ನಗು ಮಗು!!!
ಮಾನವನ ಜನ್ಮ ಪವಿತ್ರವಾದುದು. ಈ ಜನ್ಮ ನಮ್ಮ ಜನ್ಮದಾತರಿಗೆ ಸಮರ್ಪಣೆ! ಸಿಗುವ ಒಂದು ಜನ್ಮ ಪಾವನವಾಗುವುದು, ಅದನ್ನು ಅರ್ಥಪೂರ್ಣವಾಗಿ ಅನುಭವಿಸಿ ಬದುಕಿದಾಗ! ಒಂದು ಹೆಣ್ಣು ಮಗುವಿಗೆ , ಹೆಣ್ತನ ಸ್ವಾಭಾವಿಕ!! ಆದರೆ ತಾಯ್ತನ ದೈವಿಕ !! ನನ್ನ ಅಮ್ಮನ ನೆನೆಯುತ್ತ ಈ ಬರವಣಿಗೆ ಸಾಗಿದೆ! ಈ ಲೇಖನ ಅವಳಿಗೆ ಸಮರ್ಪಣೆ! ತಿಂಗಳುಗಟ್ಟಲೆ ವಾಂತಿ, ವಾರನುಗಟ್ಟಲೆ ತಲೆ ಸುತ್ತು , ದಿನಕ್ಕೊಂದರಂತೆ ಹೊಸ ನೋವು ಹಾಗು ಅನುಭವ!!! ನನ್ನೊಳಗಿನ ಜೀವ ಜೀವನ ಪಡೆಯಲು ಕೆಲವೇ ತಿಂಗಳು ಎಂದು ನೆನೆದಾಗ ಇವೆಲ್ಲ ನೋವು, ಸಂಕಟ ಶಮನವಾಗುತ್ತಿತ್ತು ! ಅವತ್ತು ಬೆಳಿಗ್ಗೆ ಆರಕ್ಕೆ ಏನೋ ಸಂಕಟ, ಬೇಗ ಬೇಗ ಅಮ್ಮನಿಗೆ ಏನಾಗುತ್ತಿದೆ ಎಂದು ತಿಳಿಸಿ, ಆಫೀಸ್ ಕೆಲಸಗಳನ್ನೆಲ್ಲ ಬೇರೆಯವರಿಗೆ ರವಾನಿಸಿ, ಆ ಸಂಕಟ , ಆ ನೋವು ಹೆರಿಗೆ ನೋವೆಂದು ಖಾತ್ರಿಯಾದಾಗ ಕಾರ್ ಅಲ್ಲಿ ಆಸ್ಪತ್ರೆ ವರೆಗೆ ಪಯಣ! ಆ ನೋವಲ್ಲು ಆಸ್ಪತ್ರೆಯ ಎಲ್ಲ ವಿವರಗಳನ್ನು ಭರ್ತಿ ಮಾಡಿ, ಡಾಕ್ಟರಿಗೆ ಫೋನ್ ಮಾಡಿ , ನರ್ಸ್ ತೋರಿಸಿದ ಹಾಸಿಗೆ ಮೇಲೆ ಬಿದ್ದಿದ್ದಾಯ್ತು !! ವಿಧ ವಿಧವಾದ ಚೆಕ್ ಅಪ್ ಗಳು , ನೋವು ಅಳೆಯುವ ಮಾಪಕಗಳು , ಮತ್ತಿನ್ನೇನೋ ತರುತ್ತ ಓಡಾಡುತ್ತಿರುವ ನರ್ಸ್ ಗಳು! ಕಂಗಾಲಾಗಿ ಏನಾಗುವುದೋ ಎನ್ನುವ ಅಮ್ಮನ ಕಣ್ಣುಗಳು!! ಆಫೀಸ್ ಗೆ ಹೋಗಲಾರದೆ ಮರಳಿರುವ ತನ್ನವರು!! ನೋವೇನು ಅಷ್ಟು ಅನ್ನಿಸಲಿಲ್ಲ ಮೊದ ಮೊದಲು!! ಬರ ಬರುತ್ತಾ ಜಾಸ್ತಿ ಆಗಿ ...