ನಗು ಮಗು!!!

ಮಾನವನ ಜನ್ಮ ಪವಿತ್ರವಾದುದು. ಈ ಜನ್ಮ ನಮ್ಮ ಜನ್ಮದಾತರಿಗೆ ಸಮರ್ಪಣೆ! ಸಿಗುವ ಒಂದು ಜನ್ಮ ಪಾವನವಾಗುವುದು, ಅದನ್ನು ಅರ್ಥಪೂರ್ಣವಾಗಿ ಅನುಭವಿಸಿ ಬದುಕಿದಾಗ! ಒಂದು ಹೆಣ್ಣು ಮಗುವಿಗೆ , ಹೆಣ್ತನ ಸ್ವಾಭಾವಿಕ!! ಆದರೆ ತಾಯ್ತನ ದೈವಿಕ !! ನನ್ನ ಅಮ್ಮನ ನೆನೆಯುತ್ತ ಈ ಬರವಣಿಗೆ ಸಾಗಿದೆ! ಈ ಲೇಖನ ಅವಳಿಗೆ ಸಮರ್ಪಣೆ!

ತಿಂಗಳುಗಟ್ಟಲೆ ವಾಂತಿ, ವಾರನುಗಟ್ಟಲೆ ತಲೆ ಸುತ್ತು , ದಿನಕ್ಕೊಂದರಂತೆ ಹೊಸ ನೋವು ಹಾಗು ಅನುಭವ!!! ನನ್ನೊಳಗಿನ ಜೀವ ಜೀವನ ಪಡೆಯಲು ಕೆಲವೇ ತಿಂಗಳು ಎಂದು ನೆನೆದಾಗ ಇವೆಲ್ಲ ನೋವು, ಸಂಕಟ ಶಮನವಾಗುತ್ತಿತ್ತು ! ಅವತ್ತು ಬೆಳಿಗ್ಗೆ ಆರಕ್ಕೆ ಏನೋ ಸಂಕಟ, ಬೇಗ ಬೇಗ ಅಮ್ಮನಿಗೆ  ಏನಾಗುತ್ತಿದೆ ಎಂದು ತಿಳಿಸಿ, ಆಫೀಸ್ ಕೆಲಸಗಳನ್ನೆಲ್ಲ ಬೇರೆಯವರಿಗೆ ರವಾನಿಸಿ, ಆ ಸಂಕಟ , ಆ ನೋವು ಹೆರಿಗೆ ನೋವೆಂದು ಖಾತ್ರಿಯಾದಾಗ ಕಾರ್ ಅಲ್ಲಿ ಆಸ್ಪತ್ರೆ ವರೆಗೆ ಪಯಣ! ಆ ನೋವಲ್ಲು ಆಸ್ಪತ್ರೆಯ ಎಲ್ಲ ವಿವರಗಳನ್ನು ಭರ್ತಿ ಮಾಡಿ, ಡಾಕ್ಟರಿಗೆ ಫೋನ್ ಮಾಡಿ , ನರ್ಸ್ ತೋರಿಸಿದ ಹಾಸಿಗೆ ಮೇಲೆ ಬಿದ್ದಿದ್ದಾಯ್ತು !!
ವಿಧ ವಿಧವಾದ ಚೆಕ್ ಅಪ್ ಗಳು ,  ನೋವು ಅಳೆಯುವ ಮಾಪಕಗಳು , ಮತ್ತಿನ್ನೇನೋ ತರುತ್ತ ಓಡಾಡುತ್ತಿರುವ ನರ್ಸ್ ಗಳು! 
