ನನ್ನೊಳಗಿನ ಹಾಡು!!!!

ಮತ್ತದೇ ಬೇಸರ , ಅದೇ ಸಂಜೆ, ಅದೇ ಏಕಾಂತ....  ಹಾಡು ಕಿವಿಯೊಳೆಗ ಇಂಪಾಗಿ ಉಲಿಯುತ್ತಿರುವಗಲೇ  ನಂಗೆ ಸಂಜೆ ಆಗಿದ್ದೆಂದು ಗೊತ್ತಾಗಿದ್ದು.. ಎಂತ ಮಧುರವಾದ ಹಾಡು!  ನಿಸಾರ್ ಅಹಮದ್ ಅವ್ರು ಯಾವ್ ಮೂಡಲ್ಲಿ ಹಾಡು ಬರೆದರೋ ಗೊತ್ತಿಲ್ಲ!! ಆದರೆ ಈ ಹಾಡು ಕೇಳಿದಾಗೆಲ್ಲ ಮನಸ್ಸಲ್ಲಿ ಒಂದು ತಂತಿ ಮಿಡಿಯುವುದೆಂತು ನಿಜ. ಈ ಭಾವಗೀತೆಗಳೇ ಹಾಗೇ.. ನಮ್ಮ ಭಾವನೆಗಳನ್ನು ತಮ್ಮದಾಗಿಸಿಕೊಳ್ಳುತ್ತವೆ...  ಹಾಡು ಮುಗಿದೇ ಹೋಯ್ತು!!!  ಆದ್ರೆ playlist ಅಲ್ಲಿ ಮುಂದಿನ ಹಾಡು ರೆಡಿ ಆಗಿ ಕಾಡು ಕೂತಿದೆ.

ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು.... ಸಲ್ಪ ಕೇಳಿ ನನ್ನ ಕೆಲಸ ಮುಂದುವರೆಸಣ ಅಂತ ಅಂದುಕೊಳ್ತೀನಿ, ಆದ್ರೆ ನನ್ನ ಭಾವಗೀತೆ ಲಿಸ್ಟ್ ಮುಂದುವರೆದ ಹಾಗೆ ನನ್ನ ಕೆಲಸಗಳು ಹಿಂದೆ ಹಿಂದೆ ಹೋಗ್ತಾ ಇರ್ತವೆ. ಸಂಗೀತಕ್ಕೆ ಇರುವ ಶಕ್ತಿಯೇ ಹಾಗೆ ಅನ್ಸತ್ತೆ.. ಒಂದೊಂದು ಹಾಡು ಮನಸ್ಸಲಿ ಒಂದೊಂದು ಅಲೆ ಹಬ್ಬಿಸುತ್ತವೆ. ರಾಗಗಳ ಬಗ್ಗೆ ನನಗಿರುವ ಪ್ರಜ್ಞೆ ಅಷ್ಟಕ್ಕಷ್ಟೇ.. ಆದ್ರೆ, ಆ ರಾಗಕ್ಕಿರುವ ಶಕ್ತಿ ಅಪಾರ . ಈ ಹಾಡನ್ನು ಕೇಳುತ್ತ ಎಷ್ಟೆಲ್ಲಾ ಸಂದರ್ಭಗಳು ಕಣ್ಣ ಮುಂದೆ ಮತ್ತೆ ಮರುಕಳಿಸುತ್ತವೆ . ಜೀವದ ಗೆಳತಿ ಮದುವೆಯಾಗಿ ಸಪ್ತ ಸಾಗರ ಹಾರಿ US ಗೆ ಹೋಗಿದ್ದು, ಆಗಾಗ ಮಾತಾಡುತ್ತಿದ್ದ ನೆಂಟರು ಸಂದರ್ಭಕ್ಕೆ ತಕ್ಕಂತೆ ವರ್ತಿಸಿದ್ದು , ಹೀಗೆ ಹತ್ತು ಹಲವಾರು.. ಈ ಹಾಡುಗಳು ಹಳೆಯದ್ದನ್ನೆಲ್ಲ ಕೆದಕಿ ಹರಡುತ್ತವೆ.

