ಸರ್ವಶಕ್ತಿ !!
ಒಳ ಮನಸಿನ ಕರುಳೊಳ ಧನಿ ಪಿಸುಮಾತಲಿ ಉಸುರಿತು ನಿಜವಾಗಿಯೂ ನಾ ಲೋಕ ಕಾಣಬಲ್ಲನೇ ? ಆ ಸುಂದರ ಸೃಷ್ಟಿ ಸೊಬಗನು ಸವಿಯಬಲ್ಲನೇ ? ಮೆತ್ತನೆಯ ಉದರವ ಸ್ಪರ್ಶಿಸುತ್ತಾ ಸೂಕ್ಷ್ಮವಾಗಿ ಉ ಲಿದೆನು ಮುದ್ದಾಗಿ "ಏಕೀ ಭಯ ನೀ ಭಗವಂತನ ನಿಮಿತ್ತ, ಸೇರುವೆ ಎನ್ನ ಕರಗಳ , ಬೆಚ್ಚಗಿಡುವೆ ಬೊಕ್ಕಸೆಯಲಿ ಧೈರ್ಯವಾಗಿ"!! ಅಗಸವೇನೆ? ಭೂಮಿಯೇನೇ ? ನನಗಂತೂ ಇಲ್ಲಿದೇ ಮೊದಲ ಸ್ವರ್ಗ , ಆದರೂ ಇನ್ನಿಲ್ಲದ ತವಕ , ನಿನ್ನ ನೋಡಲು, ಜಗವ ಕಾಣಲು , ನನ್ನ ಅರಿಯಲು ! ಆತುರವೇಕೆ ಇಲ್ಲಿಗೆ ಬರಲು, ಕೌತುಕ ಹೆಚ್ಚಿದರೂ ನಿನ್ನ ಕಾಣಲು, ಹುಲು ಮಾನವನ ಈ ಜಗತ್ತು , ಬೆಲೆಯಿಲ್ಲ ಮನುಜ ಕುಲಕ್ಕೆ, ಮೌಲ್ಯವಿದೆ ಮೋಸಕ್ಕೆ!! ನೀ ನೋಡುವ ಜಗವ ನಾ ಬೆರೆಯುವೆ, ನೀ ಕಾಣುವ ಸೊಬಗ ನಾ ಸವಿಯುವೆ, ಜಗವ ಕಾಣಲು, ಮೊಗವ ನೋಡಲು, ನಿನ್ನ ಬೆರೆಯಲು ಹೊರ ಬರುವ ಕಾತರ, ಇನ್ನಿರದ ಕೌತುಕ!! ನಿನ್ನ ಭೀತಿಗೊಳಿಸುವ ಇರಾದೆಯಿಲ್ಲ, ಆದರೂ ಸರಿ ನಿಜ ಹೇಳುವೆ ನಿನಗಾಗಿ, ನಿನ್ನೊಳಿವಿಗಾಗಿ! ಪ್ರಪಂಚದಲ್ಲೆಲ್ಲಿಯೂ ಈ ಲಿಂಗ ಭೇದ ಭೂತವಾಗಿ, ಅತಿರೇಕ ಎಲ್ಲೆ ಮೀರಿದೆ, ಹೆಣ್ಣಿಗೆ ಖದ ಮುಚ್ಚಿದೆ! ಏನಾದರೇನಂತೆ, ನಿನ್ನ ಮಡಿಲು ನನಗಲ್ಲವೇ ? ನಿನ್ನ ಸ್ಪರ್ಶ ಸಿಗುವಾಗ, ನಿನ್ನೊಡನೆ ಇರಬಲ್ಲೆನೇ ? ನೀ ಕೈಯ ಹಿಡಿದು ನನ್ನ ಕರೆದೊಯ್ದರೆ, ನನಗಾವ ಭಯವಿಲ್ಲ , ನಾನಾರಾದರೇನು? ನಿನ್ನ ಮಗು ಮೊದಲು! ನೀ ನನ್ನ...