Daily Routine
ಏನೋ ಒಂಥರಾ... ಅದು ಏನೋ ಅಂತ ಗೊತ್ತಾಗ್ತಿಲ್ಲ.. ನಾನು ಏನು ಮಾಡ್ತಾ ಇಲ್ಲ ಲೈಫ್ ಅಲ್ಲಿ ಅನ್ನೋ ಭಾವನೆ.. ಸುಮ್ನೆ ಟೈಮ್ kill ಮಾಡ್ತಾ ಇದೀನಾ , ಅಥವ ಈ phase ಹೀಗೆನಾ ಅನ್ನೋ ಕುತೂಹಲ.. ನಾನು ಹೇಳಲೇ ಬೇಕು ನನ್ನ ಒಳಗೆ ಆಗೋ ತಳಮಳಗಳನ್ನು ಅಂತ ದಿನ ಅನ್ಕೊತಾ ಇದ್ದೀನಿ ಆದ್ರೆ ಆಗ್ಥಿಲ್ಲ.. ಕಾರಣ -- time ಇಲ್ಲ.. ನಂಗೊಬ್ಳಿಗೆ ಇಪ್ಪತ್ತಾಲ್ಕು ಗಂಟೆ ಸಾಲಲ್ವ ಅಂತ ಅಥವ ಎಲ್ಲರಿಗು ಹೀಗೆ ಅನ್ಸತ್ತಾ ಅಂತ ಗೊತ್ತಾಗಬೇಕಿದೆ.... ಬರೆಯೋದು ಒಂದು ಚಟ, ಬರೀತಾ ಹೋದ್ರೆ ನಾನು ಏನ್ ಕೆಲಸ ಮಾಡ್ತಾ ಇದ್ದೆ , ಎಲ್ಲಿದೀನಿ ಅನ್ನೋದನ್ನೇ ಮರೆತು ಬಾಗಿಲು ಮುಚ್ಚಿ ರೂಂ ಅಲಿ ಕೂತಬಿಡ್ತೀನಿ.. ನಾನು ಹೀಗೆ ಮಾಡಿದ್ರೆ ನನ್ನ ಮಗು ಜೊತೆ ಟೈಮ್ ಸ್ಪೆಂಡ್ ಮಾಡ್ಲಿಕ್ಕೆ ಆಗಲ್ಲ ಅಂತ ಬರೆಯೋದಕ್ಕೆ ತಿಲಾಂಜಲಿ ಬಿಟ್ಟಿದ್ದೆ.. ಆದ್ರೆ ಏನೋ miss ಮಾಡ್ತಾ ಇದ್ದೀನಿ ಅನ್ನೋ ಅನುಭವ ಶುರು ಆಯ್ತು.. ಅದ್ಕೆ ಈಗ, ಆಫೀಸ್ ಗೆ ಬಂದು ಅರ್ಧ ಗಂಟೆ ಕಾಫಿ ಗೆ ಹೋಗೋ ಬದ್ಲು ಏನಾದ್ರೂ ಗೀಚಿ ಮನಸ್ಸು ತೃಪ್ತಿಪಡಿಸಲಿಕ್ಕೆ ತಯಾರಿ ನೆಡಸಿ , ಗಟ್ಟಿ ಮನಸು ಮಾಡಿ office communicator ನ away status ಗೆ ಇಟ್ಟು ಶುರು ಮಾಡ್ತಾ ಇದೀನಿ... ಈ ತಾಯಿ ಸ್ಥಾನ ನೆ ಹಾಗಾ ಅಂತ... ನಾನು ಸ್ಕೂಲ್ , ಕಾಲೇಜ್ ಗೆ ಹೋಗುವಾಗ ಅಮ್ಮ ಹೇಳೋ ಮಾತುಗಳೆಲ್ಲ ನಾನು ಅಮ್ಮ ಆದ್ಮೇಲೆ ಅರ್ಥ ಆಗ್ತಾ ಇದೆ. ಬೆಳಿಗ್ಗೆ ಎದ್ದು ಕಾಫಿ ಮಾಡಿ , ಲೋಟಕ್ಕೆ ಸೋಸಿ ತಿಂಡಿ...