚಾಟ!!

ಆಫೀಸ್ ಅಲ್ಲಿ mail ಗಳಿಗೆ reply  ಮಾಡಿ, issues  close  ಮಾಡಿ ,
ಮನೆಗೆ ಮದ್ಯ call ಮಾಡಿ , ಮಗುವನ್ನು ವಿಚಾರಿಸಿ,
ವಾಪಾಸ್  ಬಂದು ಪಾತ್ರೆ ತೊಳೆವ, ಬಟ್ಟೆ ಒಗೆವ
ಮಗುವಿಗೆ ತಿನಿಸಿ , ಅಡುಗೆ ಮಾಡಿ, ತಾನು ಕೊನೆಗೆ ತಿಂದು ,
ಮಲಗುವಾಗ mail ಮಾಡಿ , ನಾಳೆಗೆ ಮಾಡುವುದೇನೆಂದು ಪಟ್ಟಿಮಾಡಿ
ನಿದ್ದೆಯಲ್ಲೂ ಆಫೀಸ್  issue ಬಗ್ಗೆ ಕನಸು ಕಾಣುವ
 - ಹುಟ್ಟಿಸಿದನು ಬ್ರಹ್ಮ ಇವಳನು !!!

ಈ multi talented ಬಾಲೆ , ಹಲ task ಇವಳ ಮೇಲೆ
ಆದರೂ ಹೇಗೋ ಸಂಬಾಲಿಸುವಳು - ಇವಳು  ಸೂಪರ್ Women  ಅಲ್ಲವೇನು?

ಅವಳ ಪ್ರಪಂಚವೇ ಹಾಗೆ !! ತಾನು, ತನ್ನವರು , ಅಡುಗೆ , ಮನೆ ಕೆಲಸ, ಗದ್ದೆ , ತೋಟ   ಇತ್ಯಾದಿ ..  ಅಮ್ಮ ಹೇಗೆ ಇಷ್ಟೆಲ್ಲ ಕೆಲಸ ಮಾಡ್ತಾಳೋ ಎಂದು ಅಚ್ಚರಿ ಆಗ್ತಾ ಇತ್ತು!! ನಾನೇನಾದ್ರು ನಿನ್ನ ಜಾಗದಲ್ಲಿ ಇದ್ದಿದ್ದರೆ ಸುಮ್ನೆ ಮಲಗುತ್ತ ಇದ್ದೆ ಎಂದು ಹೇಳುತ್ತಿದ್ದ ನಾನು , ನನಗೆ ಗೊತ್ತಾಗದಂತೆ ಅವಳ ದಾರಿಯಲ್ಲೇ ಸಾಗುತ್ತಿದ್ದೇನೆ !! ಬೇಜಾರೇನು ಇಲ್ಲ , ಗರ್ವ ಇದೆ!!
ನಾನೀಗ ಅಬಲೆಯಲ್ಲ , ನನ್ನಲ್ಲಿ ಎಲ್ಲವನ್ನೂ ಸರಿದೂಗಿಸುವ ಕಲೆ ಕರತಲಾಮಲಕವಾಗಿದೆ !! ಆಫೀಸ್ ಅಲ್ಲಿ mouse ಹಿಡಿಯುವ ನನಗೆ ಮನೆಯಲ್ಲಿ ಸೌಟು ಹಿಡಿಯಲು ಕಿಂಚಿತ್ತೂ ಬೇಸರವಿಲ್ಲ !! ಅಮ್ಮನೊಂದಿಗೆ ಹಠ ಮಾಡುತ್ತಿದ್ದ ನಾನು , ನನ್ನ ಮಗುವಿನ ಹಠಕ್ಕೆ ಮದ್ದು ಕಂಡುಕೊಂಡಿದ್ದೇನೆ!!! ಎಲ್ಲದಕ್ಕೂ ಮೂಗುಮುರಿಯುವ  ಅತ್ತೆ ಮಾವನಿಗೆ ನನ್ನ ಅಡುಗೆ ರಾಮಬಾಣವಾಗಿದೆ!!
ಆಫೀಸ್ ನಲ್ಲಿ  clients ಗೆ presentation  ಕೊಟ್ಟರೂ , ಮನೆಯಲ್ಲಿ ಬಟ್ಟೆ ಒಗೆಯುವುದು ಬಲ್ಲೆ !!  ಎಷ್ಟೇ technology ಮುಂದುವರೆದರೂ , ನನ್ನ ಬೇರುಗಳು ನನ್ನ ಸಂಸ್ಕಾರ ಮರೆಸಲಿಲ್ಲ !! paasta  ಮಾಡಿದರೂ - ಕ್ಯಾರಟ್ ಹಲ್ವ ಮರೆಯಲಿಲ್ಲ !!
ಕಾಣದ ದೇವರಿಗೆ ಕೈ ಮುಗಿದರೂ, ನನ್ನ ಕೆಲಸದಲ್ಲಿ ಭಗವಂತನ ಕಾಣಬಲ್ಲೆ !! ಎಷ್ಟೇ ಕೆಲಸ ಮಾಡಿ ದಣಿದರೂ ಇನ್ನು ಕಲಿಯಬೇಕೆಂಬ ಹುಮ್ಮಸ್ಸಿದೆ!! ಜನ ಬೆನ್ನ ಹಿಂದೆ ಎಷ್ಟೇ ಜರಿದರೂ, ಅವರ ಮಾತಿಗೆ ಸೊಪ್ಪು ಹಾಕದೆ ಮುಂದುವರಿಯುವ ಛಲ ನನ್ನಲ್ಲಿದೆ !!

