ಹೀಗೊಬ್ಬ ಸಾಫ್ಟ್‌ವೇರ್ ಹೈದ!
ಒಂದು ಸರಳ ಯಂತ್ರ ! ಎರಡು ಕೈಗಳುಳ್ಳ ಯಂತ್ರ.. ನಮಗೇನು ಬೇಕೆನಿಸುತ್ತದೋ ಅದನ್ನು ತರುವ ಅಕ್ಷಯ ಯಂತ್ರ! ಅಥವಾ ವರ ಕೊಡುವ ಕೈಗಳು ಆದರೆ ಅದೊಂದು ಯಂತ್ರ! ನಮ್ಮ ಹತೋಟಿಯಲ್ಲಿರುವ ಚಿಕ್ಕದಾದ ಯಂತ್ರ ! ಇದರ ಅನ್ವೇಷಣೆಗಾಗಿ ನಮ್ಮ ಗುಂಡನಿಗೆ ಪಾರಿತೋಷಕ ಕೊಡುವ ಸಮಯ.. ಗುಂಡನ ಸಂತೋಷಕ್ಕೆ ಪಾರವೇ ಇಲ್ಲ! ಹಾಗೆ ಗುಂಡನಿಗೆ ಸಿಹಿ ತಿನ್ನಬೇಕೆಂದು ಅನಿಸಿದಾಗ ಬಾಯಿ ತೆರೆದುಕೊಂಡು ಅವನ ಈ ಹೊಸ ಯಂತ್ರಕ್ಕೆ ಆದೇಶ ಕಳುಹಿಸುವುದಷ್ಟೇ ಆತನ ಕೆಲಸ! ಎರಡು ಕೈಗಳುಳ್ಳ ಈ ಯಂತ್ರ ದೊಡ್ಡ ಪಾತ್ರೆ ತುಂಬ ತರ ತರವಾದ ಸಿಹಿ ಖಾದ್ಯಗಳನ್ನು ತರುತ್ತಾ ಇದೆ!! ಗುಂಡ ಬಾಯಿ ತೆರೆಯುತ್ತಾ ಇದ್ದಾನೆ ! ಗುಂಡನ ರೂಂಮೇಟ್ ಆತನ ಬಾಯೊಳಗೆ ಪೇಪರ್ ತುರುಕಿದಾಗ, ಅದು ಸಿಹಿ ಎನಿಸದೆ ಕಣ್ತೆರೆದು ನೋಡಿಗಾದ ಗುಂಡನಿಗೆ ತನ್ನ ಕನಸಿನ ಅರಿವಾಗಿ, ಆತುರವಾಗಿ ಆಫೀಸಿಗೆ ಹೊರಡಲು ಅಣಿಯಾದ!!
ನಮ್ಮ ಗುಂಡನ ದೊಡ್ಡ ಆಸ್ತಿ ಅವನ ಗೋಳಾಕಾರದ ಉದರ! ಅದನ್ನು ತುಂಬಿಸುವುದಕ್ಕೆ ಅವನು ಎಲ್ಲ ಮೋಸಮಾಡುವುದಿಲ್ಲ.
