ಸಾಂತ್ವನ

ಮಲ್ಲಿಗೆ ಅರಳುವಾಗ ಸದ್ದಾದೀತೆ?
ಸುಗಂಧವು ಗಾಳಿ ಕೇಳಿ ಪಸರಿಸಿತೆ?
ಎಲೆಮರೆಯ ಹೂವು ನಗಲಾರದೇ??
ನೇಸರನ ದಿನಚರಿ ಕಣ ಕಣದಲ್ಲೂ ಅಚ್ಚರಿ
ಸಮಯವೊಂದೇ ಜಗದಲಿ, ಹಾರಲಾರದ ಬೇಲಿ.
ಸುಸಮಯಕ್ಕಾಗಿ ಜಪಿಸು,
ಕೆಲ ಕಾಲದ ಬೀಳ ಸಹಿಸು,
ಅಂಜಿಕೆಯ ಮುಡಿಕಟ್ಟಿ ,ಹತಾಷೆಗಳ ಹಿಮ್ಮೆಟ್ಟಿ
ತನ್ನತನ ಬಿಡದೆ,  ಮುನ್ನಡೆ ಛಲದಲಿ
ನಿನ್ನೆದುರು ತಡೆಗೋಡೆಯಾಗುವ ಧೈರ್ಯ ಇನ್ನಾರಿಗೆ ಈ ಮನುಜ ಕುಲದಲಿ!




Comments

Popular posts from this blog

ಅವಳು!!!

ಹೋಗಿ ಬಾ ಮಗಳೇ !!

WIFE - The Companion