Daily Routine
ಏನೋ ಒಂಥರಾ... ಅದು ಏನೋ ಅಂತ ಗೊತ್ತಾಗ್ತಿಲ್ಲ.. ನಾನು ಏನು ಮಾಡ್ತಾ ಇಲ್ಲ ಲೈಫ್ ಅಲ್ಲಿ ಅನ್ನೋ ಭಾವನೆ.. ಸುಮ್ನೆ ಟೈಮ್ kill ಮಾಡ್ತಾ ಇದೀನಾ , ಅಥವ ಈ phase ಹೀಗೆನಾ ಅನ್ನೋ ಕುತೂಹಲ.. ನಾನು ಹೇಳಲೇ ಬೇಕು ನನ್ನ ಒಳಗೆ ಆಗೋ ತಳಮಳಗಳನ್ನು ಅಂತ ದಿನ ಅನ್ಕೊತಾ ಇದ್ದೀನಿ ಆದ್ರೆ ಆಗ್ಥಿಲ್ಲ.. ಕಾರಣ -- time ಇಲ್ಲ.. ನಂಗೊಬ್ಳಿಗೆ ಇಪ್ಪತ್ತಾಲ್ಕು ಗಂಟೆ ಸಾಲಲ್ವ ಅಂತ ಅಥವ ಎಲ್ಲರಿಗು ಹೀಗೆ ಅನ್ಸತ್ತಾ ಅಂತ ಗೊತ್ತಾಗಬೇಕಿದೆ.... ಬರೆಯೋದು ಒಂದು ಚಟ, ಬರೀತಾ ಹೋದ್ರೆ ನಾನು ಏನ್ ಕೆಲಸ ಮಾಡ್ತಾ ಇದ್ದೆ , ಎಲ್ಲಿದೀನಿ ಅನ್ನೋದನ್ನೇ ಮರೆತು ಬಾಗಿಲು ಮುಚ್ಚಿ ರೂಂ ಅಲಿ ಕೂತಬಿಡ್ತೀನಿ..
ನಾನು ಹೀಗೆ ಮಾಡಿದ್ರೆ ನನ್ನ ಮಗು ಜೊತೆ ಟೈಮ್ ಸ್ಪೆಂಡ್ ಮಾಡ್ಲಿಕ್ಕೆ ಆಗಲ್ಲ ಅಂತ ಬರೆಯೋದಕ್ಕೆ ತಿಲಾಂಜಲಿ ಬಿಟ್ಟಿದ್ದೆ.. ಆದ್ರೆ ಏನೋ miss ಮಾಡ್ತಾ ಇದ್ದೀನಿ ಅನ್ನೋ ಅನುಭವ ಶುರು ಆಯ್ತು.. ಅದ್ಕೆ ಈಗ, ಆಫೀಸ್ ಗೆ ಬಂದು ಅರ್ಧ ಗಂಟೆ ಕಾಫಿ ಗೆ ಹೋಗೋ ಬದ್ಲು ಏನಾದ್ರೂ ಗೀಚಿ ಮನಸ್ಸು ತೃಪ್ತಿಪಡಿಸಲಿಕ್ಕೆ ತಯಾರಿ ನೆಡಸಿ , ಗಟ್ಟಿ ಮನಸು ಮಾಡಿ office communicator ನ away status ಗೆ ಇಟ್ಟು ಶುರು ಮಾಡ್ತಾ ಇದೀನಿ...
ಈ ತಾಯಿ ಸ್ಥಾನ ನೆ ಹಾಗಾ ಅಂತ... ನಾನು ಸ್ಕೂಲ್ , ಕಾಲೇಜ್ ಗೆ ಹೋಗುವಾಗ ಅಮ್ಮ ಹೇಳೋ ಮಾತುಗಳೆಲ್ಲ ನಾನು ಅಮ್ಮ ಆದ್ಮೇಲೆ ಅರ್ಥ ಆಗ್ತಾ ಇದೆ. ಬೆಳಿಗ್ಗೆ ಎದ್ದು ಕಾಫಿ ಮಾಡಿ , ಲೋಟಕ್ಕೆ ಸೋಸಿ ತಿಂಡಿ ಏನ್ ಮಾಡ್ಲಿ ಅಂತ ಯೋಚನೆ ಮಾಡ್ತಾ ಇರೋವಾಗಲೇ ನನ್ನ ಒಂಬತ್ತು ತಿಂಗಳ ಮುದ್ದು ಕಂದ ಎದ್ದು ಹಾಸಿಗೆ ಲಿ ನನ್ನ ಹುಡುಕ್ತಾ ಇರುತ್ತೆ .. ಇನ್ನು ಕಾಫಿನ ಗಂಟಲಿಗೆ ಬಿಟ್ಟೆ ಇಲ್ಲ , ರೂಂ ಗೆ ಓಡಿ ನನ್ನ ಕಂದಮ್ಮನಿಗೆ good morning ಹೇಳಿ ಮತ್ತೆ ಅಡಿಗೆ ಮನೆಗೆ ಬಂದಾಗ ಅದೇ ಪ್ರಶ್ನೆ ಏನ್ ತಿಂಡಿ ಮಾಡ್ಲಿ!!! ಉಪ್ಪಿಟ್ಟು ನನಗೆ ಇಷ್ಟ ಇಲ್ಲ.. ಚಪಾತಿ ನನ್ನ ಪತಿರಾಯನಿಗೆ ಇಷ್ಟ ಇಲ್ಲ.. ಅವಲಕ್ಕಿ ನನ್ನ ಅತ್ತೆಗೆ ಜಗಿಲಿಕ್ಕೆ ಆಗಲ್ಲ.. ಇನ್ನೇನು ಮಾಡ್ಲಿ .. ಎಲ್ಲ ಡಬ್ಬಿ ಗಳನ್ನು ಒಂದು ಕಡೆ ಇಂದ ಪರೀಕ್ಷೆ ಮಾಡಿ, ಕಡುಬು ತಯಾರಿ ಮಾಡ್ಲಿಕ್ಕೆ ಶುರು ಮಾಡ್ದೆ... ಅದು ಅಕ್ಕಿ ತರಿಯಲ್ಲಿ ಮಾಡೋ ಕೊಡಗಿನ ತಿಂಡಿ.. ಅಷ್ಟರಲ್ಲಿ ನನ್ನ ಮಗು ಅಳ್ತಾ ನನ್ನ ಗಂಡನ ಕೈ ಇಂದ ನಾನ ಕೈಗೆ ಬಂದಾಗಿತ್ತು... ನನ್ನ ಲೋಟ ದ ಕಾಫಿ ಅನಾಥವಾಗಿ ಕೆನೆ ಕಟ್ಟಿತ್ತು...
ಮಗು ಗೆ ರಾಗಿ malt ಮಾಡಿ ತಿನ್ಸ್ಲಿಕ್ಕೆ ಅತ್ತೆ ಗೆ ಕೊಟ್ಟು ನಾನು ಆಫೀಸ್ ಗೆ ರೆಡಿ ಆಗಲಿಕ್ಕೆ ಅರ್ಜೆಂಟ್ ಆಗಿ ಓಡಾಡೋ ಪರಿಸ್ತಿತಿ..
ಸ್ನಾನ ಮಾಡಿ , ತಿಂಡಿ ತಿಂದು ,ಮಗು ಗೆ ಸ್ನಾನ ಮಾಡಿಸಿ , ಮಲಗಿಸಿ ಆಫೀಸ್ ಗೆ ಬರೋ ನಾನು ಆಫೀಸ್ ಗೆ ಬಂದ್ ಮೇಲೆ friends ಜೊತೆ ಹೋಗಿ ಕಾಫಿ ಕುಡಿದು ದಿನ ಶುರು ಮಾಡೋ ಅಭ್ಯಾಸ ಮಾಡ್ಕೊಂಡಿದೀನಿ.. ಅದಕ್ಕೂ ಮುಂಚೆ ಆಗೋ ಅನುಭವ ನ ಬರೀತಾ ಹೋದ್ರೆ ಅರ್ಧ ಗಂಟೆ ಸಾಲಲ್ಲ.. ಅದು ಏನಂದ್ರೆ ನನ್ನ ಮಗು ನ ಮನೆಯಲ್ಲಿ ಬಿಟ್ಟು ಅದು ಮಲಗಿಲ್ಲ ಅಂದ್ರು ಅದನ್ನ ತಿರುಗಿ ನೋಡ್ದೆ ಮನಸ್ಸು ಗಟ್ಟಿ ಮಾಡಿ ಹೊರಡೋ ಸಂಗತಿ.. ಎಲ್ಲ ತಾಯಂದ್ರು ಹಾಗೇನಾ ಅಂತಾ ..
