Posts

Showing posts from November, 2015

MARTYR - Obituary for 26/11 Heroes!!

That time had come to bid the last good bye.. That moment when the bullet embraced me.. That moment When my energy failed to trigger my pistol.. That only moment I felt sad and helpless to my country.. That moment I lied on my back not to face my badges to ground.. That moment when I smiled at  mother earth as she was waiting for me from long time.. That moment my un uttered prayer and promise to my country for safety flashed.. The breath was slipping but I held it back to pray my homage... My mother was calling me to feed.. My wife was praying for my longer life.. My only kid was waiting for my shoulders for his elephant game.. My father was proud explaining my triumph to the tribe.. I could see the neighbors who wished me, My friends who helped me, My school which taught me, the teachers who made me.. The ground I played, the fields painted green... But all I could witness now is the blue sky and the blood shed ed ground.. The blue is turning dark bla...

ಆಮಂತ್ರಣ

ಮೊದಲಾದರೆ ಮದುವೆ ಮನೆಯೆಂದರೆ ಮದುವೆಯೊಂದಿರುತ್ತಿತ್ತು .. ತಿಂಗಳ ಮೊದಲೇ ಮನೆ ತುಂಬ ಜನ ,ಸದ್ದು ಸಡಗರವೊಂದಿರುತಿತ್ತು.. ವಾರಗಳ ಮೊದಲೇ ಆಮಂತ್ರಣವೊಂದು  ಛಾಪಿರುತಿತ್ತು.. ಮನೆಯ ಮಕ್ಕಳಿಗೆ ಆಮಂತ್ರಣಕ್ಕೆ ಅರಿಶಿನ ಕುಂಕುಮ ಹಚ್ಚುವ ಕೆಲಸವೊಂದಿರುತ್ತಿತ್ತು.. ನೆಂಟರಿಷ್ಟರು, ಬಂಧುಗಳ  ಹಾಗು ಗೆಳೆಯರ ಪಟ್ಟಿ ಮಾಡುವ ಜನಗಳಿದ್ದರು.. ಎಷ್ಟಾದರೂ ದೂರ ಲೆಕ್ಕಿಸದೆ ಪತ್ರಿಕೆ ತಲುಪಿಸುವ ಕಾರ್ಯವೊಂದಿರುತಿತ್ತು.. ಅದರೊಡನೆ ಬೆಚ್ಚಗಿನ ಭಾವನೆಗಳಿರುತಿತ್ತು.. ಕಷ್ಟ ಸುಖಗಳ ಮಾತುಗಳೆರಡಿರುತಿತ್ತು.. ಈಗ ಮದುವೆಗೂ  ಮೊಬೈಲ್ ಯೋಗ !! ಪತ್ರಿಕೆಯ ಗೋಜು ಬೇಡ ಅದರೊಂದಿಗಿರುವ ಕೆಲಸವೂ ಬೇಡ ಪತ್ರಿಕೆ ತಲುಪಿಸುವ  ರೇಜಿಗೆ ಬೇಡವೇ ಬೇಡ ಮಾತನಾಡುವುದು ದೂರದ ಮಾತು.. ಯಾವುದೋ ಒಂದು ಸೋಶಿಯಲ್ ಮೀಡಿಯಾಗೆ ಒಂದಿಷ್ಟು ಶಬ್ಧಗಳ ಪೋಣಿಸಿ ವಿಷಯ ತೇಲಿಸಿದರೆ ಕೆಲಸ ಸಮಾಪ್ತಿ.. ಹೃದಯ ಬೆಸೆಯುವ ಮಾತುಗಳು ಮೂಕವಾಗಿ, ಹರ್ಷ ವ್ಯಕ್ತಪಡಿಸುವ ಕಣ್ಣುಗಳು ಕುರುಡಾಗಿ, ಶುಭವಾರ್ತೆ ಕೇಳುವ ಶ್ರವಣಗಳು ಕಿವುಡಾಗಿವೆ ಭಾವನೆಗಳ ಬಂಡಿಯಂತು ಖಾಲಿ ಖಾಲಿ.. ಯಾಕೆ  ಈ ರೀತಿಯ ಖಯಾಲಿ!!!???