ಬೆಳಿಗ್ಗೆ ಸುಮ್ಮನೆ ಹಾಲಿನೊಂದಿಗೆ ಕಾರ್ನ್ ಫ್ಲೇಕ್ಗಳನ್ನು ಅವನ ರೂಮ್ನಲ್ಲಿ ತಿನ್ನುವ ಅವನು ಕ್ಯಾಬ್ ಗಾಗಿ ಓಡುವುದರಲ್ಲಿ ಅದನ್ನು ಅರಗಿಸಿಕೊಳ್ಳುತ್ತಾನೆ. ಆಫೀಸ್ ತಲುಪುವ ವರೆಗೆ ಒಳ್ಳೆಯದೊಂದು ನಿದ್ದೆ ಮಾಡಿ, laptop ಬ್ಯಾಗ್ ನ್ನು ಅವನ ಸ್ಥಳದಲ್ಲಿ ಬಿಸಾಡಿ , ಅವನ ಆಯಾಸಗೊಂಡ ಕಾಲುಗಳು ಅವನ ತೂಕವನ್ನು ಲೆಕ್ಕಿಸದೆ ಕೆಫೆಟೇರಿಯಾ ಸೇರಿಸುತ್ತವೆ. ಹೇಗಿದ್ರೂ sudexo ಕೂಪನ್ಸ್ ಕಾಲ.. ಒಂದೆರಡು ಹಾಳೆ ಹರಿದು, ಎರಡು ತಟ್ಟೆ ತುಂಬಿಸಿ, ಒಂದು ಟೇಬಲ್ ಆರಿಸಿ ಕೂತ್ಕೊಂಡ್ ಒಂದೊಂದೇ ತಟ್ಟೆ ಮುಗಿಸ್ತಾನೆ ನಮ್ಮ ಗುಂಡ.. ಕಾಫೀ ಮುಗಿಸಿ ಬಂದ್ರೆ ಕೆಲಸ ಮಾಡೋ ಮನಸೆ ಇಲ್ಲ ಇವನಿಗೆ. ಯಾವಾಗ ಮದ್ಯಾಹ್ನ ಊಟಕ್ಕೆ ಹೋಗ್ತಿನೋ ಅನ್ನೋ ಯೋಚನೆಲೇ ಮುಳುಗಿರ್ತಾನೆ. ಯಾರದ್ರೂ ಅವನ ಹೆಸರು ಕರೆದರೆ ನಿದ್ದೆಯಿಂದ ಎದ್ದವನ ಹಾಗೆ ಗಕ್ಕನೆ ತಿರುಗಿ ಮತ್ತೊಂದು ಬಾರಿ ಪ್ರಶ್ನೆ ಕೇಳಿ ಉತ್ತರ ಹೇಳ್ತಾನೆ. ಈ ಗುಂಡನಿಗೆ ಇಂಗ್ಲೀಷ್ ವ್ಯಾಮೋಹ ಜಾಸ್ತಿ! ಸಿನಿಮ ಇರರಲಿ, ಹಾಡುಗಳಿರಲಿ , ಸಂಪ್ರದಾಯವಿರಲಿ ಎಲ್ಲದರಲ್ಲೂ ಇಂಗ್ಲೀಷ್ ಅನುಕರಣೆ! ಅರ್ಥವಾಗದಿರುವ ಇಂಗ್ಲೀಷ್ ನುಡಿಗಟ್ಟು ಹೇಳಿ ಎಲ್ಲರ ಮುಂದೆ ಕೂಲ್ ಅನಿಸಿಕೊಳಲು ಹೆಣಗಾಡುವ ಇವನು, ಜನರು ಅವನಿಲ್ಲದಾಗ ಈತನ ಅನುಕರಣೆ ಮಾಡುತ್ತಾರೆ ಎಂದು ಕಿಂಚಿತ್ತು ಸುಳಿವಿಲ್ಲ! ಇವನು ಕಂಪನಿ ಸೇರಿದ ವರ್ಷ ಸುಮಾರಾಗೆ ಇದ್ದ. ವರ್ಷಗಳು ಜಾರಿದಂತೆ ಈತನ ದೇಹದ ಗಾತ್ರ ಇಳಿಯದೆ ಬರಿ ಏರುತ್ತಲಿತ್ತು!! ಯಾರಾದರೂ ಹುಟ್ಟು ಹಬ್ಬಕ್ಕೆ ಅಥವಾ ಮನೆಗೆ ಹೋಗಿ ಬಂದಾಗ ಸಿಹಿ ತಿನಿಸು ತಂದರೆ ಗುಂಡ ಮೊದಲು ಹಾಜಾರಾಗಿರುತ್ತಾನೆ.. ಅವನ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಹಾಕಿದಂತಾಗುತ್ತದೆ ಅಷ್ಟೇ !!
