ಇಂದಿನ ನೋಟ!

ಅದು ಕತ್ತಲು ಕರಗಿ ಬೆಳಗಾಗುವ ಸಮಯ! ಮೋಡದ ಪರದೆಯ ಸಲ್ಪ ಸಲ್ಪವಾಗಿ ತೆರೆದು ಇಣುಕುತ್ತಿರುವ ಸೂರ್ಯನ ಕಿರಣಗಳು!! ಕಾಲಿಯಾಗಿರುವ ರಸ್ತೆಗಳು, ರಾತ್ರಿ ಗಸ್ತು ಮುಗಿಸಿ ಮಲಗಿರುವ ನಾಯಿಗಳು! ವಾಹನಗಳ ಹೊಗೆಯಿಂದ ಸಲ್ಪವಷ್ಟೇ ಸ್ವಾತಂತ್ರ್ಯ ಪಡೆದು ಉಸಿರಾಡುತ್ತಿರವ ಅಷ್ಟೋ ಇಷ್ಟೋ ಗಿಡ ಮರಗಳು!! ಪೇಪರ್ ಹಾಕಲು ಸೈಕಲ್ ಸವಾರಿ ಮುಂದುವರಿಸುತ್ತಿರುವ ಹುಡುಗರು! , ರಭಸವಾಗಿ ನಡೆಯುತ್ತಾ ಸಾಗುತ್ತಿರುವ ಮನೆಕೆಲಸದಾಕೆಯರು!!, ಬೆಳಿಗ್ಗಿನ ವಾಕಿಂಗ್ ಮುಗಿಸಿ ವಾಪಸಗುತ್ತಿರುವ ಹಿರಿಯ ನಾಗರೀಕರು! ಇನ್ನು ಮುಸುಕು ಹೊದ್ದು ಮಲಗಿರುವ P G ಗಳು, ಕಣ್ಣು ಹೊರಳಿಸದ್ದಲ್ಲೆಲ್ಲ ಕಾಣುವ ಸದ್ದಿಲ್ಲದ ಅಪಾರ್ಟ್ ಮೆಂಟ್ ಗಳು .  ಇದು ಇವತ್ತಿನ ಬೆಳಿಗ್ಗೆ ಸುಮಾರು ಆರರ ನನ್ನ ಅಡಿಗೆ ಮನೆಯ ಕಿಟಕಿಯೊಳಗಿಂದ ಕಂಡ ದ್ರಶ್ಯ ! ಈ ನಿಮಿಷಕ್ಕೆ - 'ಬೆಂಗಳೂರು  ಎಷ್ಟು ಖಾಲಿಯಾಗಿದೆ' ಅನ್ನಿಸಬಹುದು !!

ತಂಗಳು ಪೆಟ್ಟಿಗೆಯಿಂದ ಹಾಲು ತೆಗೆದು, ಕುದಿಸಿ , ಕಾಫಿ ಬೆರೆಸಿ ,ಲೋಟಕ್ಕೆ ಸೋಸಿ  ಇನ್ನೇನು ಕುಡಿಯುವ ಸಮಯ. ಹಾಗೆಯೇ  ಅದೇ ಕಿಟಕಿಯಿಂದ ಹೊರ ನೋಡಿದರೆ , ಬೇರೆಯದೇ ಪ್ರಪಂಚ!! ನಾನೇ ಮುಂದೆ ಹೋಗಬೇಕೆಂಬ ಸ್ಕೂಲ್ ಬಸ್ ಗಳು, ಹಿಂಬಿಡದ ಆಟೋ ಗಳು! ಶಾಲೆ ಗೆ ಮಗುವನ್ನು ಕಳಿಸಲು ನಿಂತಿರುವ ಪೋಷಕರು, ತರಕಾರಿ ಮಾರಲು ಹೊರಟಿರುವ ತಳ್ಳೋ ಗಾಡಿಗಳು! ಅದರೆಲ್ಲದರ ಮದ್ಯ ಅರ್ಜೆಂಟ್ ಆಗಿ ಕೆಲಸಕ್ಕೆ ಓಡುತ್ತಿರುವ ಜನಗಳು! ಸಕ್ಕರೆಗೆ ಇರುವೆ ಮುತ್ತಿದಂತೆ ಇರುವ ಟ್ರಾಫಿಕ್ !! ಒಮ್ಮೆಗೆ ಆಶ್ಚರ್ಯವಾಯಿತು.. ನಾನು ಕಾಫಿ ಮಾಡುವುದು ಅಷ್ಟು ಸಮಯ ಹಿಡಿಯಿತ? ಅಥವಾ ಬೆಂಗಳೂರಿಗೆ ಬೆಳಗಾಯಿತ ಎಂದು. ಅರ್ಧ ಗಂಟೆಗೆ ಮಂಪರಲ್ಲಿದ್ದ  ವಾತಾವರಣಕ್ಕೆ ಜೀವ ತುಂಬಿದಂತೆ ಬದಲಾಯಿತು!!

