ಇಂದಿನ ನೋಟ!
ಅದು ಕತ್ತಲು ಕರಗಿ ಬೆಳಗಾಗುವ ಸಮಯ! ಮೋಡದ ಪರದೆಯ ಸಲ್ಪ ಸಲ್ಪವಾಗಿ ತೆರೆದು ಇಣುಕುತ್ತಿರುವ ಸೂರ್ಯನ ಕಿರಣಗಳು!! ಕಾಲಿಯಾಗಿರುವ ರಸ್ತೆಗಳು, ರಾತ್ರಿ ಗಸ್ತು ಮುಗಿಸಿ ಮಲಗಿರುವ ನಾಯಿಗಳು! ವಾಹನಗಳ ಹೊಗೆಯಿಂದ ಸಲ್ಪವಷ್ಟೇ ಸ್ವಾತಂತ್ರ್ಯ ಪಡೆದು ಉಸಿರಾಡುತ್ತಿರವ ಅಷ್ಟೋ ಇಷ್ಟೋ ಗಿಡ ಮರಗಳು!! ಪೇಪರ್ ಹಾಕಲು ಸೈಕಲ್ ಸವಾರಿ ಮುಂದುವರಿಸುತ್ತಿರುವ ಹುಡುಗರು! , ರಭಸವಾಗಿ ನಡೆಯುತ್ತಾ ಸಾಗುತ್ತಿರುವ ಮನೆಕೆಲಸದಾಕೆಯರು!!, ಬೆಳಿಗ್ಗಿನ ವಾಕಿಂಗ್ ಮುಗಿಸಿ ವಾಪಸಗುತ್ತಿರುವ ಹಿರಿಯ ನಾಗರೀಕರು! ಇನ್ನು ಮುಸುಕು ಹೊದ್ದು ಮಲಗಿರುವ P G ಗಳು, ಕಣ್ಣು ಹೊರಳಿಸದ್ದಲ್ಲೆಲ್ಲ ಕಾಣುವ ಸದ್ದಿಲ್ಲದ ಅಪಾರ್ಟ್ ಮೆಂಟ್ ಗಳು . ಇದು ಇವತ್ತಿನ ಬೆಳಿಗ್ಗೆ ಸುಮಾರು ಆರರ ನನ್ನ ಅಡಿಗೆ ಮನೆಯ ಕಿಟಕಿಯೊಳಗಿಂದ ಕಂಡ ದ್ರಶ್ಯ ! ಈ ನಿಮಿಷಕ್ಕೆ - 'ಬೆಂಗಳೂರು ಎಷ್ಟು ಖಾಲಿಯಾಗಿದೆ' ಅನ್ನಿಸಬಹುದು !! ತಂಗಳು ಪೆಟ್ಟಿಗೆಯಿಂದ ಹಾಲು ತೆಗೆದು, ಕುದಿಸಿ , ಕಾಫಿ ಬೆರೆಸಿ ,ಲೋಟಕ್ಕೆ ಸೋಸಿ ಇನ್ನೇನು ಕುಡಿಯುವ ಸಮಯ. ಹಾಗೆಯೇ ಅದೇ ಕಿಟಕಿಯಿಂದ ಹೊರ ನೋಡಿದರೆ , ಬೇರೆಯದೇ ಪ್ರಪಂಚ!! ನಾನೇ ಮುಂದೆ ಹೋಗಬೇಕೆಂಬ ಸ್ಕೂಲ್ ಬಸ್ ಗಳು, ಹಿಂಬಿಡದ ಆಟೋ ಗಳು! ಶಾಲೆ ಗೆ ಮಗುವನ್ನು ಕಳಿಸಲು ನಿಂತಿರುವ ಪೋಷಕರು, ತರಕಾರಿ ಮಾರಲು ಹೊರಟಿರುವ ತಳ್ಳೋ ಗಾಡಿಗಳು! ಅದರೆಲ್ಲದರ ಮದ್ಯ ಅರ್ಜೆಂಟ್ ಆಗಿ ಕೆಲಸಕ್ಕೆ ಓಡುತ್ತಿರುವ ಜನಗಳು! ಸಕ್ಕರೆಗೆ ಇರುವೆ ಮುತ್ತ...