ಮುನ್ನಡೆ ಮಗುವೆ...

ಹಿಂತಿರುಗಿ ಮತ್ತೆ ನೋಡುವಾಸೆ
ಬೆಚ್ಚನೆ ಕಂಬಳಿಯೊಳು  ಅಡಗಿದ ನಿನ್ನ ಮುದ್ದು ಮೊಗವ..
ಹೊರಟೆನೆಂದರೆ ಬರುವುದ ಅರಿಯೆ
ಛಾಪಿದೆ ಮನದೊಳು ನಿನ್ನ ಚಹರೆಯ ರುಜುವು !
ಅದರಲೆ ದಿನ ದೂಡುವೆ ನಿನ್ನನು ನೆನೆದು!!

ಅಂಗಳದಿ ಹರಡಿದ ಗೊಂಬೆಗಳೆರೆಡು
ನಿನ್ನೆಯ ಸ್ಪರ್ಶಕೆ ಕಾದಿಹ ಅನಿಸಿಕೆ
ಒಣಗಲು ಹರಡಿಹ ನಿನ್ನಯ ಅರಿವೆ
ನಿನ್ನಯ ನೆನಪ ಕದಡಿದೆ ಮನಕೆ
ಈ ಸಾಕ್ಷಿಗಳಲ್ಲೇ ದಿನ ದೂಡುವೆ ನಿನ್ನಯ ನೆನೆದು!!

ಮೇಜಿನ ಮೇಲಿನ ನಿನ್ನಯ ಔಷಧಿ
ನಿನ್ನಯಾ ಸುರಿವ ಮೂಗನು ನೆನೆಸಿ
ಹಾಗೆ ಮೇಲಿನ ನಿನ್ನಯ ಚಿತ್ರ
ಹಾಲುಗೆನ್ನೆಯ ನಿನ್ನ ನಗುವನು ತೇಲಿಸಿ
ಮರೆಸಿದೆ ನನ್ನ ನಿನ್ನಯ ನೆನಪಲಿ, ಆ ನೆನಪಿನಲ್ಲೇ  ದಿನ ದೂಡುವೆನು!!

ಪುಟ್ಟನೆ ಚಪ್ಪಲಿ ಕಾಲಲಿ ಮೆಟ್ಟಿ
ಛಲದೊಳು ಮುಂದೆ ನಡೆಯುತ ನೀನು
ದೈರ್ಯವ ಮನದಾಳದಿ ನೆಟ್ಟು
ಮುನ್ನಡೆ  ಜಗವನು ಎದುರಿಸೋ ಹೆಜ್ಜೆಯ ಇಟ್ಟು
ಇರುವೆನು ನಿನ್ನೊಡನಾಡಿಯಾಗಿ, ಜೀವನ ತೇಯುವ ದೀವಿಗೆಯಾಗಿ !!











Comments

Popular posts from this blog

ಅವಳು!!!

ಹೋಗಿ ಬಾ ಮಗಳೇ !!

WIFE - The Companion