ಮತ್ತದೇ ಕೆಲಸಕ್ಕೆಂದು ಆಫೀಸ್ ಗೆ ಹೊರಡೊ ಸಮಯಕ್ಕೆಂದು ಹೊರ ಬಂದೊಡನೆ ವಾತಾವರಣದ ಮೂರನೇ ಅದ್ಯಾಯ !!!
ನೆತ್ತಿಯ ಸುಟ್ಟೆ ಬಿಡುವೆನೆನುವ ಸೂರ್ಯ !  ದಾರಿಯಲ್ಲಿ ಎಲ್ಲಿ , ಹೇಗೆ ಓಡಾಡುವಿರೆನ್ನೋ ವಾಹನಗಳು ! ಸಲ್ಪ ದಾರಿ ಸಿಕ್ಕರೆ ಅಲ್ಲಲ್ಲೇ ತೂರುವ ದಾರಿಹೋಕರು ! ಮಕ್ಕಳನ್ನು ಶಾಲೆಗೆ ಬಿಟ್ಟು ವಾಪಾಸಾಗುವ ಅಪ್ಪ ಅಮ್ಮಂದಿರು, ಆಫೀಸಿಗೆ ಲೇಟ್ ಆಗಿ ಕಾರ್ ಒಳಗೆ ಕೂತು ಹಾರ್ನ್ ಮಾಡೋ ಜನರು !!! ದುಡ್ಡು ಕೀಳುವುದರಲ್ಲೇ ಮುಳುಗಿರುವ ಟ್ರಾಫಿಕ್ ಪೊಲೀಸರು, ಇನ್ನು ಹಸಿರು ಲೈಟ್ ಬಿದ್ದಿಲ್ಲವೆಂದು ಪರದಾಡುತ್ತಿರುವ ಡ್ರೈವರ್ ಗಳು! ರೋಡ್ ಕ್ರಾಸ್ ಮಾಡಲಾರದೆ, ಧೂಳು ಹಾಗು ಹೊಗೆಯನ್ನು ತಡೆಯಲು ಕಣ್ಣು ಮಾತ್ರ ಕಾಣಿಸುವ ಹಾಗೆ ಬಟ್ಟೆ ಸುತ್ತಿರುವ ಹುಡುಗಿಯರು! ಯಾವ ಮುಸುಕಿನೊಳೆಗೆ ಯಾವ ಸುಂದರಿ ಇದ್ದಾಳೊ ಎಂದು ಆ ಟ್ರಾಫಿಕ್ ನಲ್ಲೂ ಹುಡುಗಿಯರತ್ತ ನೋಡೋ ಹುಡುಗರು!!

