Posts

Showing posts from May, 2015

ಹಾರೈಕೆ..

ಸಾಂತ್ವನದ ನುಡಿಗಳಿಗೆ ಆಕಾಶವಿಲ್ಲದಿರುವಾಗ , ನಾ ಬದುಕಿದ ಬದುಕು ಯಾರಿಗೂ ಬೇಡವೆಂಬ ಹಂಬಲ ನನ್ನದಾದಾಗ, ನಾ ಕಂಡ ಕನಸು ಯಾರಿಗೂ ಬೇಳದಿರಲೆಂಬ  ಭಾವ ಮನದಲ್ಲಿರುವಾಗ, ಯಾರ ಹಿಂದೆಯೂ ನೆರಳಾಗಿ ಉಳಿಯದೆ ಇರಬೇಕೆಂಬ ನಂಬಿಕೆ ಅಧಿಕವಾದಾಗ ಪದಗಳೇ ಉಳಿದಿಲ್ಲ ಒಡಲಲಿ ನಿನ್ನದೇ ದಾರಿ , ನಿನ್ನದೇ ಪಯಣಕೆ .. ನನ್ನ ಈ ಹಾರೈಕೆ !!

ಮುನ್ನಡೆ ಮಗುವೆ...

ಹಿಂತಿರುಗಿ ಮತ್ತೆ ನೋಡುವಾಸೆ ಬೆಚ್ಚನೆ ಕಂಬಳಿಯೊಳು  ಅಡಗಿದ ನಿನ್ನ ಮುದ್ದು ಮೊಗವ.. ಹೊರಟೆನೆಂದರೆ ಬರುವುದ ಅರಿಯೆ ಛಾಪಿದೆ ಮನದೊಳು ನಿನ್ನ ಚಹರೆಯ ರುಜುವು ! ಅದರಲೆ ದಿನ ದೂಡುವೆ ನಿನ್ನನು ನೆನೆದು!! ಅಂಗಳದಿ ಹರಡಿದ ಗೊಂಬೆಗಳೆರೆಡು ನಿನ್ನೆಯ ಸ್ಪರ್ಶಕೆ ಕಾದಿಹ ಅನಿಸಿಕೆ ಒಣಗಲು ಹರಡಿಹ ನಿನ್ನಯ ಅರಿವೆ ನಿನ್ನಯ ನೆನಪ ಕದಡಿದೆ ಮನಕೆ ಈ ಸಾಕ್ಷಿಗಳಲ್ಲೇ ದಿನ ದೂಡುವೆ ನಿನ್ನಯ ನೆನೆದು!! ಮೇಜಿನ ಮೇಲಿನ ನಿನ್ನಯ ಔಷಧಿ ನಿನ್ನಯಾ ಸುರಿವ ಮೂಗನು ನೆನೆಸಿ ಹಾಗೆ ಮೇಲಿನ ನಿನ್ನಯ ಚಿತ್ರ ಹಾಲುಗೆನ್ನೆಯ ನಿನ್ನ ನಗುವನು ತೇಲಿಸಿ ಮರೆಸಿದೆ ನನ್ನ ನಿನ್ನಯ ನೆನಪಲಿ, ಆ ನೆನಪಿನಲ್ಲೇ  ದಿನ ದೂಡುವೆನು!! ಪುಟ್ಟನೆ ಚಪ್ಪಲಿ ಕಾಲಲಿ ಮೆಟ್ಟಿ ಛಲದೊಳು ಮುಂದೆ ನಡೆಯುತ ನೀನು ದೈರ್ಯವ ಮನದಾಳದಿ ನೆಟ್ಟು ಮುನ್ನಡೆ  ಜಗವನು ಎದುರಿಸೋ ಹೆಜ್ಜೆಯ ಇಟ್ಟು ಇರುವೆನು ನಿನ್ನೊಡನಾಡಿಯಾಗಿ, ಜೀವನ ತೇಯುವ ದೀವಿಗೆಯಾಗಿ !!