ಆಮಂತ್ರಣ
ಮೊದಲಾದರೆ
ಮದುವೆ ಮನೆಯೆಂದರೆ
ಮದುವೆಯೊಂದಿರುತ್ತಿತ್ತು ..
ತಿಂಗಳ ಮೊದಲೇ ಮನೆ ತುಂಬ
ಜನ ,ಸದ್ದು ಸಡಗರವೊಂದಿರುತಿತ್ತು..
ವಾರಗಳ ಮೊದಲೇ
ಆಮಂತ್ರಣವೊಂದು ಛಾಪಿರುತಿತ್ತು..
ಮನೆಯ ಮಕ್ಕಳಿಗೆ
ಆಮಂತ್ರಣಕ್ಕೆ ಅರಿಶಿನ ಕುಂಕುಮ
ಹಚ್ಚುವ ಕೆಲಸವೊಂದಿರುತ್ತಿತ್ತು..
ನೆಂಟರಿಷ್ಟರು, ಬಂಧುಗಳ ಹಾಗು ಗೆಳೆಯರ
ಪಟ್ಟಿ ಮಾಡುವ ಜನಗಳಿದ್ದರು..
ಎಷ್ಟಾದರೂ ದೂರ ಲೆಕ್ಕಿಸದೆ
ಪತ್ರಿಕೆ ತಲುಪಿಸುವ ಕಾರ್ಯವೊಂದಿರುತಿತ್ತು..
ಅದರೊಡನೆ ಬೆಚ್ಚಗಿನ ಭಾವನೆಗಳಿರುತಿತ್ತು..
ಕಷ್ಟ ಸುಖಗಳ ಮಾತುಗಳೆರಡಿರುತಿತ್ತು..
ಈಗ ಮದುವೆಗೂ ಮೊಬೈಲ್ ಯೋಗ !!
ಪತ್ರಿಕೆಯ ಗೋಜು ಬೇಡ
ಅದರೊಂದಿಗಿರುವ ಕೆಲಸವೂ ಬೇಡ
ಪತ್ರಿಕೆ ತಲುಪಿಸುವ ರೇಜಿಗೆ ಬೇಡವೇ ಬೇಡ
ಮಾತನಾಡುವುದು ದೂರದ ಮಾತು..
ಯಾವುದೋ ಒಂದು ಸೋಶಿಯಲ್ ಮೀಡಿಯಾಗೆ
ಒಂದಿಷ್ಟು ಶಬ್ಧಗಳ ಪೋಣಿಸಿ
ವಿಷಯ ತೇಲಿಸಿದರೆ
ಕೆಲಸ ಸಮಾಪ್ತಿ..
ಹೃದಯ ಬೆಸೆಯುವ ಮಾತುಗಳು ಮೂಕವಾಗಿ,
ಹರ್ಷ ವ್ಯಕ್ತಪಡಿಸುವ ಕಣ್ಣುಗಳು ಕುರುಡಾಗಿ,
ಶುಭವಾರ್ತೆ ಕೇಳುವ ಶ್ರವಣಗಳು ಕಿವುಡಾಗಿವೆ
ಭಾವನೆಗಳ ಬಂಡಿಯಂತು ಖಾಲಿ ಖಾಲಿ..
ಯಾಕೆ ಈ ರೀತಿಯ ಖಯಾಲಿ!!!???
ಮದುವೆ ಮನೆಯೆಂದರೆ
ಮದುವೆಯೊಂದಿರುತ್ತಿತ್ತು ..
ತಿಂಗಳ ಮೊದಲೇ ಮನೆ ತುಂಬ
ಜನ ,ಸದ್ದು ಸಡಗರವೊಂದಿರುತಿತ್ತು..
ವಾರಗಳ ಮೊದಲೇ
ಆಮಂತ್ರಣವೊಂದು ಛಾಪಿರುತಿತ್ತು..
ಮನೆಯ ಮಕ್ಕಳಿಗೆ
ಆಮಂತ್ರಣಕ್ಕೆ ಅರಿಶಿನ ಕುಂಕುಮ
ಹಚ್ಚುವ ಕೆಲಸವೊಂದಿರುತ್ತಿತ್ತು..
ನೆಂಟರಿಷ್ಟರು, ಬಂಧುಗಳ ಹಾಗು ಗೆಳೆಯರ
ಪಟ್ಟಿ ಮಾಡುವ ಜನಗಳಿದ್ದರು..
ಎಷ್ಟಾದರೂ ದೂರ ಲೆಕ್ಕಿಸದೆ
ಪತ್ರಿಕೆ ತಲುಪಿಸುವ ಕಾರ್ಯವೊಂದಿರುತಿತ್ತು..
ಅದರೊಡನೆ ಬೆಚ್ಚಗಿನ ಭಾವನೆಗಳಿರುತಿತ್ತು..
ಕಷ್ಟ ಸುಖಗಳ ಮಾತುಗಳೆರಡಿರುತಿತ್ತು..
ಈಗ ಮದುವೆಗೂ ಮೊಬೈಲ್ ಯೋಗ !!
ಪತ್ರಿಕೆಯ ಗೋಜು ಬೇಡ
ಅದರೊಂದಿಗಿರುವ ಕೆಲಸವೂ ಬೇಡ
ಪತ್ರಿಕೆ ತಲುಪಿಸುವ ರೇಜಿಗೆ ಬೇಡವೇ ಬೇಡ
ಮಾತನಾಡುವುದು ದೂರದ ಮಾತು..
ಯಾವುದೋ ಒಂದು ಸೋಶಿಯಲ್ ಮೀಡಿಯಾಗೆ
ಒಂದಿಷ್ಟು ಶಬ್ಧಗಳ ಪೋಣಿಸಿ
ವಿಷಯ ತೇಲಿಸಿದರೆ
ಕೆಲಸ ಸಮಾಪ್ತಿ..
ಹೃದಯ ಬೆಸೆಯುವ ಮಾತುಗಳು ಮೂಕವಾಗಿ,
ಹರ್ಷ ವ್ಯಕ್ತಪಡಿಸುವ ಕಣ್ಣುಗಳು ಕುರುಡಾಗಿ,
ಶುಭವಾರ್ತೆ ಕೇಳುವ ಶ್ರವಣಗಳು ಕಿವುಡಾಗಿವೆ
ಭಾವನೆಗಳ ಬಂಡಿಯಂತು ಖಾಲಿ ಖಾಲಿ..
ಯಾಕೆ ಈ ರೀತಿಯ ಖಯಾಲಿ!!!???
Comments
Post a Comment