ಎಷ್ಟೇ ಒಳ್ಳೆಯ ಮನೋಭಾವವಿದ್ದರೂ, ಅಷ್ಟು ಕೆಲಸ ಮಾಡಿದರೂ  - ಅವಳಿಗೆ ಏನೋ ಕೊರತೆ!!
ಸ್ವತಂತ್ರವಾಗಿ ಉಸಿರಾಡಲು ಅವಳಿಗೆ ಅವಳದೇ ಆದ ಜಾಗ ಬೇಕು!!ಅವಳು ಸ್ವಂತ ನಿರ್ಧಾರ ತೆಗೆದುಕೊಳ್ಳುವಾಗ ಕಾಲೆಳೆಯುವ ಬದಲು ಅವಳ ಬೆನ್ನು ತಟ್ಟುವ ಜನ ಬೇಕು!! ಅವಳು ಏನಾದರೂ ಹೊಸತನ್ನು ಮಾಡಿದರೆ ಇನ್ನೂ ಚೆನ್ನಾಗಿ ಮಾಡುವ ಕಲೆ ಇದೆ ಎಂದು ಪ್ರೋತ್ಸಾಹ ಮಾಡುವ ದ್ವನಿ ಬೇಕು!! ಅವಳಿಗೆ ಇಷ್ಟವಿರುವ ಕೆಲಸ ಮಾಡಲು ಹುರಿದುಂಬಿಸಬೇಕು!! ತೊಳೆಯುವ ಪಾತ್ರೆ ಬಿದ್ದಿರಲಿ, ಇವತ್ತಿನ ಕಾಫಿ ಗೆ ರಜೆಯಿರಲಿ, ಮನೆ ಕಸವನ್ನು ಸ್ವಲ್ಪ ಹೊತ್ತಿನ ನಂತರವೂ ಸ್ವಚ್ಚ ಮಾಡಬಹುದು, ಬಟ್ಟೆಗಳಿಗೆ ಸದ್ಯಕ್ಕೆ ಮಡಿಯ ಅಗತ್ಯವಿಲ್ಲ - ತದ ನಂತರವೂ ಒಗೆಯಬಹುದು, ನೀನು ಸ್ವಲ್ಪ ಹೊತ್ತು ವಿಶ್ರಮಿಸು ಎಂದು ಹೇಳುವ ಆತ್ಮ ಬೇಕು!! ಪ್ರಪಂಚದಲ್ಲೇ ಅವಳಿಗೆ ಯಾರೂ ಸಾಟಿಯಿಲ್ಲ ಎಂದು ಒತ್ತಿ ಹೇಳುವ ಶುಭ್ರ ಮನಸ್ಸು ಬೇಕು!!

ಅವಳು - ನಿಮ್ಮ ಅಕ್ಕ ಇರಬಹುದು, ತಂಗಿ ಇರಬಹುದು , ಮಡದಿ ಇರಬಹುದು , ತಾಯಿ ಇರಬಹದು , ಮಗಳು ಇರಬಹುದು,
ಅತ್ತೆ  ಇರಬಹುದು ಮತ್ತು ಯಾರಾದರೂ ಗೊತ್ತಿರುವರು ಇರಬಹುದು. ಪ್ರೋತ್ರ್ಸಾಹಿಸುವ ಒಂದು ಮಾತು ಅವಳಿಗೆ ಒಂದು ವಾರದ ಶಕ್ತಿ ತುಂಬಬಹುದು!! ಅವಳಿಗಾಗಿ ದ್ವನಿ ಎತ್ತುವಿರಿ ತಾನೇ ???!!!!





Comments

  1. Great salute to all mothers and Working Womens :)
    Thanks akka to pen it down their feelings.

    ReplyDelete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020