ಅನಿಸಿಕೆ

ಕಪ್ಪಿಟ್ಟ ಮೋಡ , ತುಂತುರ ಹನಿಗಾನ  ಜೊತೆಗೆ ಸುಯ್ಯನೆ ಬೀಸುವ ಗಾಳಿಗೆ ಮರದ ಎಲೆಗಳ ನರ್ತನ, ನಾ ಮುಂದು ತಾ ಮುಂದು ಎನ್ನುವ ವಾಹನಗಳ ದಟ್ಟಣೆ, ಮಳೆ ಜೋರಾಗಿ ಸುರಿಯುವ ಎಲ್ಲ ಮುನ್ಸೂಚನೆ!!  ಕಾರ್ ನಲ್ಲಿ  ನಾನು ಹಾಗೂ ನನ್ನ ಕಾಲೇಜ್ ನ ಸ್ನೇಹಿತ !! ಎಲ್ಲಿಗೂ ಹೋಗಲಾರದಂತಹ ಟ್ರಾಫಿಕ್ , ಸ್ಸ್ಟೀರಿಯೋ ಸೆಟ್ ನಲ್ಲಿ ಮಧುರವಾದ ಲತಾ ಮಂಗೇಶ್ಕರ್ ಹಾಡು. ಮದ್ಯಾಹ್ನ ಮೂರು ಗಂಟೆಯಾದರೂ ಆಫೀಸ್ ಹೋಗಿ ಮಾಡೋದಾದರೂ ಏನು ಎಂಬ ಅಸಡ್ಡೆ.. ಊಟ ಮುಗಿಸಿ , ಮೊಸರನ್ನ  ತನ್ನ ಕಾರ್ಯ ಶುರು ಮಾಡುವ ವೇಳೆ , ಇಬ್ಬರಿಗೂ ಆಕಳಿಕೆ!!! ಮಾತು ಕಾಲೇಜ್ ಸಹಪಾಟಿ ಗಳಿಂದ  ಶುರುವಾಗಿ , ಲೆಕ್ಚರರ್ ಗಳ ಬಗ್ಗೆ  ಟೀಕೆ ಮುಂದುವರೆಸುತ್ತಾ ಪ್ರಸ್ತುತ ಕೆಲಸದವರೆಗೆ ಮುಂದುವರೆದಿತ್ತು..  ಹೀಗೆ ಮಾತು ಮುಂದುವರೆಸುತ್ತಾ  "ನಾನು ನನ್ನ ಕುಟುಂಬ ಹಾಗು ಸ್ನೇಹಿತನ ಕುಟುಂಬ ಸಿಂಗಾಪುರ್  ಹಾಗೂ ಮಲೇಷ್ಯಾ ಟ್ರಿಪ್ ಹೋಗ್ತಾ ಇದ್ದೀವಿ, ಟಿಕೆಟ್ ಬುಕ್ ಮಾಡಿಸಿದೆ, ಒಂದು ವಾರಕ್ಕೆ ಹೋಗ್ತಾ ಇದ್ದೀವಿ.. ತಲೆಗೆ ಒಂದು ಲಕ್ಷ ಎಂದ" . ಒಂದು ಗಳಿಗೆಗೆ ಏನು ಹೇಳಲು ತೋಚಲಿಲ್ಲ.. ಹಾಗೆ ನಕ್ಕು  "ವೆರಿ ಗುಡ್" ಎಂದು  ಉದ್ಗರಿಸಿದೆ.  ನನ್ನ ತಲೆಯೊಳಗೆ ತಿಳಿಯದೆ ಈ ಲಕ್ಷದ ಹುಳ ಗುಣಾಕಾರದಲ್ಲಿ ತೊಡಗಿತ್ತು !! ಮಗು , ಗಂಡ ಹೆಂಡತಿ ಗೆ ಏನಿಲ್ಲವೆಂದರೂ ಮೂರು ಲಕ್ಷ !! ಅದು ಬರಿ ಹೋಗಿ ಬರೋ ಖರ್ಚು ಹಾಗು ತಂಗುವ...