ಕಂಗಾಲಾಗಿ ಏನಾಗುವುದೋ ಎನ್ನುವ  ಅಮ್ಮನ ಕಣ್ಣುಗಳು!! ಆಫೀಸ್ ಗೆ ಹೋಗಲಾರದೆ ಮರಳಿರುವ ತನ್ನವರು!! ನೋವೇನು ಅಷ್ಟು ಅನ್ನಿಸಲಿಲ್ಲ ಮೊದ ಮೊದಲು!! ಬರ ಬರುತ್ತಾ ಜಾಸ್ತಿ ಆಗಿ , ಮಗು ತಲೆ ತಿರುಗುತ್ತ ಇದೆ ಎಂದಾಗ ಸಿ-ಸೆಕ್ಷನ್ ಆಪರೇಷನ್ ಗೆ ಅಣಿ ಆದರು ಡಾಕ್ಟರ ಹಾಗು ನರ್ಸ್ ಗಳು!! ಆ ಜೀವ ತಿನ್ನುವ ನೋವು ಒಂದು ಹೊಸ ಜೀವ ಕೊಡಲು ಎಂದು ನೆನೆದಾಗ ಏನೋ ತೃಪ್ತಿ !! ಆ ನೋವಿನಲ್ಲು, ಅಮ್ಮನ ಕಣ್ಣೀರೊರೆಸಿ ಧೈರ್ಯ ತುಂಬಿ, ಆಪರೇಷನ್ ಥೀಯೇಟರ್ ಒಳಗೆ ಪ್ರವೇಶ!!! ಅರಿವಳಿಕೆ  ಚುಚ್ಚುಮದ್ದು ಕೊಟ್ಟಾಗ ನೋವೆಲ್ಲಾ ನಿರ್ಣಾಮ! ಡಾಕ್ಟರ್ ಗಳು ಮಾತಾಡುವುದು ಕೇಳುತ್ತ ಇದೆ,, ನರ್ಸ್ ಗಳು ಓಡಾಡುವುದು ಅರಿವಾಗುತ್ತಿದೆ!! ಆದರೆ ನನ್ನ ಜ್ಞಾನೇಂದ್ರಿಯ ಗಳು ಕೆಲಸ ಮಾಡುತ್ತಿಲ್ಲ!! ಏನು ನೋವು ಗೊತ್ತಾಗುತ್ತಿಲ್ಲ !! ಒಂದೇ ನಿಮಿಷದಲ್ಲಿ ಮಗು ಅಳುವ ಸದ್ದು !! ಹೌದು!! ನಾನು ಇಷ್ಟು ವರ್ಷ ಕಾದ, ಒಂಭತ್ತು ತಿಂಗಳು ಒಳಗೆ ಬೆಚ್ಚನೆ ಇರಿಸಿ ಸಾಕಿದ್ದ ಮಗು!!  ಅಲ್ಲೇ ಇದ್ದ ನರ್ಸ್ ಗೆ ಪಿಸು ಮಾತಲ್ಲೇ ಯಾವ ಮಗು ಎಂದೆ!! ದೀಪಾವಳಿಗೆ ಲಕ್ಷ್ಮಿ ಬಂದಿದ್ದಾಳೆ ಎಂದಳು!! ಎಲ್ಲ ನೋವು , ಸಂಕಟ ಗಳಿಗೆ ನನ್ನ ಮಗುವೇ ಪೂರ್ಣ ವಿರಾಮ !! ಈ ಘಟನೆ ಘಟಿಸಿ ಆಗಲೇ ಒಂದು ವರ್ಷ!! 

ನಾನು  ಹುಟ್ಟಿದಾಗಲೂ  ಅಮ್ಮನಿಗೆ  ಹೀಗೇ ಆಗಿತ್ತಾ ??? ಅವಳಿಗೆ  ಆ ನೋವೆ ನೆನಪಿಲ್ಲ.... 

