ಕಾಣೆಯಾಗಿದೆ ಮನೆ!!!
ಬೆಂಗಳೂರಿಗೆ ಬಂದು ಸುಮಾರು ಒಂಬತ್ತು ವರ್ಷಗಳಾದರೂ, ನಮ್ಮ ಮನೆ ಎಂದು ಯಾರಾದರೂ ಅಂದರೆ ಅದು ನಮ್ಮ ಊರಲ್ಲಿರುವ ಮನೆ ಅನ್ನಿಸುವುದೇ ವಿನಹ ನಾವು ಸದ್ಯಕ್ಕೆ ಇರುವ ಬೆಂಗಳೂರಿನ ಮನೆ ಅನಿಸುವುದಿಲ್ಲ. ನಮ್ಮ ಸುಪ್ತ ಮನಸ್ಸಿಗೆ ಮನೆ ಎಂದರೆ ಹೀಗೆ ಇರಬೇಕು, ಇಲ್ಲೇ ಇರಬೇಕು , ಇಷ್ಟೇ ಇರಬೇಕು ಎನ್ನುವ ವಿಚಾರವು ನಮಗೆ ಗೊತ್ತಿಲ್ಲದೇ ಬೇರೂರಿ ಕುಳಿತಿದೆ. ಹೀಗೆ ಯೋಚನೆ ಮಾಡುತ್ತಾ , ಮೊದಲು ಈ ನಗರಿಗೆ ಬಂದವರು, ಅದರಲ್ಲೂ ಬೇರೆ ಊರಿನಿಂದ ಬಂದ ಹುಡುಗಿಯರು ಉಳಿಯಲು ಆರಿಸುವುದು ನಾಯಿ ಕೊಡೆಯಂತೆ ಗಲ್ಲಿಗೊಂದರಂತೆ ಹರಡಿರುವ ಪಿ ಜಿ ಗಳನ್ನು. ಇತ್ತೀಚಿಗೆ ಸಲ್ಪ ಅತಿ ಎನಿಸುವಷ್ಟು ಪಿ ಜಿ ಗಳು ಶುರುವಾಗಿ, ಮನೆಗಳೇ ಕಾಣೆಯಾದಂತಾಗಿವೆ!!! ಯಾಕೋ ಮೊನ್ನೆ ಬಸ್ ಅಲಿ ಆಫೀಸ್ ಗೆ ಹೋಗುವಾಗ ಮೂರು ನಾಲ್ಕು ಹುಡುಗಿಯರು ಅವರು ಉಳಿದುಕೊಂಡಿರುವ ಪಿ ಜಿ ಬಗ್ಗೆ ಪಿಸುಗುಡುತ್ತಿರುವಾಗ, ನನಗೂ ನಾನಿದ್ದ ಪಿ ಜಿ ಯ ನೆನಪಾಯ್ತು !!!
ಆ ವಯಸ್ಸೇ ಹಾಗೋ ಅಥವ ಮೊದಲ ಕೆಲಸ, ಸಂಬಳ ಬರುವುದು ಎನ್ನುವ ಅಹಂ , ಏನೋ ಗೊತ್ತಿಲ್ಲ!! ಈ ಮಾಯಾ ನಗರಿ ಗೆ ಬರುವ ದಿನವು ನಿಗದಿಯಾಗುತ್ತಿದ್ದಂತೆ, ಈ ಜಾಗಕ್ಕೆ ಓಡಿ ಹೋಗಬೇಕೆಂಬ ತೀವ್ರತೆ ಜಾಸ್ತಿ ಆಗುತ್ತದೆ !! ಆದರೆ ಪ್ರತಿ ಸಲ ಹಾಸ್ಟೆಲ್ ಗೆ ಕಳಿಸಲು ಪೋಷಕರು ಬರುತ್ತಿದ್ದರಾದರೂ, ಈ ಬಾರಿ ಅವರು ಬೇಕಾಗುವುದಿಲ್ಲ , ಕಾರಣ ನಮಗೆ ಎಲ್ಲ ಗೊತ್ತಿರುವುದು ಎಂಬ ಜಂಭ ಹಾಗು ಕೈಲಿ ದುಡ್ಡಿರುವ ಗತ್ತು !! ನನ್ನ ಶಾಲೆಯ ಸಹಪಾಟಿಯಿಂದ , ಅವನ ಸಹೋದ್ಯೋಗಿಗಳು ಉಳಿದುಕೊಂಡಿರುವ ಹಲವು ಪಿ ಜಿ ಗಳನ್ನು ಪಟ್ಟಿ ಮಾಡಿ, ಒಂದು ಬಾನುವಾರ ಪಿ ಜಿ ಬೇಟೆ ಶುರುವಾಯಿತು !! ಎಷ್ಟೊಂದು ಆಯ್ಕೆಗಳು!! ಒಬ್ಬರೇ ಇರಲು ಒಂದು ರೂಂ, ಒಂದು ಮನೆಯೊಳಗೆ ಒಂದು ಕುಟುಂಬದೊಂದಿಗೆ ಇರುವಂತಹ ಆಯ್ಕೆ !! ಒಂದು ಅಪಾರ್ಟ್ ಮೆಂಟ್ ತುಂಬ ರೂಮುಗಳು , ಯಾವುದಾದರಲ್ಲಿ ಇರುವಂತಹ ಆಯ್ಕೆ. ಒಂದು ರೂಮಲ್ಲಿ ಇಬ್ಬರು ಇರುವಂತಹ ಅಥವಾ ಮೂವರು ತಪ್ಪಿದ್ದಲ್ಲಿ ನಾಲ್ಕು ಜನ ಇರುವ ಆಯ್ಕೆ, ತಾವೇ ಅಡಿಗೆ ಮಾಡುವುದಾದರೆ ಇನ್ನೊಂದು ಆಯ್ಕೆ, ಊಟವು ಜೊತೆಗೆ ಇರಬೇಕೆಂದರೆ ಮತ್ತೊಂದು ಹೀಗೆ ಹತ್ತು ಹಲವಾರು... ಅಂತು ಇಂತು ಸಂಜೆ ಆಗುವಸ್ಟರಲ್ಲಿ ಒಂದು ರೂಂ ಹುಡುಕಿ ವಾಪಾಸ್ ಹೋಗಿದ್ದಾಯ್ತು !!!
ನನ್ನ ತಮ್ಮ ಹಾಗು ನನ್ನ ಕಸಿನ್ ಬಂದು ನನ್ನ ಸರಂಜಾಮುಗಳನ್ನು ಇಟ್ಟು ನನ್ನ ಬಿಟ್ಟು ಹೋದರು!! ಅದು ಒಂದು ಅಪಾರ್ಟ್ ಮೆಂಟ್ ನಲ್ಲಿ ರುವ ಎರಡು ಬೆಡ್ ರೂಂ ಇರುವ ಫ್ಲಾಟ್. ಹಾಲ್ ಅನ್ನು ಕಾರ್ಡ್ಬೋರ್ಡ್ ಶೀಟ್ ಹಾಕಿ ಒಂದು ರೂಂ ಹಾಗೆ ಅನುಕರಣೆ ಮಾಡಿದ್ದಾರೆ. ನಾನು ಹೋಗಿದ್ದು ಭಾನುವಾರವಾದ್ದರಿಂದ ನನ್ನ ರೂಂ ನವರು ಯಾರು ಇರಲಿಲ್ಲ. ಸಂಜೆಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಬಂದು ಮಾತನಾಡಿಸಿ ಹೋಗುತ್ತಿದ್ದರು. ಡಾರ್ವಿನ್ ಯಾವ ಯೋಚನೆ ಇಂದ "Survival of Fittest " ಥಿಯರಿ ಮಾಡಿದ್ದನೋ , ಅದು ಆವಾಗ ಅರ್ಥ ಆಗ್ತಾ ಇತ್ತು, ಎಲ್ಲರು ಒಂದೇ ತರ , ಯಾರನ್ನ ನಂಬುವುದು, ಯಾರು ನಮಗೆ ಸಹಾಯ ಮಾಡುತ್ತಾರೆ ಗೊತ್ತಿಲ್ಲ. ನಮಗೆ ನಾವೇ ಜವಾಬ್ದಾರರು!!! ರಾತ್ರಿ ಊಟ ಮಾಡಿ ಬಂದ ಮೇಲೆ ಎಲ್ಲರೂ ಟೈಮ್ ಬಗ್ಗೆ ಮಾತಾಡುತ್ತ ಇದ್ದಾರೆ.. ಒಂದು ನಿಮಿಷಕ್ಕೆ ಏನು ಎಂಬುದು