Celion Dion ಹಾಡಿರೋ  I am Alive ಹಾಡು ನನ್ನ playlist ನಲ್ಲಿರೋ ಮುಂದಿನ ಹಾಡು .. ಈ ಮುಂದೆ ಎಷ್ಟು ಕಹಿ ಹಾಗು ಬೇಸರದ ಸಂಗತಿಗಳು ಭಾವಗೀತೆಗೆ ಅನುಗುಣವಾಗಿ ಬಂದವೋ , ಹಾಗೆಯೇ ಈ ಹಾಡು ಎಂತವರಲ್ಲೂ ಜೀವನ ತುಂಬುವುದು, ನನ್ನಲ್ಲೂ ಕೂಡ!!. Titanic ಸಿನಿಮ ದಲ್ಲಿ ಹಾಡಿರುವ ಹಾಡಿಗಿಂತ, ಈ ಹಾಡಲ್ಲಿ ಆಕೆ I am alive ಅನ್ನೋದನ್ನ  prove ಮಾಡ್ತಾಳೆ. ಜಾಸ್ತಿಯಾಗಿ ಇಂಗ್ಲೀಷ್ ಹಾಡು ಕೇಳದ ನಾನು ಅಲ್ಲಲ್ಲಿ ಒಂದೊಂದು ಇಷ್ಟ ಪಡುತ್ತೇನೆ, ಅದರಲ್ಲಿ ಈ ಹಾಡು ಒಂದು . ಪ್ರತಿಯೊಂದು ಹಾಡು , ಪ್ರತಿಯೊಂದು ಪಾಠ ಕಲಿಸುತ್ತವೆ. ಈ ಹಾಡಲ್ಲಿ, ನಾನಿನ್ನು ಜೀವಂತ ವಾಗಿದ್ದೇನೆ , ಏನನ್ನಾದರೂ ಸಾಧಿಸಬೇಕಾದರೆ  ಅದಿಲ್ಲ ಇದಿಲ್ಲ ಅನ್ನೋ ಋಣಾತ್ಮಕ ಆಲೋಚನೆಗಳನ್ನು ಬಿಟ್ಟು , ನಾನಿನ್ನು ಬದುಕ್ಕಿದ್ದೇನೆ ಸಾಧಿಸುವ ಛಲವಿದೆ ಅನ್ನೋ ಧನಾತ್ಮಕ ಪರಿಣಾಮವನ್ನು ಮನಸ್ಸಿಗೆ ತಲುಪಿಸುವುದು.

ಇತ್ತೀಚಿನ ಕನ್ನಡ ಹಾಡುಗಳಲ್ಲಿರೋ ಸಾಹಿತ್ಯ ನನಗೆ ಅರ್ಥ ಆಗ್ತಾ ಇಲ್ಲ . ಒಮ್ಮೊಮ್ಮೆ ನಾನು ಕನ್ನಡ ಹಾಡು ಕೇಳ್ತಾ ಇದ್ದೀನ ಅನ್ಸತ್ತೆ. "ಕತ್ಲಲ್ಲಿ ಕರಡಿಗೆ ಜಾಮೂನ್" ತಿನ್ನಿಸಬಾರ್ದಂತೆ. ನಮಗೆ ಮಾಡ್ಕೊಂಡು ತಿನ್ನಕೆ ಹಗಲಲ್ಲೇ ಟೈಮ್ ಇಲ್ಲ , ಇಂತ ಬೆಂಗಳೂರಲ್ಲಿ ಕಾಡು ಎಲ್ಲಿ ಹುಡ್ಕೋದು? ಕರಡಿ ಎಲ್ಲಿ ತರೋದು? ಹೋಗ್ಲಿ  ಮನುಷ್ಯರಿಗೆ ತಿನ್ನಿಸ್ಬೇಡಿ ಅಂದ್ರು ಪರವಾಗಿಲ್ಲ , ಕರಡಿ ಯಾಕೆ ಬಂತು ? ಆ ಹಾಡ ಒಳ ಅರ್ಥ ಇನ್ನು ತಿಳಿದಿಲ್ಲ. ಇನ್ನೊಂದು ಹಾಡು ಚಿಂಗಾರಿ ಸಿನಿಮಾ ದು . ಅದು ಕನ್ನಡ ಸಾಹಿತ್ಯನ? "ಕೈ ಕೈಯ ಕಚ್ಚಾ ಹಸುಡ  ಬಸುಡ , ತಲೆ ಕೆಟ್ಟ ಬಟ್ಟ  ಎವುಡ".....  ನನ್ನ ಕಿವಿ ಸರಿ ಇದೆ ಎಂದಾದರೆ ಇದೇ ಸಾಹಿತ್ಯ ನಾನು ಕೇಳಿದ್ದು. ಏನರ್ಥ ಈ ಸಾಹಿತ್ಯದ್ದು? ನಾನು ಈ ಹಾಡು ಬಸ್ ಸ್ಟಾಂಡ್ ಅಲ್ಲಿ ಕೇಳಿದೀನಿ .. ಮೊನ್ನೆ ಮೊನ್ನೆ ಗಣಪತಿ ವಿಸರ್ಜನೆ ದಿನ ಕೂಡ ಹುಡುಗ್ರು ಈ ಹಾಡಿಗೆ ಹೆಜ್ಜೆ ಹಾಕ್ತಿದ್ರು.ಎಲ್ಲ ಸಾರಿ ಕೆಳಿದಾಗಲು ಇದು ಕನ್ನಡ ಹಾಡ? ತಮಿಳಿನ ಹಾಡ? ತೆಲುಗು ಹಾಡ ಅಂತ ನಂಗೆ ತಿಳಿತ ಇಲ್ಲ.

