ಮಾತೆ ಬಂಗಾರ ಮಾನಿನಿಯರಿಗೆ!!
ಒಂದು ಸಣ್ಣ ಕವಿತೆ ಸೋಮಾರಿ ಕಟ್ಟೆ / jobless jacks/ hard workers ಜನತೆಗೆ ನೆನಪುಗಳ ಕೆದಕಿ ,ವರುಷಗಳ ಹರಡಿ ಗೆಳತಿಯರ ಒಡಗೂಡಿ ಹೆಕ್ಕೆಕ್ಕಿ ತೆಗೆಯುತಾ ಆ ಸುಮಧುರ ಕ್ಷಣಗಳನು, ಹೃದಯ ತುಂಬಿ ನಕ್ಕು ನಾ ಹಗುರಾದೆ ನೆನೆದು !! ಜೊತೆಯಲ್ಲೇ ಬೆಳೆದು , ಮನಸ್ಸು ಬಿಚ್ಚಿ ಹರಟಿ ಕಿವಿಗಳಾದವು ಸಾಕ್ಷಿ ಪ್ರತಿಯೊಬ್ಬರ ಗುಟ್ಟುಗಳಿಗೆ. ಎಳೆ ಎಳೆಯಾಗಿ ಆ ವಿಷಯಗಳು ಬರುತಿರಲು ಎಲ್ಲರೊಂದಿಗೆ ಹಂಚಿ ನಾ ಹಕ್ಕಿಯಾದೆ!! ಸ್ಮೃತಿ ಪಟಲದಿಂದ ಇಣುಕಿಣುಕಿ ಬಂದ ಜೊತೆ ತಿಂದ ಪೆಟ್ಟು ಗುರು ಹಿರಿಯರಿಂದ ಒಮ್ಮೆಗೆ ಝಲ್ ಎಂದರೂ ಮನ, ಹಿತವಾಗಿದೆ ಆ ನೋವು ನಿಮ್ಮೊಂದಿಗೆ ನೆನೆಯುವುದರಿಂದ!! ಮನದ ಪರದೆ ಸರಿಸಿ, ಜೊತೆಗೆ ನಗುವ ಬೆರೆಸಿ ಒಡಗೂಡಿ ತಿಂದ ಆ ದಿನವ ಸ್ಮರಿಸಿ ಬಾಯಿ ನೀರಾಡಿದರೂ, ಬಾಯ್ತುಂಬ ಉಸುರಿ ತೇವವಾದವು ಕಣ್ಣು ಆನಂದ ಬಾಷ್ಪದಿಂದ !! ದಿನ ಬೆಳಗಾದರೆ ಏನಾದರೊಂದು ಹೊಸ ಮೆಲುಕು ವಿಷಯ ಓದುತ್ತಿರುವಾಗ ಆ ಮುಗುಳುನಗು ಪ್ರತಿಯೊಂದು ನಿಮಿಷವೂ ಬಿಡುವಿಲ್ಲ ಮಾತಿಗೆ ಮಾತೆ ಬಂಗಾರ ಮಾನಿನಿಯರಿಗೆ !!!