ಗುಂಡ ಎಷ್ಟೇ hype ತೋರಿಸಿದರೂ, ಜನಗಳನ್ನು ಚೆನ್ನಾಗಿ ಮಾತನಾಡಿಸುತ್ತಾನೆ, ಬೆಣ್ಣೆಯ ಮೇಲೆ ಕೂದಲು ತೆಗೆದ ಹಾಗೆ - ಅವನ ಮಾತುಗಳನ್ನು ಹೊಗಳಿದಾಗ ಮಾತ್ರ!!! onsite ಇಂದ ಯಾರಾದ್ರೂ ಬಂದರೆ ತನ್ನ ಇಂಗ್ಲಿಷ್ idioms ಗಳಿಂದ ಭೇಷ್ ಎನಿಸಿಕೊಳ್ಳುತ್ತಾ ಅವರಿಗೆ ತುಂಬಾ ಒಳ್ಳೆಯವನಾಗಿರುತ್ತನೆ - ಅವರು ಹೋಗುವವರೆಗೆ ಮಾತ್ರ!! ಚೆನ್ನಾಗಿ ಕೆಲಸ ಮಾಡುವವರ ಜೊತೆ ಮರಳು ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾನೆ - ಕೆಲಸ ಆಗುವವರೆಗೆ ಮಾತ್ರ!! ಆತನ ಮ್ಯಾನೇಜರ್ ಜೊತೆ ತುಂಬಾ ಸಲಿಗೆಯಿಂದ ವರ್ತಿಸುತ್ತಾನೆ - award ಬರುವವರಗೆ ಮಾತ್ರ!!ಟೀಂ ಮೇಟ್ ಗಳನ್ನು ಆಗಾಗ ಹೊರಗೆ ಊಟಕ್ಕೆ ಕರೆದೊಯ್ಯುತ್ತಾನೆ - ಅವನ ತಲೆ ಮೇಲೆ issues ಏನು ಬರದಿದ್ದರೆ ಮಾತ್ರ!! ಅವನು ನಿಮ್ಮನ್ನು ಹೊಗಳಿ ಹೊಗಳಿ ಬೆಟ್ಟಕ್ಕೇರಿಸುತ್ತಾನೆ - ಅವನಿಗೇನಾದರು ನಿಮ್ಮಿಂದ ಕೆಲಸ ಬೇಕಾದಾಗ ಮಾತ್ರ !!ಏನು ಬರದಿದ್ದರೂ ಎಲ್ಲ ಗೊತ್ತೆಂಬಂತೆ ನಟಿಸುತ್ತಾನೆ - ನಿಮಗೆ ಅವನ ನಿಜ ಬಣ್ಣ ಗೊತ್ತಾಗುವವರೆಗೆ ಮಾತ್ರ!! ಹೀಗೆ ಈ ಪಟ್ಟಿ ಸಂದರ್ಭಕ್ಕೆ ತಕ್ಕಂತೆ ಬೆಳೆಯುತ್ತಿರುತ್ತದೆ!!
ಪ್ರತಿ ವಾರ ಇವನು ಪಬ್ ಗಳಿಗೆ ಹಾಜಾರಾಗಲಿಲ್ಲವೆಂದರೆ ಅವನ ಘನತೆಗೆ ದಕ್ಕೆ ಬರುವಂತೆ ತೋರಿಸಿಕೊಳ್ಳುತ್ತಾನೆ. ವಾರಕ್ಕೊಂದು ಪಬ್ ಗೆ ಹೋಗಿ ಫೋಟೋ ತೆಗೆದು ಫೇಸ್ಬುಕ್ ನಲ್ಲಿ ಹಾಕಿಬಿಡ್ತಾನೆ .. ಮದುವೆ ಆದಮೇಲೆ ಅವನ ಹೆಂಡತಿಯ ಪಾಡು ನೆನೆದು ಮರುಕವಾಗುತ್ತದೆ!! ಇವನಿಗೆ ಸಂಬಳ ಚೆನ್ನಾಗಿರುವದರಿಂದ ಖರ್ಚು ಹಾಗೂ ಶೋಕಿ ಜಾಸ್ತಿ. ಬೇಡದಿರುವುದಕ್ಕೆ ಹೆಚ್ಚು ಹಣ ಪೋಲು ಮಾಡುವ ಇವನಿಗೆ , ತನಗೆ ಏನು ಬೇಕು ಏನು ಬೇಡ ಎಂಬುವ ಅರಿವಿಲ್ಲ!!