ಹೊಳೆಯಲಿಲ್ಲ!! ಕೊನೆಗೆ ಗೊತ್ತಾಯ್ತು , ಅದು ತುಂಬ ಅವಶ್ಯವಾದ ವಿಷಯ ಎಂದು. ಅದು ಬಾತ್ ರೂಂ timings !!! ಯಾವುದೇ ಪಿ ಜಿ ಗೆ ಹೋದರೂ ಮೊದಲ ತೀರ್ಮಾನ ಇದರ ಬಗ್ಗೆ ಮಾತ್ರ ಸಾಧ್ಯ !!! ಇನ್ನೇನು ಮಲಗಬೇಕು, ಆದರೆ ಅಲ್ಲಿರುವ ಹುಡುಗಿಯರಿಗೆ ತಮ್ಮ ದಿನ ಹೇಗಿತ್ತು , ಏನೆಲ್ಲಾ ಖರೀದಿ ಮಾಡಿದರು ಎಂದು ಎಲ್ಲರಿಗು ಹೇಳುವ ಒಂದು ರೀತಿಯ ಮೀಟಿಂಗ್ !! ಹೊಸ ಜಾಗ, ಹೊಸ ಜನ ಅದರ ಮೇಲೆ ಈ ಮೀಟಿಂಗ್ , ಏನೋ ನಿದ್ದೆ ಬರಲೊಲ್ಲದು, ಆದರೂ ನನ್ನ ಬೆಳಗ್ಗಿನ ಬಾತ್ ರೂಂ ಸಮಯ ನೆನೆದು ಹೊದ್ದು ಮಲಗಿದೆ !!
ಮೊದಲೆರಡು ದಿನ ಎಲ್ಲರೂ ಹಾಯ್ ಬಾಯ್ ಅಷ್ಟೇ ಹೇಳುತ್ತಿದ್ದುದು!! ಯಾರೂ ತುಂಬ ಎನಿಸುವಷ್ಟು ವಿಚಾರಿಸಲಿಲ್ಲ!! ಯಾಕಾದರೂ ಇಲ್ಲಿ ಬಂದು ಸೇರಿದೆನೋ ಎಂದು ಬೇಜಾರಾಗಿತ್ತು !! ಸುಮ್ಮನೆ ನನ್ನ ಸಮಯ ವ್ಯರ್ಥ ಮಾಡದೆ ನನ್ನ ಕೆಲಸದಲ್ಲಿ ತೊಡಗಿದ್ದೆ !! ಇಲ್ಲಿರುವ ಜನಗಳು ಹೇಗಿರುತ್ತಾರೆ ಎಂದು ಹೇಳದೆ ಇದ್ದರೆ ಪಿ ಜಿ ಗೆ ಅವಮಾನ !! ಒಬ್ಬಳು ರಾತ್ರಿ ಇಡೀ ಮೊಬೈಲ್ ಅಲ್ಲಿ ಮಾತಾಡುತ್ತಾ , ಆಗಾಗ ಅಳುತ್ತ ಕೂರುವಳು, ಇನ್ನೊಬ್ಬಳು ಆಫೀಸ್ ಅಲ್ಲಿ ಹೇಗೆ ಎಲ್ಲರೊಂದಿಗೆ ಜಗಳವಾಡಿದೆ, ನಾಳೆ ಇನ್ನೇನು ಮಾಡುವೆ ಎಂದು ಯೋಜನೆ ಮಾಡುವಳು , ಮತ್ತೊಬ್ಬಳು ತಿಂಡಿಪೋತಿ - ನಾಳೆ ಮತ್ತೊಂದು flavor ಕುರ್ಕುರೆ ತಿನ್ನುವೆ ಎಂದು ತೀರ್ಮಾನ ಮಾಡುವಳು, ಕೆಲವರು ಆಫೀಸ್ ನ ಕೆಲಸ ಮಾಡುತ್ತಾ ಕೂರುವರು!! ಅದರಲ್ಲಿ ಕೆಲವರು engagement ಆಗಿರುವವರು , ಮತ್ತು ಕೆಲವರು engagement ಆಗದೆ engage ಆಗಿರುವವರು!! ಹೀಗೆ ಹಲವಾರು ರೀತಿ ವಿಂಗಡಿಸಬಹುದಾದ ಜನ ಸಮೂಹ !!