ಇವತ್ತು ನನ್ನ ಬರೆಯೋ ಚಾಳಿ ಗೆ ಮುಕ್ತಿ ಸಿಕ್ಕಿರೋದ್ರಿಂದ ನನ್ನ ಬೆಳಿಗ್ಗಿನ ಕಾಫಿಗೆ ರಜೆ. ಆಫೀಸ್ ಅಲಿ ಆಗೋ meetings , onsite manager ಗಳ ಗುದ್ದಾಟ , ನನ್ನ ಮ್ಯಾನೇಜರ್ ನ ಹ್ಯಾಪ ಮೋರೆ ನೋಡಿ ನೋಡಿ ಸಾಕಗಿದೆ.. ಆದರೂ team mates ಗಳ ಜೊತೆ ಹರಟೆ , ಅವರಿವರ ಬಗ್ಗೆ gossips , ಅಡ್ಡ ಹೆಸರು ಇಡೋ ನಾಮಕರಣ sessions ಮತ್ತು ಹಲವು interesting ವಿಷ್ಯ ಗಳು ಆಫೀಸ್ ನ routine ವರ್ಕ್ ನ ಬೇಜಾರು ಕಳೆಯೊತರ ಮಾಡ್ತಾವೆ.... ಆಫೀಸ್ ಮುಗ್ಸಿ ಮನೆಗೆ ಹೋದ್ರೆ ಮಗು ಜೊತೆ ಆಟ, ಅಡಿಗೆ, ಊಟ ಇದೇ ... ಇಸ್ಟೆಲ್ಲಾ ಮಾಡಿದರೂ ಏನೋ ಮಾಡ್ತಾ ಇಲ್ಲ್ಲ ಅಂತ ಅನ್ಸ್ತ ಇತ್ತು.. \
ಈಗ ಸಲ್ಪ ಆರಮಾದೆ.. ಬರೀಬೇಕು ಅಂತ ಏನು ವಿಷ್ಯ ಇಲ್ಲದಿದ್ರು ಏನಾರ ಒಂದು ಗೀಚಿ ಅರ್ದ ಗಂಟೆ ಮುಗಿತು .. ಕೆಲಸ ಶುರು ಮಾಡ್ಬೇಕು.. ನಾಳೆಗೆ ಹೇಗೆ ಅನ್ಸತ್ತೆ ನೋಡ್ಬೇಕು :)
jyothi avre blog bariyakke coffee bitre henge anta.... coorg avru agi coffee bidthira andre sikkapatte kasta alwa... nam jothe coffee kudita maatadre thane nimge blog nalli bariyakke en aadru sigadu.... elde hodre nam manager hyaaaap moreee nodbeku aste :p adakke desk ge coffee tagand bandu blog bariri... nanu coffee kudita blog odthini :)
ReplyDeletemanager ivattu raje, so avra moore nodo avakaasha illa :)
ReplyDeletecoffee kudide iroke innondu reason ide.. mouth ulser :), illa andre nanu coffee kudide irodilla :)
ಹೆಡ್ಡಿಂಗ್ ಮಾತ್ರ ಇಂಗ್ಲೀಶ್ ಅಲ್ಲಿ ಯಾಕೆ?? ಮತ್ತೆಲ್ಲ ಸೂಪರ್:)
ReplyDeleteThis comment has been removed by the author.
ReplyDeleteಈಗ ನನ್ನ ಮನಸ್ಸಿಗೆ ನೆಮ್ಮದಿ ಅಂತ ಅನ್ನಿಸುತ್ತ ಇದೆ ಕಣೊ....ಜ್ಯೋ...ಪದಗಳನ್ನು ಜೋಡಿಸಿ ಜೀವ ಕೊಡಬಲ್ಲ ಕೈಗಳು ಸುಮ್ಮನೆ ಕೈ ಕಟ್ಟಿ ಕೂತಿರುವುದಾದರು ಏಕೇ ಎಂದು ನನಗನ್ನಿಸುತ್ತಿತ್ತು...?..?.. ಬರಿ ಮದುವೆ ಅನ್ನೋದು ನಾವು ನಮ್ಮ ಜೀವನದಲ್ಲಿ ಏರ ಬೇಕಾದ ಶಿಕರಗಳನ್ನೆಲ್ಲಾ ಅಥವಾ ಕನಸುಗಳನ್ನ ಕನಸುಗಳಾಗಿಯೆ ಉಳಿಸುತ್ತದ್ದ ಎನ್ನಿಸಿ ಬಿಟ್ಟಿತ್ತು ನಿಮ್ಮ ವಿಚಾರದಲ್ಲಿ....ಒಮ್ಮೊಮ್ಮೆ ಕರೆ ಮಾಡಿ ಬರೆದಿರುವ ಸಾಲುಗಳನ್ನ ಹೇಳೊವಾಗ....ಜ್ಯೋ..ಏನನ್ನು ಮಾಡಲ್ಲ ಅನ್ನೊ ಭಾವನೆ ಮೂಡುತ್ತಿತ್ತು....ಆದರೆ ಸಿರಿ ತಂದ ಸಂತೋಷ...ಎಲ್ಲವನ್ನು ಮರೆಸಿತ್ತು......ಮತ್ತೆ ಮನದ ಮಾತುಗಳನ್ನು ಬಿಚ್ಚಿಟ್ಟದ್ದನ್ನು ನೋಡಿ....ಎಲ್ಲಾ ಕನಸುಗಳತ್ತ ಒಮ್ಮೆ ತಿರುಗಿ ನೋಡುವ ಮನಸ್ಸು ಮಾಡಿದಿರಾ ಅನ್ನಿಸುತ್ತಿದೆ..ತಾಯ್ತನವನ್ನು ಅಣು ಅಣುವಾಗಿ ಸವಿಯುತ್ತ ...ಕಂಡ ಕನಸುಗಳತ್ತ ಮನಸ್ಸುಮಾಡಿ.....ಕಾದು ನೋಡುವ ಕಾತುರ !!!!
ReplyDelete