ಅದೇನು ಠೀವಿ!!!

ಆಗ ನಾನು ಎರಡು ಮೂರು ವರ್ಷದವಳಿರಬೇಕು!! ಎಲ್ಲ ಮಕ್ಕಳು ಗುಂಪಾಗಿ ಒಟ್ಟಿಗೆ ಏನೋ ಕಿರುಚಿಕೊಂಡು ಗಲ್ಲಿಯ ಕೊನೆಯ ಮನೆಗೆ ಓಡಿ ಹೊಗುತ್ತಿದ್ದರು. ತಲೆ ಬುಡ ಏನು ಗೊತ್ತಿಲ್ಲದ ನಾನು ಸುಮ್ಮನೆ ಅವರೊಂದಿಗೆ, ಬಸವನ ಹಿಂದೆ ಬಾಲದಂತೆ ಓಡಿ ಹೋದೆ!! ಎಷ್ಟೊಂದು ಜನ ಆಗಾಗಲೇ ಅಲ್ಲಿ ಮುತ್ತಿದ್ದರು!! ಏನಾಗುತ್ತಿದೆ ಎಂದು ತಿಳಿಯದೆ ಸಲ್ಪ ಹೊತ್ತಿನ ತನಕ ನೋಡಿ ವಾಪಸ್ ಆದೆವು. ಮಾರನೇ ದಿನ ಅದೇ ಅದ್ಯಾಯ !! ಅವತ್ತು ಸಲ್ಪ ನೋಡ ಸಿಕ್ಕಿತು!! ಪುಟ್ಟ ಪುಟ್ಟ ಜನ ಅಷ್ಟು ಚಿಕ್ಕ ಡಬ್ಬದೊಳಗೆ!! ನಾವು ಆ ಡಬ್ಬಿ ಒಡೆದರೆ ಅವರು ಹೊರಗೆ ಬರಬಹುದೇ?? ಅವರು ಯಾಕೆ ಯಾವಾಗಲೂ ಕಪ್ಪು ಬಿಳುಪಿನ ಅಂಗಿ ಹಾಕಿದ್ದಾರೆ ?? ಇವೆಲ್ಲ ನಮ್ಮ ಗುಂಪಿನ ಸವಾಲುಗಳು !! ಆಗ ಅದನ್ನು ನೋಡಿ ಅದೇನು ಎಂದು ಎಲ್ಲರನ್ನೂ ಕೇಳಿದೆವು!! ನಿಜ !! ಅದು ಟಿ ವಿ !! ನಾವು ಮೊದಲ ಬಾರಿಗೆ ನೋಡಿದ ಕಪ್ಪು ಬಿಳುಪಿನ portable ಟಿ ವಿ ಅದು!!

ಆ ಮನೆಯ ಜನಕ್ಕೆ ಹೇಗೆ ಅನ್ನಿಸುತ್ತಿತ್ತೋ ಗೊತ್ತಿಲ್ಲ!! ಭಾನುವಾರ ಸಂಜೆ 3ಕ್ಕೆ ಅವರ ಮನೆಯಲ್ಲಿ ಹಾಜರಾಗುತ್ತಿದ್ದೆವು!! ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಎಲ್ಲ ಮಕ್ಕಳು ಗುಂಪಿನಲ್ಲಿ ಒಬ್ಬೊಬ್ಬರೇ, ಕಳ್ಳ ಹೆಜ್ಜೆ ಇಟ್ಟು ನುಗ್ಗುತ್ತಿದ್ದೆವು!! ಹೀಗೆ ಸಲ್ಪ ತಿಂಗಳುಗಳು ನಡೆಯಿತು!! ನಂತರ ಅಪ್ಪನಿಗೆ ವರ್ಗಾವಣೆಯಾಗಿ ತೀರ್ಥಹಳ್ಳಿಗೆ ಹೋಗುವಂತಾಗಿ ಟಿ ವಿ ಎಲ್ಲಿ ನೋಡುವುದೆಂದು ಬೇಜಾರಾಗಿತ್ತು!! ಆದರೆ ನಮ್ಮ ಪಕ್ಕದ ಮನೆಯ ನನ್ನ ಗೆಳತಿಯ ಮನೆಯಲ್ಲೇ ಇದ್ದುದರಿಂದ ಮನಸ್ಸಿಗೆ ಖುಷಿಯಾಗಿತ್ತು !! ಆದರೆ ಇದರಲ್ಲಿ ಬಣ್ಣ ಬಣ್ಣದ ಚಿತ್ರಗಳಿವೆ, ಗಾತ್ರದಲ್ಲಿ ಇನ್ನೂ ದೊಡ್ಡದು, ಏನಾದರೂ ಚಿತ್ರ ಮಬ್ಬಾದರೆ, ಆಂಟೆನಾ ತಿರುಗಿಸುವುದಕ್ಕೂ ಸುಲಭ ಯಾಕೆಂದರೆ ಊರಲ್ಲಿ ಮರದ ಮೇಲಿನ ಆಂಟೆನಾ ಇಲ್ಲಿಲ್ಲ !! ಇಲ್ಲಿ ಮನೆಯ ಪಕ್ಕದಲ್ಲೇ ಚುಚ್ಚಿದ್ದಾರೆ !!  ಆ ಟಿ ವಿ ಯನ್ನು ಇಡಲು ಒಂದು ಪೆಟ್ಟಿಗೆಯ ಮಾದರಿಯ , ಎರಡು ಬಾಗಿಲುಗಳುಳ್ಳ ಮೇಜು ಬೇರೆ!! ಎಲ್ಲವು ಮುಂಚೆ ನೋಡಿದ್ದಕ್ಕಿಂತ ಬಿನ್ನ !! ಭಾನುವಾರದ ಮಹಾಭಾರತ್  - ಅರ್ಥ ಆಗದಿದ್ದರೂ ಸುಮ್ಮನೆ ದಿಟ್ಟಸಿ ನೋಡುತ್ತಿದ್ದೆವು !!

