Posts

Showing posts from December, 2014

ಅವಳು!!!

ಓಡಿ ಆಡೋ ಹೆಣ್ಣು ಮಗು ಮುಖ ಬಾಡಿ ಏಕೆ ನಿಂತಿಹುದೋ !!! ಕುಣಿದಾಡಿ ಆಡೋ ವೇಳೆಯಲ್ಲಿ ಹಲ ಭಾರಗಳ ಹೊತ್ತಿಹಳೊ !! ತಾಯಿ ಜೊತೆ ಮನೆ ಕೆಲಸ , ಮಗಳಿಗೆ ಪ್ರತಿ ದಿವಸ , ರೋಗದಿ ಮಲಗಿದರೆ ಪಕ್ಕದಲ್ಲಿ ಪ್ರತಿ ನಿಮಿಷ! ಬಾಗಿಲಿಗೆ ನೀರು ಹಾಕಿ, ಹಸುಗಳಿಗೆ ಹುಲ್ಲು ಹಾಕಿ, ಪಾತ್ರೆ ತೊಳೆವ , ಬಟ್ಟೆ ಒಗೆವ -ಹುಟ್ಟಿಸಿದನು ಬ್ರಹ್ಮ ಇವಳನು !! ಈ ಎಳೆ ಮಲ್ಲಿಗೆ ಬಾಲೆ, ಹಲ ಹೊರೆಯು ಇವಳ ಮೇಲೆ , ಅದ ನೆನೆದು ನೆನೆದು ಕೊರಗಿ ಕೊರಗಿ ಮನಸು ಮುಳ್ಳಿನ ಮಾಲೆ!! ಹಾಗೆ ಸುಮ್ಮನೆ ಮೇಲಿನ ಸಾಲುಗಳು ನೆನಪಾದವು!!! ನಾನು ಶಾಲೆಯಲ್ಲಿ ಓದುವಾಗ ಹಾಡಿದ ಹಾಡಿದು !! ಆಗ ಸುಮ್ಮನೆ ಬಾಯಿ ಪಾಠ ಮಾಡಿ ಹೇಳಿದ್ದೆ , ಯಾಕೋ ಇವತ್ತು ಗುನುಗುವಾಗ ನಿಜವಾದ ಅರ್ಥ ಅರಿವಾಯ್ತು !! ಮನೆಯಲ್ಲಿ ಯಾವುದೇ ಕೆಲಸಕ್ಕೆ ಅವಳು ಬೇಕು !! ಬೆಳಿಗ್ಗೆ ಎದ್ದೊಡನೆ ಹೀರುವ ಚಹಾ ಅವಳೇ ಮಾಡಿಡಬೇಕು! ನಂತರದ ತಿಂಡಿಯು ಅವಳೇ ಮಾಡಬೇಕು! ಜೊತೆಗೆ ಮಗುವಿದ್ದರೆ , ಅದಕ್ಕೂ ಅವಳ ಕೈಯಾರ ಮಾಡುಣಿಸಬೇಕು!! ಜೊತೆಗೆ ಅವಳು ಹೊರಗೆ ದುಡಿಯುವುದಾದರೆ ಮದ್ಯಾಹ್ನಕ್ಕೂ ಬೇಯಿಸಬೇಕು !! ಮನೆಯವರ ಇಷ್ಟಗಳನ್ನು ಪರಿಗಣಿಸಬೇಕು, ಅವರಿಗನುಗುಣವಾಗಿ  ಅವಳು ಕೆಲಸ ಮಾಡಬೇಕು !! ಅಳುವ ಮಗುವನ್ನು ಸಂತೈಸಿ ಮಲಗಿಸಬೇಕು , ನಂತರ ಆಫೀಸ್ ಗೆ ಹೊರಡಬೇಕು! ಆಫೀಸ್ ನಲ್ಲಿರೋ  ಭಾರಗಳನ್ನೂ ಸರಿದೂಗಿಸಬೇಕು!! ಮನೆಗೆ ಸಂಜೆ ವಾಪಾಸಾದರೆ ಯಥಾ ಪ್ರಕಾರದ ಕೆಲಸ ಅವಳಿಗೆ !! ಅವಳೇನಾದರೂ ಯಂತ...