ಎರಡು ದಿನದ ಕಂದನನ್ನು ಎದೆಗೆ ಅವಚಿ ಕಾರ್ ಅಲ್ಲಿ ಮನೆಗೆ ಪಯಣ!! ಸೂರ್ಯನ ಬೆಳಕ ಮೊದಲ ಬಾರಿಗೆ ನೋಡಿದ ಪಿಳಿ ಪಿಳಿ ಕಣ್ಣುಗಳು! ಬೆಂಗಳೂರಿನ ಟ್ರಾಫಿಕ್ ಹಾಗೂ ಧೂಳಿಗೆ ನನ್ನ ಕಂದಮ್ಮನ ಮೇಲೆ ಕರುಣೆಯಿಲ್ಲ!! ಮಗುವಿನ ತಂದೆಗೆ ಅದನ್ನು ಎತ್ತಿಕೊಳ್ಳಲು ಭಯ !! ಅದನ್ನು ದೂರದಿಂದಲೇ ಮಾತನಾಡಿಸುವ ಅದರ ಮಾವಂದಿರು ಹಾಗು ಅತ್ತೆ!! ಇನ್ನೂ ಲೋಕ ವನ್ನೇ ನೋಡದ ಅದು ದೀಪಾವಳಿಯ ಪಟಾಕಿಗೆ ಬೆಚ್ಚಿ ಏಳುತ್ತದೆ, ಹಾಗೆ ಸದ್ದು ಕಡಿಮೆಯಾದಾಗ ಮಲಗುತ್ತದೆ!! ನನ್ನೊಳಗಿನ ತಾಯಿಗೂ ಇನ್ನೂ ಮೂರೆ ದಿನ , ಅದಕ್ಕೂ ನಿದ್ದೆ ಇಲ್ಲ !! ಹೀಗೆ ವಾರವಾಯಿತು!! ಬೆಂಗಳೂರು ಬಿಟ್ಟು ಊರಿಗೆ ತಲುಪಿಯಾಯಿತು!! ಪಪ್ಪ ಸಹ ದೂರದಿಂದ ಮಗುವನ್ನು ನೋಡಿ ಎತ್ತಿಕೊಳ್ಳದೆ ಮಾತನಾಡಿಸಿದ್ದೂ ಆಯಿತು!! ನನ್ನ ತವರಿಗೆ ಬಂದ ಸಂಭ್ರಮ ಮನಸ್ಸಿಗೆ!! ವಾರಗಳು ಉರುಳಿ ತಿಂಗಳಾಯಿತು!!

ಈಗ ಗೊತ್ತಾಗಿತ್ತು  ಅಮ್ಮನಿಗೆ ಯಾಕೆ ಯಾವ ನೋವು ನೆನಪಿಲ್ಲ ಎಂದು !!! ಮುದ್ದು ಮಗುವಿನ ನಗು ಎಲ್ಲವನ್ನು ಮರೆಸುತ್ತದೆ!! 

ದಿನ ದಿನಕ್ಕೂ ಬದಲಾಗುತ್ತಿರುವ ಮುಖ ಹಾಗೂ ಬಣ್ಣ!! ಕಪ್ಪಾಗುತ್ತಾಳೆ ಎನ್ನುವ ಪಕ್ಕದವರ ಅಭಿಪ್ರಾಯ !! ಇವೆಲ್ಲವನ್ನೂ ಲೆಕ್ಕಿಸದೆ , ಮಗುವಿನ ಶುಷ್ರೂಷೆ ಯಲ್ಲೇ ಖುಷಿಪಡುವ  ಅಜ್ಜಿ ತಾತ!! ಚಿಕ್ಕ ಚಿಕ್ಕ ಸಂಗತಿಗಳಿಗೆ ಖುಷಿ ಪಡುವ ನಾವು, ಅವಳು ಮಗುಚಿ ಮಲಗಿದ ದಿನ ಬಂದವರಿಗೆಲ್ಲಾ ಅದನ್ನೇ ಹೇಳೋದಾಯ್ತು !! ಊರಿನ ಚಳಿಗಾಲಕ್ಕೆ ಒಗ್ಗಿದ  ನನ್ನ ಮಲ್ಲಿಗೆ ಮೊಗ್ಗು , ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ಗಂಧದ ಹೊಗೆಗೆ ಮೈ ಹಿಡಿದು ಜೋಲೆಯಲ್ಲಿ ಮಲಗಿಸಿದರೆ ,ಬೆಚ್ಚಗೆ ಮೂರು ಗಂಟೆ ಸದ್ದಿಲ್ಲದೇ ಮಲಗುವುದು ! ಅಷ್ಟರಲ್ಲಿ ಅಮ್ಮನ ಕಣ್ಣು ತಪ್ಪಿಸಿ , ಲ್ಯಾಪ್ ಟಾಪ್  ಅಲ್ಲಿ ಒಂದು ಸಿನಿಮಾ ನೋಡಿರುತ್ತಿದ್ದೆ !! ಏನು ತಿನ್ನಬೇಡ ಮಗುಗೆ ಶೀತ ಆಗುತ್ತೆ  ಎಂದು ಹೇಳಿದರೆ , ಅಮ್ಮ ಇಲ್ಲದಿರುವಾಗ ಕದ್ದು ತಿನ್ನುತ್ತಿದ್ದೆ!! ಮಗುಗೆ ಶೀತ ವೂ ಆಗಿತ್ತು!! ಅದು ನರಳುವುದು ನೋಡಿ, ಆಮೇಲೆ ಅಮ್ಮ ಹೇಳಿದ ಹಾಗೆ ಕಟ್ಟು ನಿಟ್ಟಾಗಿ ಇದ್ದೆ !! ನನ್ನ ರಜೆ ಮುಗಿಯಲು ಬಂದಾಗ ತವರೂರು ಬಿಟ್ಟು, ತನ್ನವರ ಬಿಟ್ಟು  ಹೋಗುವ ಸಂಕಟ!