ಸಲ್ಪ ದಿನಗಳ ನಂತರ ನಮ್ಮ ಮನೆಯ ಟಿ ವಿ ಗೆ ಸ್ವಾಗತ ಹೇಳುವ ದಿನ!! ರಾತ್ರಿ ಬೆಳಿಗ್ಗೆ ಎನ್ನದೆ ನೋಡಿದ್ದೇ ನೋಡಿದ್ದು !! ನಮಗೆ ಯಾವಾಗ ಬೇಕು ಆವಾಗ ಹಾಕಿ , ಆರ್ಥ ಆಗುವುದೋ ಇಲ್ಲವೋ ಎನ್ನುವ ಪರಿಯೇ ಇಲ್ಲದೆ, ನೋಡಿದ್ದೆವು !! ನಂತರ ವಸತಿ ಶಾಲೆಗೇ ತೆರಳುವ ಸಮಯ!! ಅಲ್ಲಿ ಹೇಗೆ , ಏನು ಎಲ್ಲಿ ಟಿ ವಿ ನೋಡುವುದು - ಏನು ಅರಿವಿಲ್ಲ !!! ಒಂದು ವಾರದ ನಂತರದ ಭಾನುವಾರ ಎಲ್ಲರು ಬೆಳಿಗ್ಗೆ ಬೇಗ ಬೇಗ ಎದ್ದು ಬಟ್ಟೆ ಒಗೆದು , ಮನೆಗೆಲಸ ಮುಗಿಸಿ ಸಜ್ಜಾಗುತ್ತಿದ್ದಾರೆ!! ಎಲ್ಲಿಗೆ ಎಂದು ಕೇಳಿದಾಗ - ಟಿ ವಿ ನೋಡಲು ಎಂದ ಉತ್ತರ ಸಮಾಧಾನ ನೀಡಿತ್ತು !! ಎಲ್ಲರೂ ಚಪ್ಪಲಿ ಹೊರಗೆ ಬಿಚ್ಚಿ ಒಳ ಹೊಕ್ಕು ಹೋಗುತ್ತಿದ್ದಾರೆ!! ದೇವಸ್ಥಾನ ದಲ್ಲೂ ಅಷ್ಟೊಂದು ಜೋಡು ಚಪ್ಪಲಿ ನೋಡಿರಲಿಲ್ಲ !! ಒಬ್ಬಬ್ಬರಿಗೆ ಒಂದೊಂದು ಜಾಗ ಮೊದಲೇ ಕಾಯ್ದಿರಿಸಿದ್ದಾರೆ !! ಹೊಸಬರು ಹಿಂದೆ ಇರುವ ಜಾಗಲ್ಲಿ ಕೂರಬೇಕಷ್ಟೇ !! ಹಿರಿಯ ವಿದ್ಯಾರ್ಥಿಗಳು ಟಿ  ವಿ ಗೆ ಹತ್ತಿರ ಕುಳಿತರೆ , ಹೊಸ ಮತ್ತು ಕಿರಿಯ ಮಕ್ಕಳು ಹಿಂಬದಿಯಲ್ಲಿ !! ಯಾವುದಾದರೂ ಉಪಾದ್ಯಯರ ಮನೆಯ ಭಾನುವಾರದ ಚಿತ್ರಣ ವಿದು !! ತದ ನಂತರ ಹುಡುಗಿಯರಿಗೆಂದೇ ಹೊಸ ಟಿ ವಿ ಇರಿಸಿದ್ದರು !! ಅಲ್ಲಿಯೂ ಕೂಡ ಆಂಟೆನಾ ದ ಕಾರುಬಾರು ಜೋರಾಗೆ ಇತ್ತು !! ಭಾನುವಾರದ ಕನ್ನಡ ಚಲನ ಚಿತ್ರ , ಬುಧವಾರದ ಚಿತ್ರಹಾರ್  ಹಾಗು ಶುಕ್ರವಾರದ ಚಿತ್ರಮಂಜರಿ ನಮ್ಮ ಹಾಜರಿಲ್ಲದೆ ಮುಂದುವರೆಯುತ್ತಿರಲಿಲ್ಲ !!

