ಸರ್ವಶಕ್ತಿ !!

ಒಳ ಮನಸಿನ ಕರುಳೊಳ ಧನಿ
ಪಿಸುಮಾತಲಿ ಉಸುರಿತು
ನಿಜವಾಗಿಯೂ ನಾ ಲೋಕ ಕಾಣಬಲ್ಲನೇ ?
ಆ ಸುಂದರ ಸೃಷ್ಟಿ ಸೊಬಗನು ಸವಿಯಬಲ್ಲನೇ ?


ಮೆತ್ತನೆಯ ಉದರವ  ಸ್ಪರ್ಶಿಸುತ್ತಾ ಸೂಕ್ಷ್ಮವಾಗಿ
 ಉ ಲಿದೆನು ಮುದ್ದಾಗಿ  "ಏಕೀ  ಭಯ
ನೀ  ಭಗವಂತನ ನಿಮಿತ್ತ, ಸೇರುವೆ
ಎನ್ನ ಕರಗಳ , ಬೆಚ್ಚಗಿಡುವೆ ಬೊಕ್ಕಸೆಯಲಿ ಧೈರ್ಯವಾಗಿ"!!

ಅಗಸವೇನೆ? ಭೂಮಿಯೇನೇ ?
ನನಗಂತೂ ಇಲ್ಲಿದೇ ಮೊದಲ ಸ್ವರ್ಗ ,
ಆದರೂ ಇನ್ನಿಲ್ಲದ ತವಕ ,
ನಿನ್ನ ನೋಡಲು, ಜಗವ ಕಾಣಲು , ನನ್ನ ಅರಿಯಲು !

ಆತುರವೇಕೆ ಇಲ್ಲಿಗೆ ಬರಲು,
ಕೌತುಕ ಹೆಚ್ಚಿದರೂ ನಿನ್ನ ಕಾಣಲು,
ಹುಲು  ಮಾನವನ ಈ ಜಗತ್ತು , ಬೆಲೆಯಿಲ್ಲ
ಮನುಜ ಕುಲಕ್ಕೆ, ಮೌಲ್ಯವಿದೆ ಮೋಸಕ್ಕೆ!!


ನೀ ನೋಡುವ ಜಗವ ನಾ ಬೆರೆಯುವೆ,
ನೀ ಕಾಣುವ ಸೊಬಗ ನಾ ಸವಿಯುವೆ,
ಜಗವ ಕಾಣಲು, ಮೊಗವ ನೋಡಲು, ನಿನ್ನ ಬೆರೆಯಲು
ಹೊರ ಬರುವ ಕಾತರ, ಇನ್ನಿರದ ಕೌತುಕ!!

ನಿನ್ನ ಭೀತಿಗೊಳಿಸುವ ಇರಾದೆಯಿಲ್ಲ, ಆದರೂ ಸರಿ
ನಿಜ ಹೇಳುವೆ ನಿನಗಾಗಿ, ನಿನ್ನೊಳಿವಿಗಾಗಿ!
ಪ್ರಪಂಚದಲ್ಲೆಲ್ಲಿಯೂ ಈ ಲಿಂಗ ಭೇದ  ಭೂತವಾಗಿ,
ಅತಿರೇಕ ಎಲ್ಲೆ ಮೀರಿದೆ, ಹೆಣ್ಣಿಗೆ ಖದ ಮುಚ್ಚಿದೆ!


ಏನಾದರೇನಂತೆ, ನಿನ್ನ ಮಡಿಲು ನನಗಲ್ಲವೇ ?
ನಿನ್ನ ಸ್ಪರ್ಶ ಸಿಗುವಾಗ, ನಿನ್ನೊಡನೆ ಇರಬಲ್ಲೆನೇ ?
ನೀ ಕೈಯ  ಹಿಡಿದು ನನ್ನ ಕರೆದೊಯ್ದರೆ,
ನನಗಾವ ಭಯವಿಲ್ಲ , ನಾನಾರಾದರೇನು? ನಿನ್ನ ಮಗು ಮೊದಲು!


ನೀ ನನ್ನ ಕುಡಿ, ನಾ ನಿನ್ನ ಆಧಾರ, ನೀ ಎನಗೆ!
ಆದರೂ ಒಂದಷ್ಟು ವಿಷಯ ನಿನಗಾಗಿ ನೀ ಹೆಣ್ಣಾದರೆ!!

" ನೀನೊಂದು ದೇವತೆ, ಪೂಜೆಗೆಂದೇ ಮೀಸಲು,
ಇಡು  ಹಿಡಿ ಹೆಮ್ಮೆ ಮುಡಿಪಾಗಿ,
ಬಿಗುಮಾನದಿಂದ ಬೀಗು ನ್ನಿನ್ನತನವ!!
ನೀ ನಡೆವ ಈ ನೆಲವು ನಿನ್ನ ಸ್ಪರ್ಶ ಕಾದಿರಲು
ಪಾದ ಧೂಳು ಕೂಡ ಪವಿತ್ರ, ಶಾಪಮುಕ್ತ!
ಕೈಯೆತ್ತಿ ನೀನೀಡು ಜನಕೆ  ನಿನ್ನ ನೆರವಾ,
ಶತೃಗಳ ನಾಶಕ್ಕೂ ಆಯುಧವ ಅಣಿಗೊಳಿಸಿ,
ಸಜೆಯನುಣಿಸುವ ಚಾಮುಂಡಿ ನೀ!
ನಿನ್ನ ದೇಹ ನಾ ತಂದ  ಮಾಂಸ ಮಜ್ಜೆ!
ಆದರೆ ಅದರೊಳ ತುಂಬುವ ಶಕ್ತಿಯೂ ನಿನ್ನದೇ!
ಪ್ರತಿ ಕಣದಲೂ ಹರಿವ ಯುಕ್ತಿಯೂ ನಿನ್ನದೇ !
ನೀ ಹರಿವ ಝರಿಯಾಗಿ, ಉಣಿಸುತ ತಣಿವನು,
ನಿನ್ನ ಅಳಿವಿಗೆ ಅಣಿಯಾಗುವವರಿಗೆ, ಪ್ರಹಾವು ನೀ!
ನೀ ನಡೆವ ನಿನ್ನ ಕಾಲು, ನಿನ್ನತನವ ಪಸರಿಸುತ,
ಮನುಕುಲಕೆ ಒಳಿತಾಗುವ ಸಂದೇಶ ನಿನ್ನದೇ!
ನೀ ಹೆಣ್ಣು, ನೀ ಪ್ರಕೃತಿ, ನೀ ಸಹಜ ಸುಂದರಿ,
ಈ ಲಜ್ಜೆ, ಚಂಚಲತೆ ನಿನ್ನ ಪರಿಚಯ !
ಆ ದುರುಳ ಕರಗಳು  ನಿನ್ನ ಮಾನ ಕಳಚಿದರೆ,
ಮುಡಿ ಬಿಚ್ಚಿ , ಹೆಡೆಯೆತ್ತಿ, ಮೈಮುರಿದು
ಜಿಹ್ವೆ  ಚಾಚಿ, ಅಸ್ತ್ರ  ಹಿಡಿದ ಮಹಾಕಾಳಿ ನೀ!"





Comments

  1. Read it multiple times to understand the meaning🙂.. fantastic writing...

    ReplyDelete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020