ಅಮ್ಮನಿಗೂ ಹೀಗೆ ಆಗಿತ್ತಾ... ನನಗಾದರೂ ನನ್ನ ತಮ್ಮಂದಿರು ಹತ್ತಿರದಲ್ಲಿದ್ದಾರೆ!! ಅವಳು ಹೇಗೆ ನನ್ನನ್ನು ಸಂಭಾಲಿಸಿದ್ದಳೊ!! - ಅದಕ್ಕೂ ಅವಳಲ್ಲಿ ಇರುವುದು ನಗೆಯ ಹಾರಿಕೆಯ ಉತ್ತರ!

ನನ್ನ ರಜೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಪಯಣ! ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಗೊಂದಲ!! ಯಾವ ಗೊಂದಲಗಳನ್ನೂ ಗೊತ್ತಿರದ ನನ್ನ ಮುದ್ದು , ಅದರ ಪಾಡಿಗೆ ಅದರ ದಿನಚರಿ ಮುಂದುವರಿಸುತ್ತಿದೆ!! ಆಫೀಸ್  ನಲ್ಲಿರೋ ಸ್ನೇಹಿತರು ಮಗುಗೆ ಕೊಡುವ ಉಡುಗೊರೆಗಳು ಆಟಿಕೆಗಳು, ಹಾಗು ನನ್ನ ಕೆಲಸಕ್ಕೆ ಸಿಗುತ್ತಿರುವ ಮೆಚ್ಚುಗೆ, ಕೆಲಸದಲ್ಲಿ  ಮಗ್ನಳಾಗುವುದರಿಂದ ಆಫೀಸಿನಲ್ಲಿ ಮಗುವಿನ ನೆನಪನ್ನು ಮರೆಸುತ್ತಿದ್ದವು!! ಹಾಗೇನಾದರೂ ಬೇಜಾರಾದರೆ ನನ್ನಲ್ಲೇ ನಾನು "ಯಾರಿಗಾಗಿ ಕೆಲಸ ಮಾಡುತ್ತಿದ್ದೇನೆ" ಎನ್ನೋ  ಪ್ರಶ್ನೆ ಕೇಳಿದಾಗ , ನನ್ನ ಉತ್ತರ ಎಲ್ಲವನ್ನು ಮರೆಸುತ್ತಿತ್ತು !! ನನ್ನ ಮಗುವಿಗೆ ತಿಂಗಳುಗಳು ಉರುಳುತ್ತಿವೆ, ನಮ್ಮ ಅಪಾರ್ಟ್ ಮೆಂಟ್ ಮಕ್ಕಳೆಲ್ಲ ಅವಳ ಗೆಳೆಯರಾಗಿದ್ದಾರೆ!! ಅದಕ್ಕೆ ಹೊರಗಿನ ಪ್ರಪಂಚದ ಅರಿವಾಗುತ್ತಿದೆ!! ನಾಯಿ ನೋಡಿದರೆ  ಅದರ ಹಿಂದೆ ವಾಕರ್ ನಲ್ಲಿ ಓಡುತ್ತದೆ , ಬೆಕ್ಕು ನೋಡಿದರೆ ಬಾಲ ಹಿಡಿದುಕೊಳ್ಳಲು ನೋಡುತ್ತದೆ!! ಬಲೂನ್ ಕೊಟ್ಟರೆ, ತನ್ನ ಹರಿತವಾದ ಉಗುರಲ್ಲಿ ಚುಚ್ಚುತ್ತದೆ! ಆಫೀಸ್ ಅಲ್ಲಿ ಎಷ್ಟೇ ಕೆಲಸ ಮಾಡಿ ಸುಸ್ತಾಗಿದ್ದರೂ, ಮನೆಗೆ ಬಂದು ಅರ್ಧ ಗಂಟೆ ಮಗುವೊಂದಿಗೆ ಸಮಯ ಕಳೆದರೆ , ಎಲ್ಲ ನೋವು ಉಪಶಮನ!!