ವರ್ಷಗಳು ಕಳೆದು ಕಾಲೇಜ್ ಗೆ ಕಾಲಿರಿಸಿದಾಗ ಟಿ ವಿ ಯ ವ್ಯಾಮೋಹ ಕಡಿಮೆಯಾಗಿತ್ತಾದರೂ , ಅದರ ಗಾತ್ರ , ಆಯ್ಕೆಗಳು ಜಾಸ್ತಿಯಾಗಿದ್ದವು !! ಎರಡು ಜನ ಎತ್ತಿ ಇಡು ವಂತಹ ದೊಡ್ಡ ಟಿ ವಿ ಗಳು !! ಮನೆಯ ಜನ ಮತ್ತು ನೆಂಟರಿಷ್ಟರು ನೋಡುವಂತಹ ಹೋಂ ಥೀಯೇಟರ್ ಗಳು !! ವಾರಕ್ಕೊಂದು ಕನ್ನಡ ಚಲನಚಿತ್ರದ ಬದಲು  , ಯಾವಾಗಲೂ ನೋಡಬಹುದಾದ ಆಯ್ಕೆ !! ಬೇಕೆಂದಾಗ ಕೇಳಬಹುದಾದ ಹಾಡುಗಳು !! ಅದೇ ಸಮಯದಲ್ಲಿ computers  ಜಾಸ್ತಿ ಆಗಿ ,ಇಂಟರ್ನೆಟ್ ನ ಪಾದಾರ್ಪಣೆ ಶುರುವಾಗಿತ್ತು  !! ಟಿ ವಿ ಯ ಮೇಲಿನ  ಆಸಕ್ತಿ , computers ಮೇಲೆ ಬಂದಾಗಿತ್ತು !!

