ಒಮ್ಮೆಯಾಗಿದ್ದರೆ.....

ಒಮ್ಮೆಯಾಗಿದ್ದರೆ ಸಹಿಸುತಲಿದ್ದೆ ,
ಮತ್ತೊಮ್ಮೆಯಾಗಿದ್ದರೂ ಪರಿಣಾಮ ಊಹಿಸುತಲಿದ್ದೆ,
ಎಲ್ಲಿದ್ದವೋ ಈ ಎಣಿಕೆಗೆ ಸಿಗದಷ್ಟು ಕಷ್ಟ
ಸಾಯಿಸದೆ, ಬದುಕಲೂ ಬಿಡದೆ
ಗಂಟಲನ್ನು ಕುಯ್ಯುತ್ತಿವೆ!!

ಒಮ್ಮೆಯಾಗಿದ್ದರೆ ಕ್ಷಮಿಸುತಲಿದ್ದೆ ,
ಮತ್ತೊಮ್ಮೆಯಾಗಿದ್ದರೂ ತಿಳಿ ಹೇಳುತಲಿದ್ದೆ ,
ಎಲ್ಲಿದ್ದವೋ ಇಷ್ಟೊಂದು ಹಿತ ಶತ್ರುಗಳ  ಒಕ್ಕೊರಲು
ಉರಿಯುಲೂ ಬಿಡದೆ, ವಾಸಿಯೂ ಮಾಡದೆ
 ಹಸಿ ಗಾಯಕ್ಕೆ ಉಪ್ಪು ಸುರಿಯುತ್ತಿವೆ !!

ಒಮ್ಮೆಯಾಗಿದ್ದರೆ ಕಲಿಯುತಲಿದ್ದೆ,
ಮತ್ತೊಮ್ಮೆಯಾಗಿದ್ದರೂ ನನ್ನನ್ನು ಅಣಿಗೊಳಿಸುತಲಿದ್ದೆ ,
ಎಲ್ಲಿದ್ದವೋ ಅಷ್ಟೊಂದು ಕೆಲಸ ನಾರಿಗೆ
ಒಂದನ್ನೂ ಮುಗಿಸದೆ, ಮತ್ತೊಂದನ್ನು ಶುರುಮಾಡಲು ಬಿಡದೆ
ಬೆಂಬಿಡದೆ ಕಾದು  ಕೂತಿವೆ !!

ಒಮ್ಮೆಯಾಗಿದ್ದರೆ  ಸುಮ್ಮನಿರುತ್ತಿದ್ದೆ,
ಮತ್ತೊಮ್ಮೆಯಾಗಿದ್ದರೂ  ಹಾರಿಕೆಯ ನಗುವಿಡುತ್ತಿದೆ,
ಎಲ್ಲಿದ್ದರೋ ಕಾಲೆಳೆಯುವ ಅಷ್ಟೊಂದು ಮಂದಿ,
ಮಾತನಾಡಲೂ ಬಿಡದೆ, ತಾವೂ ಮಾತನಾಡದೆ
ಮೌನಕ್ಕೆ ಶರಣಾಗಿದ್ದಾರೆ!!

ಒಮ್ಮೆಯಾಗಿದ್ದರೆ ಸುಮ್ಮನಿರುತ್ತಿದ್ದೆ
ಮತ್ತೊಮ್ಮೆಯಾಗಿದ್ದರೂ ಇಣುಕಿ ನೋಡುತ್ತಿದ್ದೆ,
ಎಲ್ಲಿದ್ದವೋ ಇಷ್ಟೊಂದು whatsapp messages
ಯಾವ ಕೆಲಸವನ್ನೂ ಮಾಡಲು ಬಿಡದೆ, ನಿರ್ಲಕ್ಷಿಸಲೂ ಬಿಡದೆ
ನನ್ನನ್ನು ಹಿಡಿದು ಕೂರಿಸಿವೆ :-) :-)


Comments

Popular posts from this blog

ಅವಳು!!!

ಹೋಗಿ ಬಾ ಮಗಳೇ !!

Life lessons on the way!!!