ಅಮ್ಮನಿಗೂ ಹೀಗೆ ಆಗಿತ್ತ?? ನನ್ನದು  ಆಫೀಸ್ ಆಲಿ ಮೈ ಕೈ ನೋಯಿಸದೆ ಕುಳಿತಲ್ಲೇ ಕುಳಿತು ಕೆಲಸ , ಆದರೆ ಅವಳೋ ಗದ್ದೆ , ತೋಟ ,ಅಡಿಗೆ .. ಒಂದ ಎರಡಾ?? ಅವಳ ಆ ದೃಡ ವಿಶ್ವಾಸವೇ ನನಗೆ ದಾರಿ ದೀಪ!!

ತಾನಾಗೆ ಕುಳಿತುಕೊಳ್ಳುವ ನನ್ನ ಸಿರಿ, ತಾನಾಗೆ ನಿಂತು ನಡೆಯಲು ಪ್ರಯತ್ನ ಪಡುವಾಗ- ನಾನೇ ಕಷ್ಟ ಪಟ್ಟಂತೆ!! ಏನೆಲ್ಲೋ ಗೊಣಗುವ ಅದು, ನನ್ನ ತೊದಲು ನುಡಿಗೆ ಪೀಟಿಕೆ ಹಾಕಿದಂತೆ!! ಅದಕ್ಕೆ ಹೊಸ ಬಟ್ಟೆ ಹಾಕಿ , ನನ್ನ ಮನ ಬಂದತೆ ಅಲಂಕಾರ ಮಾಡಿದರೆ, ನನಗೇ ಹೊಸ ಬಟ್ಟೆ ಕೊಂಡಂತೆ!! ನಾನು ಹೊರಗಿಂದ ಮನೆ ಒಳಗೆ ಬಂದಾಗ ಅದು ನನ್ನ ನೋಡಿ ಕೇಕೆ ಹಾಕಿದರೆ, ಕೈ ಕಾಲು ತೊಳೆಯುವುದಕ್ಕೆ ಮುನ್ನವೇ, ಅದನ್ನು ಎತ್ತಿಕೊಳ್ಳುವ ತವಕ!! ಅದು ಊಟ ತಿಂದು ಮುಗಿಸಿದರೆ, ನನ್ನ ಹೊಟ್ಟೆ ತುಂಬಿದಂತೆ !!  ಹೀಗೆ ಪಟ್ಟಿ ಬೆಳೆಯುತ್ತದೆ! ಈಗ ನನ್ನ ಮಗು ತಿಂಗಳುಗಳನ್ನ ಜಯಿಸಿ, ಒಂದು ವರ್ಷಕ್ಕೆ ಕಾಲಿಡುತ್ತಿದೆ!
ಮೊನ್ನೆ ಮೊನ್ನೆ ಆಸ್ಪತ್ರೆಯಲ್ಲಿ ಪಿಳಿ ಪಿಳಿ ಬಿಟ್ಟ ಕಣ್ಣು , ಈಗ ತನ್ನವರ ಗುರುತಿಸುತ್ತದೆ !! ಅದಕ್ಕೆ ಗೊತ್ತಾಗದಂತೆ ಒಂದು ವರ್ಷ ಪೂರೈಸಿದೆ!! ನನ್ನೊಳಗಿನ ತಾಯಿಗೂ ಈಗ ಒಂದು ವರ್ಷ!!