ಇತ್ತೀಚಿಗೆ ಗೋಡೆಗೆ ತಗುಲಿ ಹಾಕುವಂತಹ , ಸ್ಲೇಟ್ ನ ಹಾಗೆ ತೆಳ್ಳಗೆ ಇರುವಂತಹ  ದೊಡ್ಡದಾದ ಟಿ ವಿ ಗಳು !! ಅಂಕೆಗಳ ಎಣಿಕೆಗೆ ಸಿಗದಂತಹ ಚಾನೆಲ್ ಗಳು, ಕಂಪ್ಯೂಟರ್ ಸ್ಕ್ರೀನ್ ಹಾಗೆ ಮಾರ್ಪಾಡಾಗುವ ಟಿ  ವಿ ಯ ಸ್ಕ್ರೀನ್ ಗಳು , ಹತ್ತು ಹಲವಾರು ವಿಧಗಳು!!! ಯಾವ ಭಾಷೆಯ , ಯಾವ ದೇಶದ , ಯಾವ ರೀತಿಯ ಪ್ರದರ್ಶನಗಳನ್ನಾದರೂ ನೋಡಬಹುದು !! ಅತಿ ಎನ್ನುವ ಹಾಗೆ ಇತ್ತೀಚಿಗೆ ರಿಯಾಲಿಟಿ ಶೋ ಗಳ ಹಾವಳಿ ಜಾಸ್ತಿಯಾಗಿ ಒಬ್ಬ ವ್ಯಕ್ತಿಯ ವ್ಯೆಯಕ್ತಿಕ ವಿಷಯಗಳು ಗೌಪ್ಯತೆಯ ಬದಲು ಎಲ್ಲೆಂದರಲ್ಲಿ ಪ್ರಸಾರಗೊಳ್ಳುತ್ತಿದೆ !! ರಾಮಾಯಣ , ಮಹಾಭಾರತದಂತಹ ದಾರಾವಾಹಿಗಳು ಆಧುನೀಕರಣಗೊಂಡಿವೆ. ಒಂದು ವಾರದಲ್ಲಿ ಮುಗಿಯಬಹುದಾದ ಸಾಮಾಜಿಕ ಅತ್ತೆ ಸೊಸೆ ಜಗಳವಿರುವ ದಾರಾವಾಹಿಯನ್ನು ವರ್ಷಾನುಗಟ್ಟಲೆ ಎಳೆಯಲಾಗುತ್ತಿದೆ !! ಆದರೆ ಒಳ್ಳೆಯ ಜ್ಞಾನ ಸಂಪಾದನೆಗೆ ಒಳ್ಳೆಯ ಅಭಿರುಚಿಯುಳ್ಳ ವಿಷಯಗಳನ್ನು ಬಿತ್ತರಿಸಲಾಗುತ್ತಿದೆ!!

ಆದರೆ ನನ್ನಲ್ಲಿದ್ದ  ಮೊದಲ ಕುತೂಹಲ ಹಾಗು ಆಸಕ್ತಿ ಟಿ ವಿ ಯಾ ಮೇಲೆ ಅಷ್ಟಾಗಿ ಉಳಿದಿಲ್ಲ !! ನೋಡಲು ಮನೆಯಲ್ಲಿ ಟಿ ವಿ ಇಲ್ಲದಿರುವಾಗ  , ಸಮಯ ಬಹಳ ಇತ್ತು - ಅದನು ನೋಡುವ ಆಸಕ್ತಿ ಬಹಳ ಇತ್ತು , ಒಟ್ಟಿಗೆ ನೋಡಲು ಗುಂಪೊಂದಿತ್ತು !!
ಮನೆಯಲ್ಲಿ ಟಿ ವಿ ಬಂದಾಗ , ಮನೆಯವರೆಲ್ಲರೂ ಕುಳಿತು ನೋಡಬಹುದಾದ ಪ್ರೋಗ್ರಾಮ್ ಗಳು ಇದ್ದವು , ಅದರಲ್ಲಿ ಮಜಾ ಕೂಡ ಇತ್ತು !! ಇತ್ತೀಚಿಗೆ ಟಿ ವಿ ಎಂದರೆ ಒಬ್ಬರೇ ಇರುವಾಗ ಬೇಜಾರು ಕಳೆಯಲು ಇರುವ ಸಾಧನ ಅನ್ನಿಸುತ್ತಿದೆ !! ಕಾರಣ ಸಮಯದ ಅಭಾವ !! ನೂರಾರು ಚಾನೆಲ್ ಗಳ ಹಾವಳಿ !! ನೂರೊಂದು ಅಡಿಗೆ ಮಾಡುವ , ಜಾತಕ ಹೇಳುವ ಜಾಣ ಪೆದ್ದ ಚಾನೆಲ್ ಗಳು!!ಏನೂ ವಿಷಯವಿಲ್ಲದಿದ್ದರೂ ಹಳೆಯ ವಿಷಗಳ ಇತಿಹಾಸ ಕೆದಕಿ ಹುಣ್ಣು ಮಾಡಿ ಬಿತ್ತರಿಸುವ 24X7 ನ್ಯೂಸ್ ಚಾನೆಲ್ ಗಳು !!

ಬದಲಾಗೋ ಸಮಯಕ್ಕೆ, ಬದಲಾಗುತ್ತಿರುವ ವಿಷಯಗಳು , ಬದಲಾಗುತ್ತಿರುವ ಸಾಧಕಗಳ ನಡುವೆ ಟಿ ವಿ ಸಹ ಬಹಳ ಬದಲಾವಣೆ ಕಂಡಿದೆ ಆದರೆ ನೋಡಲಿಚ್ಚಿಸುವರಿಗೆ ಸಮಯದ ಅಭಾವ ಬಹಳಷ್ತಿದೆ !!



Comments

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020