ಆದರೂ, ಒಂದೊಂದು ಇತ್ತೀಚಿನ ಹಾಡುಗಳು ಅರ್ಥಪೂರ್ಣವಾಗಿ ಕೇಳಲು ಇಂಪಾಗಿಯೂ ಇವೆ. ಮುಂಗಾರು ಮಳೆ ಸಿನಿಮಾದ ಹಾಡು ಅಂಥದ್ದೊಂದು ಅಲೆ ಎಬ್ಬಿಸಿತು. ನಂತರದ ಹಾಡುಗಳು ಕೆಲವೊಂದು ಹಾಗೆಯೇ ಮೂಡಿದವು. ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆ ಕಾಲಗಳನ್ನು ಸೇರಿಸಿ ಒಗ್ಗರಣೆ ಹಾಕಿದ "ಇನ್ನೆಲ್ಲಿ ಉಳಿಗಾಲ" ಹಾಡು ಕೂಡ ಕೇಳಲು ಮಧುರವಾಗಿದೆ.

ಇವೆಲ್ಲ ಹಾಡುಗಳನ್ನು ಕೇಳಿ ಮುಂದಿನ  "ಪವಡಿಸು ಪರಮಾತ್ಮ " ಹಾಡು ಕೇಳುವಾಗ ಏನೋ ಧನ್ಯತಾ ಭಾವ!!! ಭಕ್ತಿ ಗೀತೆಗಳ ಗೀಳಿಲ್ಲದ ನಾನು, ಭಾವಗೀತೆಗಳ ಒಡನಾಡಿ. ಆದರೆ ಈ ಹಾಡು ಬೇರೆಯದೇ ಲೋಕಕ್ಕೆ ಕರೆದೊಯ್ಯುವುದು.

ಅಂತು ಇಂತೂ , ಭಾವ ಗೀತೆಗಳಿಂದ ಶುರುವಾದ ನನ್ನ ಪಯಣ, ಭಕ್ತಿ ಗೀತೆ ಥಲುಪಿಥು.  ಸದ್ಯ ಯೋ ಯೋ ಹನಿ ಸಿಂಗ್ ವರೆಗೆ ಬರ್ಲಿಲ್ಲ  :)







Comments

  1. Replies
    1. ಅದೊಂದು ಚಟ.. ಸಿಕ್ಕ ಸಿಕ್ಕ ಕಡೆ ಗೀಚೋದ್ದಕ್ಕಿಂತ, ಒಂದೇ ಕಡೆ ಇರ್ಲಿ ಅಂತ ಈ ಪ್ರಯತ್ನ. Ipad ಅಲಿ ಕೆಲವು, mobile ಅಲಿ ಕೆಲವು, ಎಲ್ಲೆಲ್ಲೋ paper ಮೇಲೆ ಹಾಗೆ, ಹಳೇ diary ಗಳಲ್ಲಿ ಬರೆದು ಸುಮಾರೆಲ್ಲ ಕಳೆದು ಹೋದವು..

      Delete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020