ಕಡಿಮೆ ವಯಸ್ಸಿನಲ್ಲೇ ಕೆಲಸ ಸಿಕ್ಕಿರುವ ಇವನಿಗೆ ಭವಿಷ್ಯಕ್ಕಾಗಿ ಕೂಡಿಡುವ ಬುದ್ದಿ ಬೆಳೆದಿಲ್ಲ!! ಪ್ರಪಂಚವನ್ನು ತನ್ನ ಮೂಗಿನ ನೇರಕ್ಕೆ ನೋಡುವ ಇವನಿಗೆ ಸಮಾಜದ ಒಳಿತಿಗಾಗಿ ದಾನ ಮಾಡುವ ಯೋಚನೆ ಸದ್ಯಕ್ಕಿಲ್ಲ !! ಉಪಗೋಕ್ಕಿದೆಯೋ ಇಲ್ಲವೋ ಇವನಿಗೆ ಹೊಸ ಹೊಸ ಮೊಬೈಲ್ ಗಳು ಹಾಗೂ ಮಾರುಕಟ್ಟೆಗೆ ಬರುವ ಹೊಸ gadgets ಗಳು ಬೇಕೆ ಬೇಕು!! ಹಣ ಮುಗಿದರೆ ತಿಂಗಳ ಕೊನೆಗೆ ಕಾಯುವ ಇವನಿಗೆ ಸಂಬಳ ಸಿಕ್ಕರೆ ಸ್ವರ್ಗ ಮೂರೇ ಗೇಣು !! ಮಧ್ಯ ರಾತ್ರಿಯವರೆಗೆ ಮೋಜು ಮಾಡುವ ಇವನಿಗೆ ಹಗಲು ನಿದ್ದೆ ಜಾಸ್ತಿ , ಅದರ ಜೊತೆ ಹಗಲುಗನಸು ಉಚಿತ!! ಹೀಗೆ ಆಫೀಸಿನಲ್ಲಿ ಮ್ಯಾನೇಜರ್ ಜೊತೆ ಚೇಲನ ಹಾಗಿದ್ದು, ಉಳಿದವರಿಗೆ ಆತನ ಕೆಲಸ ಮಾಡಲು, ಹೇಳಿ ಕಿವಿಗೆ ಹೆಡ್ ಫೋನ್ ತುರುಕಿ ನಿದ್ದೆ ಮಾಡುವುದು ಇವನ ಜಾಯಮಾನ!! ಹೀಗೆ ಬರುವ ಕನಸುಗಳನ್ನು ವಿವರಿಸಿ ಎಲ್ಲರ ಚಿತ್ತವನ್ನು ತನ್ನೆಡೆಗೆ ಎಳೆಯುವಂತೆ ಮಾಡಿ ತಾನು ತುಂಬ ಕ್ರಿಯೇಟಿವ್ ಎಂಬಂತೆ ತೋರಿಸಿಕೊಳ್ಳುತ್ತಾನೆ!!! ಅದು ತೋರಿಕೆ ಮಾತ್ರ ಎಂಬುದು ಎಲ್ಲರಿಗು ಗೊತ್ತಿದ್ದರೂ ಯಾರು ಅವನಿಗೆ ಎದುರಾಡುವುದಿಲ್ಲ !!
ಕುಹಕ ಎಂಬಂತೆ , ಈ ರೀತಿಯ "ಗುಂಡ" ಗಳು ಎಲ್ಲ ರೀತಿಯ ಕಛೇರಿಗಳಲ್ಲೂ ಕಾಣ ಸಿಗುತ್ತಾರೆ. ಅವರಿಗೆ ಅವರ ಮೇಲಿನ ಅಧಿಕಾರಿಗಳ ಕೃಪೆ ಇದ್ದರೂ ಅವರ ಕೆಳಗೆ ಕೆಲಸ ಮಾಡುವವರ ಶಾಪವೋ ಅದರ ಮೂರರಷ್ಟಿರುತ್ತದೆ !! ಮನುಷ್ಯತ್ವವನ್ನೇ ಮರೆತಿರುವ ಇವರು ಮನುಷ್ಯರ ಒಳ ಮನಸ್ಸನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ!!
ಇವರ ಜ್ಞಾನೇಂದ್ರಿಯಗಳನ್ನು ಎಚ್ಚರಗೊಳಿಸಿ, ಅವರು ಈ ಪ್ರಪಂಚದಲ್ಲೇ ಇದ್ದಾರೆ ಎಂಬುದನ್ನು ತಿಳಿಸುವುದಕ್ಕಾಗಿ ಇವರ ಮೇಲೆ ice bucket ಹಾಕುವ ಚಾಲೆಂಜ್ ಅನ್ನು ಯಾರಾದರು ಕಾರ್ಯಗತ ಮಾಡುವಂತಿದ್ದರೆ!!!!!

Comments
Post a Comment