ಮಾತೆ ಬಂಗಾರ ಮಾನಿನಿಯರಿಗೆ!!
ಒಂದು ಸಣ್ಣ ಕವಿತೆ ಸೋಮಾರಿ ಕಟ್ಟೆ / jobless jacks/ hard workers ಜನತೆಗೆ
ನೆನಪುಗಳ ಕೆದಕಿ ,ವರುಷಗಳ ಹರಡಿ
ಗೆಳತಿಯರ ಒಡಗೂಡಿ
ಹೆಕ್ಕೆಕ್ಕಿ ತೆಗೆಯುತಾ ಆ ಸುಮಧುರ ಕ್ಷಣಗಳನು,
ಹೃದಯ ತುಂಬಿ ನಕ್ಕು ನಾ ಹಗುರಾದೆ ನೆನೆದು !!
ಜೊತೆಯಲ್ಲೇ ಬೆಳೆದು , ಮನಸ್ಸು ಬಿಚ್ಚಿ ಹರಟಿ
ಕಿವಿಗಳಾದವು ಸಾಕ್ಷಿ ಪ್ರತಿಯೊಬ್ಬರ ಗುಟ್ಟುಗಳಿಗೆ.
ಎಳೆ ಎಳೆಯಾಗಿ ಆ ವಿಷಯಗಳು ಬರುತಿರಲು
ಎಲ್ಲರೊಂದಿಗೆ ಹಂಚಿ ನಾ ಹಕ್ಕಿಯಾದೆ!!
ಸ್ಮೃತಿ ಪಟಲದಿಂದ ಇಣುಕಿಣುಕಿ ಬಂದ
ಜೊತೆ ತಿಂದ ಪೆಟ್ಟು ಗುರು ಹಿರಿಯರಿಂದ
ಒಮ್ಮೆಗೆ ಝಲ್ ಎಂದರೂ ಮನ,
ಹಿತವಾಗಿದೆ ಆ ನೋವು ನಿಮ್ಮೊಂದಿಗೆ ನೆನೆಯುವುದರಿಂದ!!
ಮನದ ಪರದೆ ಸರಿಸಿ, ಜೊತೆಗೆ ನಗುವ ಬೆರೆಸಿ
ಒಡಗೂಡಿ ತಿಂದ ಆ ದಿನವ ಸ್ಮರಿಸಿ
ಬಾಯಿ ನೀರಾಡಿದರೂ, ಬಾಯ್ತುಂಬ ಉಸುರಿ
ತೇವವಾದವು ಕಣ್ಣು ಆನಂದ ಬಾಷ್ಪದಿಂದ !!
ದಿನ ಬೆಳಗಾದರೆ ಏನಾದರೊಂದು ಹೊಸ ಮೆಲುಕು
ವಿಷಯ ಓದುತ್ತಿರುವಾಗ ಆ ಮುಗುಳುನಗು
ಪ್ರತಿಯೊಂದು ನಿಮಿಷವೂ ಬಿಡುವಿಲ್ಲ ಮಾತಿಗೆ
ಮಾತೆ ಬಂಗಾರ ಮಾನಿನಿಯರಿಗೆ !!!
ನೆನಪುಗಳ ಕೆದಕಿ ,ವರುಷಗಳ ಹರಡಿ
ಗೆಳತಿಯರ ಒಡಗೂಡಿ
ಹೆಕ್ಕೆಕ್ಕಿ ತೆಗೆಯುತಾ ಆ ಸುಮಧುರ ಕ್ಷಣಗಳನು,
ಹೃದಯ ತುಂಬಿ ನಕ್ಕು ನಾ ಹಗುರಾದೆ ನೆನೆದು !!
ಜೊತೆಯಲ್ಲೇ ಬೆಳೆದು , ಮನಸ್ಸು ಬಿಚ್ಚಿ ಹರಟಿ
ಕಿವಿಗಳಾದವು ಸಾಕ್ಷಿ ಪ್ರತಿಯೊಬ್ಬರ ಗುಟ್ಟುಗಳಿಗೆ.
ಎಳೆ ಎಳೆಯಾಗಿ ಆ ವಿಷಯಗಳು ಬರುತಿರಲು
ಎಲ್ಲರೊಂದಿಗೆ ಹಂಚಿ ನಾ ಹಕ್ಕಿಯಾದೆ!!
ಸ್ಮೃತಿ ಪಟಲದಿಂದ ಇಣುಕಿಣುಕಿ ಬಂದ
ಜೊತೆ ತಿಂದ ಪೆಟ್ಟು ಗುರು ಹಿರಿಯರಿಂದ
ಒಮ್ಮೆಗೆ ಝಲ್ ಎಂದರೂ ಮನ,
ಹಿತವಾಗಿದೆ ಆ ನೋವು ನಿಮ್ಮೊಂದಿಗೆ ನೆನೆಯುವುದರಿಂದ!!
ಮನದ ಪರದೆ ಸರಿಸಿ, ಜೊತೆಗೆ ನಗುವ ಬೆರೆಸಿ
ಒಡಗೂಡಿ ತಿಂದ ಆ ದಿನವ ಸ್ಮರಿಸಿ
ಬಾಯಿ ನೀರಾಡಿದರೂ, ಬಾಯ್ತುಂಬ ಉಸುರಿ
ತೇವವಾದವು ಕಣ್ಣು ಆನಂದ ಬಾಷ್ಪದಿಂದ !!
ದಿನ ಬೆಳಗಾದರೆ ಏನಾದರೊಂದು ಹೊಸ ಮೆಲುಕು
ವಿಷಯ ಓದುತ್ತಿರುವಾಗ ಆ ಮುಗುಳುನಗು
ಪ್ರತಿಯೊಂದು ನಿಮಿಷವೂ ಬಿಡುವಿಲ್ಲ ಮಾತಿಗೆ
ಮಾತೆ ಬಂಗಾರ ಮಾನಿನಿಯರಿಗೆ !!!
Comments
Post a Comment