ಒಂದು ವಾರವಾಗುವಷ್ಟರಲ್ಲಿ ಸಲ್ಪ ಮಟ್ಟಿಗೆ ಎಲ್ಲರ ಪರಿಚಯವಾಗಿತ್ತು !! ಬೇಕೆನಿಸದಿದ್ದರು, ಅವರಿವರ ಸಲುವಾಗಿ ದಾರವಾಹಿಗಳನ್ನು ನೋಡಬೇಕಿತ್ತು !! ದಿನವಿಡಿಯ ದುಡಿಮೆಯ ಜಂಜಾಟದಲ್ಲಿ ಪಿ ಜಿ ತಲುಪಿದರೆ ಸಮಾಧಾನ!! ಪಿ ಜಿ ಗೆ ಮನೆಯ ಸ್ಥಾನ ಕೊಡಲಾಗದಿದ್ದರೂ , ಸಲ್ಪವಾದರೂ ಆರಾಮೆನಿಸುತಿತ್ತು !! ರಾತ್ರಿ ಎಲ್ಲರೂ ಒಟ್ಟಿಗೆ ಕುಳಿತು ಹರಟೆ ಹೊಡೆದು ಜೊತೆಗೆ ಊಟ ಮಾಡಿ ಮುಗಿಯುವುದೇ ತಿಳಿಯುತ್ತಿರಲಿಲ್ಲ!! ಪಿ ಜಿ ಯಾ ಊಟವನ್ನು ಹೀಯಾಳಿಸುವುದು ಮಾಮೂಲಾಗಿತ್ತು!! ಅವರಿವರ ಬಗ್ಗೆ ಮಾತನಾಡದಿದ್ದರೆ ತಿಂದಿರುವುದು ಜೀರ್ಣವಾಗುತ್ತಿರಲಿಲ್ಲ!! ಒಂದು ಸುದ್ದಿಗೆ ರೆಕ್ಕೆ ಪುಕ್ಕ ಕಟ್ಟಿ ರಸವತ್ತಾಗಿ ಕಥೆ ಕಟ್ಟಿ ಹರಟುವುದು ದಿನಚರಿಯ ಒಂದು ಭಾಗವಾಗಿತ್ತು !! ಇದರ ಮದ್ಯ ಹಳಬರು ಪಿ ಜಿ ಬಿಡುತ್ತಿದ್ದರು, ಹೊಸಬರು ಬರುತ್ತಿದ್ದರು. ನಾನು ಈಗ ಸಲ್ಪ ಹಳಬಳಾಗಿದ್ದೆ !!
ವಾರಾಂತ್ಯ ಬರುತ್ತಿದ್ದಂತೆ ಏನೋ ಹುರುಪು!! ರಾತ್ರಿಯಿಡಿ ಟಿ ವಿ ನೋಡುವುದು, ಶನಿವಾರ ಭಾನುವಾರ ಏನು ಮಾಡಬೇಕೆಂದು ಸ್ಕೆಚ್ ಹಾಕುವುದು , ಅದೆಲ್ಲದರ ಮದ್ಯ ದೊಡ್ಡ ಕೆಲಸ ಬಟ್ಟೆ ಒಗೆಯುವುದು !! ಬಟ್ಟೆ ಒಗೆದರೆ ಅರ್ಧ ಕೆಲಸ ಮುಗಿದ ಹಾಗೆ! ಭಾನುವಾರ ಮದ್ಯಾಹ್ನ ಪಿ ಜಿ ಯಲ್ಲಿ ಊಟ ಕೊಡದಿದ್ದ ಕಾರಣ ಹೊರಗೆ ತಿನ್ನುವ ಮಜಾ !! ಒಂದು ವಾರ ಚೈನೀಸ್ ತಿಂದರೆ, ಇನ್ನೊಂದುವಾರ ಆಂಧ್ರ ಮೀಲ್ಸ್ !! ಯಾರದಾದರೂ birthday ಮದ್ಯ ಬಂದರೆ ಅಲ್ಲೊಂದು ಇಲ್ಲೊಂದು treats!! ಈ ಸಮಯಕ್ಕೆ ಎಲ್ಲರೂ ಪರಿಚಯವಾಗಿ ಸಲ್ಪಮಟ್ಟಿಗೆ close ಆಗಿದ್ದರು. ಯಾರದಾದರೂ engagement ಅಥವಾ ಮದುವೆ fix ಆದರೆ , ತಿಂಗಳುಗಳ ಮೊದಲೇ ಶಾಪಿಂಗ್ ಗೆ ತಯಾರಿ ನಡೆಯುವುದು ಸಾಮಾನ್ಯ !! ಏನೇ ಚಿಕ್ಕ ವಸ್ತು ಬೇಕೆಂದರೂ ಪೂರ್ತಿ ಗ್ಯಾಂಗ್ ಒಟ್ಟಿಗೆ ಶಾಪಿಂಗ್ ಗೆ ಹೋಗುವುದು ಮಜಾ ತರುತ್ತಿದ್ದ ಸಂಗತಿ!! ಅದೆಲ್ಲದರ ಮದ್ಯ ಯಾವುದಾದರೂ ಹೊಸ ಸಿನಿಮಾ ಬಂದರೆ ಒಟ್ಟಿಗೆ ಹೋಗಿ ನೋಡುವುದು!! ಮಾಲ್ ಅಲ್ಲಿ ಪಾಪ್ ಕಾರ್ನ್ ತೆಗೆದುಕೊಂಡು ದುಡ್ಡು ಕೊಡುವಾಗ 50 ರುಪಾಯೀ ಎಂದು ನೊಂದುಕೊಳ್ಳುವುದು !! ಹೊಸ ಅನುಭವ , ಹೊಸ ಜಾಗ ಹೊಸ ಜನದೊಂದಿಗೆ ಹೊಸತನವನ್ನು ತರುತ್ತಿದ್ದುದು ಸತ್ಯ !!
ತುಂಬ ಹೆಚ್ಚು ಎನ್ನುವಷ್ಟು ಹತ್ತಿರವಾದವರು ಇದ್ದರೂ, ಬೇರೆಯವರೊಂದಿಗೆ ಜಾಸ್ತಿ ಬೇರೆಯದ ಜನರೂ ಸಿಕ್ಕರು. ಚಿಕ್ಕಂದಿನಿಂದ ಹಾಸ್ಟೆಲ್ ನಲ್ಲಿ ಬೆಳೆದ ನಾನು ಜನ ಸಮೂಹದ ಒಡನಾಡಿ!!!ಬೇರೆ ಜನರೊಂದಿಗೆ ಬೆರೆಯುವುದು , ಜನಗಳನ್ನು ಗಳಿಸುವುದು ಒಂದು ಹವ್ಯಾಸ. ಯಾರಾದರು ಹಾಸ್ಟೆಲ್ ಅಥವಾ ಪಿ ಜಿ ಅಲ್ಲಿ ಇದ್ದೆ ಇಲ್ಲ ಎಂದರೆ , ಜೀವನದಲ್ಲಿ ಎಷ್ಟೊಂದು miss ಮಾಡಿಕೊಂಡಿದ್ದಾರೆ ಎಂದು ಮರುಕ ಉಂಟಾಗುತ್ತದೆ!! ನಾನು ಪಿ ಜಿ ಯಲ್ಲಿ ಕಳೆದ ಕೆಲವು ತಿಂಗಳುಗಳು ಅತ್ಯಮೂಲ್ಯ ದಿನಗಳು!! ಕನಿಷ್ಠ ಒಬ್ಬರಾದರೂ ಕೊನೆವರೆಗೆ ಸಂಪರ್ಕದಲ್ಲಿದ್ದರೆ ಅಲ್ಲಿ ಕಳೆದ ದಿನಗಳು ಸಾರ್ಥಕ!! ಅತಿಯಾದ ಪಿ ಜಿ ಗಳಿಂದ ಈ ಊರಲ್ಲಿ ಮನೆಗಳು ಕಾಣೆಯಾಗಿವೆ , ಆದರೆ ಹಂಬಲಿಸುವ ಮನಗಳಲ್ಲ!!!

Very nice :) Thanks for reminding My PG days :) :)
ReplyDelete