ನೀನೇನಾ..
ಮತ್ತೆ ಮತ್ತೆ ನೆನಪಾಗಿದೆ... ನೆನೆದಾಗ ಮನ ಖುಷಿಯಾಗಿದೆ ಆ ನೆನಪು ನಿನ್ನದೇನ... ಬೆಳಗಿನ ಮುಂಜಾವಲಿ ಕಂಬಳಿಯೊಳು ಬೆಚ್ಚನೆ ಆ ಅಪ್ಪುಗೆ ನಿನ್ನದೇನ.. ನೇಸರನ ಕಿರಣ ನನ್ನ ಸೋಗಲು ಮುನ್ನ ಆ ಚುಂಬನ ನಿನ್ನದೇನ.. ದಿನ ಶುರು ಮಾಡಲು ಮುನ್ನ ಹದವಾದ ಬಿಸಿ ಕಾಫಿ ಯ ಒಡೆಯ ನೀನೇ ನಾ.. ತಿನ್ನುವ ತಿಂಡಿಯಲೂ ಮೊದಲ ತುತ್ತು ಎನಗೆ ಇರಿಸುವುದು ನೀನೇನಾ.. ಕೆಲಸಕ್ಕೆ ಹೊರಡಲೂ ಮುನ್ನ ಹೂ ಮುತ್ತು ಹಣೆಯಲಿ ನಿಂದೇನಾ.. ವಿರಹದ ಬೇಗೆಗೆ ತಂಪೆರೆವ ಬಿಡುವಿಲ್ಲದ ಮೆಸೇಜ್ ನಿಂದೇನಾ.. ಸಂಜೆಯ ಮೊಬ್ಬಿನಲಿ ನನಗಾಗಿ ಕಾಯುವ ಕಾತರದ ಕಣ್ಣು ನಿನದೇನ... ದಣಿದ ಮನಕೆ ಪ್ರೀತಿಯ ಉಣಬಡಿಸುವ ಕರಗಳು ನಿನದೇನ.. ರಾತ್ರಿಯ ಮಗ್ಗುಲಲಿ ಮುಂಗುರುಳ ಆಟದಲಿ ಸೋತು ಹೇಳುವ ಕಥೆ ನಿಂದೇನಾ. ರೆಪ್ಪೆ ಮುಚ್ಚುವರೆಗೆ ಎನ್ನ ತಲೆ ತಟ್ಟುವ ಕೈ ನಿಂದೇನಾ.... ನಿದ್ದೆಯ ಜೊಂಪಲ್ಲೂ ಬರುವ ಕಥೆಗಳ ನಾಯಕ ನೀನೇನಾ ಗೆಳೆಯ ನೀನೇನಾ...