ಅಮ್ಮ ಕೂಡ- ನಾನು ಒಂದು ವರ್ಷ ಪೂರೈಸಿದಾಗ ಹೀಗೆ ಘಟನೆಗಳನ್ನು ನೆನೆಸಿಕೊಂಡಳಾ??? ತಿಳಿಯದು !! ಆಕೆಗೆ ಅವಳ ಕೆಲಸದಿಂದ ಸಲ್ಪ ಬಿಡುವು ಸಿಕ್ಕರೆ ತಾನೇ !! ಆದರೂ ಮನದೊಳಗೆ, ಯಾರಿಗೂ  ತೋರ್ಪಡಿಸದಂತೆ ಖಂಡಿತ ಸ್ಮರಿಸಿಕೊಂಡಿರುತ್ತಾಳೆ!! 

ಅಮ್ಮಾ...  ಈ ಜನ್ಮದಲ್ಲಿ ಇಷ್ಟು ವರ್ಷ ನಿನ್ನಿಂದ ಕಲಿತಿರುವುದು ಎಣಿಕೆಗೆ ಸಾಲದು!! ಇನ್ನೂ ನಿನ್ನಿಂದ ಕಲಿಯುವುದು ಸಾಕಷ್ಟಿದೆ! ಆ ಕಲಿಕೆಯಲ್ಲಿ ಅರ್ಧದಷ್ಟಾದರೂ ನನ್ನ ಮಗುವಿಗೆ ಧಾರೆಯೆರೆದರೆ, ನನ್ನ ಜನ್ಮ ಸಾರ್ಥಕ!!

 ಮಗು ನೀ ಸದಾ ನಗು ,
ನಿನ್ನ ಗುರುತಿಸಲಿ ನಿನ್ನ ಮುಗುಳ್ನಗು!
ನಿನ್ನೊಳಗೆ ಕೊಂದು ನುಂಗು ಆ ಕುಹಕ ನಗು!!
ಸಂತೋಷ ವ್ಯಕ್ತಪಡಿಸಲಿ ನಿನ್ನ ವಿಜಯಿ ನಗು !
ಸೋಲಲ್ಲೂ ಇರಲಿ ಗೆಲುವನ್ನು ಪಡೆವ ದೃಡ ಮಂದಹಾಸ!!
ಮಗು ನೀ ಸದಾ ನಗು!!

Comments

  1. Agreed. Looking back always triggers to go further. Time is flying and I feel Its a week back we took her home from Yashomathi..

    ReplyDelete
  2. Super!! Yes amma had gone through lot of difficulties which we can't imagine, hat's off to her.

    ReplyDelete
  3. Very nice akka !! Its always a rebirth for a girl when she becomes mother :) Time passes like a river and for siri its already 1 Year..Happy B'day siri putta :) <3

    ReplyDelete
  4. Very nice akka !! Its always a rebirth for a girl when she becomes mother :) Time passes like a river and for siri its already 1 Year..Happy B'day siri putta :) <3

    ReplyDelete
  5. This comment has been removed by the author.

    ReplyDelete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020