ಕಾಣೆಯಾಗಿದೆ ಮನೆ!!!

ಬೆಂಗಳೂರಿಗೆ ಬಂದು ಸುಮಾರು ಒಂಬತ್ತು ವರ್ಷಗಳಾದರೂ, ನಮ್ಮ ಮನೆ ಎಂದು ಯಾರಾದರೂ ಅಂದರೆ ಅದು ನಮ್ಮ ಊರಲ್ಲಿರುವ ಮನೆ ಅನ್ನಿಸುವುದೇ ವಿನಹ ನಾವು ಸದ್ಯಕ್ಕೆ ಇರುವ ಬೆಂಗಳೂರಿನ ಮನೆ ಅನಿಸುವುದಿಲ್ಲ. ನಮ್ಮ ಸುಪ್ತ ಮನಸ್ಸಿಗೆ ಮನೆ ಎಂದರೆ ಹೀಗೆ ಇರಬೇಕು, ಇಲ್ಲೇ ಇರಬೇಕು , ಇಷ್ಟೇ ಇರಬೇಕು ಎನ್ನುವ ವಿಚಾರವು ನಮಗೆ ಗೊತ್ತಿಲ್ಲದೇ ಬೇರೂರಿ ಕುಳಿತಿದೆ.  ಹೀಗೆ ಯೋಚನೆ ಮಾಡುತ್ತಾ , ಮೊದಲು ಈ ನಗರಿಗೆ ಬಂದವರು, ಅದರಲ್ಲೂ  ಬೇರೆ ಊರಿನಿಂದ ಬಂದ ಹುಡುಗಿಯರು ಉಳಿಯಲು ಆರಿಸುವುದು ನಾಯಿ ಕೊಡೆಯಂತೆ ಗಲ್ಲಿಗೊಂದರಂತೆ ಹರಡಿರುವ ಪಿ ಜಿ ಗಳನ್ನು. ಇತ್ತೀಚಿಗೆ ಸಲ್ಪ ಅತಿ ಎನಿಸುವಷ್ಟು ಪಿ ಜಿ ಗಳು ಶುರುವಾಗಿ, ಮನೆಗಳೇ ಕಾಣೆಯಾದಂತಾಗಿವೆ!!! ಯಾಕೋ ಮೊನ್ನೆ ಬಸ್ ಅಲಿ ಆಫೀಸ್ ಗೆ ಹೋಗುವಾಗ ಮೂರು ನಾಲ್ಕು ಹುಡುಗಿಯರು ಅವರು ಉಳಿದುಕೊಂಡಿರುವ ಪಿ ಜಿ ಬಗ್ಗೆ  ಪಿಸುಗುಡುತ್ತಿರುವಾಗ, ನನಗೂ ನಾನಿದ್ದ ಪಿ ಜಿ ಯ ನೆನಪಾಯ್ತು !!! ಆ ವಯಸ್ಸೇ ಹಾಗೋ ಅಥವ ಮೊದಲ ಕೆಲಸ, ಸಂಬಳ ಬರುವುದು ಎನ್ನುವ ಅಹಂ , ಏನೋ  ಗೊತ್ತಿಲ್ಲ!! ಈ ಮಾಯಾ ನಗರಿ ಗೆ ಬರುವ ದಿನವು ನಿಗದಿಯಾಗುತ್ತಿದ್ದಂತೆ, ಈ ಜಾಗಕ್ಕೆ ಓಡಿ ಹೋಗಬೇಕೆಂಬ ತೀವ್ರತೆ ಜಾಸ್ತಿ ಆಗುತ್ತದೆ !! ಆದರೆ ಪ್ರತಿ ಸಲ ಹಾಸ್ಟೆಲ್ ಗೆ ಕಳಿಸಲು ಪೋಷಕರು ಬರುತ್ತಿದ್ದರಾದರೂ, ಈ ಬಾರಿ ಅವರು ಬೇಕಾಗುವುದಿಲ್ಲ , ಕಾರಣ ನಮಗೆ ಎಲ್ಲ ಗೊತ್ತಿರುವುದು ಎಂಬ ಜಂಭ ಹಾಗು ಕೈಲಿ ದುಡ್ಡಿರುವ ಗತ್ತು !! ನನ್ನ ಶ...