ಹಾಗೋ ಹೇಗೊ ಬಸ್ ಏರಿದರೆ ಬ್ರಹ್ಮಾಂಡವನ್ನೇ ಕಂಡೆನೆನ್ನುವ ಅನುಭವ!! ಆದರೆ  ಅದೊರಳಗಿನ ಚಿತ್ರಣವೇ ಬೇರೆ !!ಬಿಸಿಲಿನ ಬೇಗೆ ತಣಿಸುವ AC ಒಂದೆಡೆಯಾದರೆ, ನಿಲ್ಲಲು ಜಾಗವಿಲ್ಲದೆ, ಬಿದ್ದೆನೆನ್ನುವ ಭಯ ಒಳಗೊಳಗೆ ! ಬಸ್ ಕಂಡಕ್ಟರ್ ಎಂದರೆ ಯಾವಾಗಲು ಕಮಲ್ ಹಸನ್ ಹಾಗೆ  " ಇಂದಾದರು ಜೀವನದಲ್ಲಿ ಮುಂದೆ ಬನ್ನಿ " ಅಂತ ಹಾಡು ಹೇಳ್ತಾರೆ ಅಂದ್ರೆ ಅದು ತಪ್ಪು ಕಲ್ಪನೆ . ಹಾಳಾದ ವೋಲ್ವೋದಲ್ಲಿ ಹಿಂದೆ ಬನ್ನಿ , ಹಿಂದೆ ಬನ್ನಿ  ಎಂದು ಹೇಳುವ ಕಂಡಕ್ಟರ್ ದಿನ ಶುರು ಮಾಡೋ ಮೊದಲೇ ಹಿಂದೆ ಹಿಂದೆ ಕಳಸ್ತಾರೆ!! ಹಾಗೆ ಸುತ್ತ ದಿಟ್ಟಿಸಿದರೆ, ಚಿನ್ನಾರಿಮುತ್ತ ಸಿನಿಮಾದ ಹಾಡು ಗುಯ್ ಗುಟ್ಟಂತೆ!! "ಮಾಸಿದ ಕಣ್ಣೊರು, ಕೆದರಿದ ಜಡೆಯೋರು,ಕನ್ನಡಿ  ಕಣ್ಣೊರು, ಗಾಳಿ ಮೇಲೆ ತೇಲೊರು , ಮೇಲೆ ಎಲ್ಲೋ ನೋಡೋರು , ಹರವಿದ ಮುಡಿಯೋರು, ಅರಿಯದ ಭಾಷೆಯ ನುಡಿಯೋರು" ಅದರ ಜೊತೆ samsung ಮೊಬೈಲ್ ಹಿಡಿದೋರು , ಐಫೋನ್ ಅಲಿ ಹಾಡು ಕೇಳೋರು, HTC  ಲಿ  ಸಿನಿಮ ನೋಡೋರು, ಎಲ್ಲೋ ಒಂದೊಂದು ನೋಕಿಯಾ, ಸುಮ್ಮ ಸುಮ್ಮನೆ  ಫೋನ್ ಅಲಿ ಮಾತಾಡ್ತಾ ಹಲ್ಲು ಕಿರಿಯೋ ಜನರು! ಆದರೆ ಒಂದಂತೂ ನಿಜ, ಬಸ್ ಅಲ್ಲಿ ಒಂದು ಸಣ್ಣ ಕಲ್ಲೆಸದರು ಅದು ಬೀಳೋದು ಸಾಫ್ಟ್ ವೇರ್  ಇಂಜಿನಿಯರ್ ಮೇಲೆನೆ !! ಸೂರ್ಯ ತನ್ನ ನಿಜವಾದ ಬಣ್ಣ ತೋರಿಸ್ತಾ ಬಿಸಿಲಿನ ಝಳವನ್ನು ಮತ್ತೂ ಹೆಚ್ಚಿಸಿ ಮಜಾ ಮಾಡ್ತಾ ಇದ್ದಾನೆ!! 

ಇನ್ನೇನು ಆಫೀಸ್ ಗೆ ಬಂದ್ರೆ ಹೊರಗಡೆ ಏನಾಗ್ತ ಇದೆ ಎನ್ನುವ  ಗೋಜೆ ಇಲ್ಲ. ಬಿಸಿಲಾದರೇನು? , ಮಳೆಯಾದರೇನು ? ನಿನ್ನ ಜೊತೆ ನಾನಿಲ್ಲವೇನು ಎನ್ನುವ laptop,  ಕೆಲಸದ ಮದ್ಯ ನೋಡುವ youtube ವೀಡಿಯೊ ಗಳು !!! ಅದರ ಮದ್ಯ ಹೊಟ್ಟೆ ಪೂಜೆಗಾಗಿ ಕಾಫಿ , ಟೀ  ಹಾಗೂ ಊಟ!! ಹೇಗೋ ಬೆಂಗಳೂರ ಟ್ರಾಫಿಕ್ ನೋಡದೆ ಕೆಲಸ ಸಾಗುವುದು ಕುಂಟುತ್ತಾ !!!

ಇನ್ನೇನು  ದಿನಕರನ ದಿನಚರಿ ಮುಗಿಯುವ ಸಮಯ ಬಂದಾಗಿದೆ! ಸಂಜೆ ಹೊರಡುವ ವೇಳೆಗೆ ಎಲ್ಲರಿಗು ಮನೆಗೆ ಹೋಗುವ ತವಕ! ಜನ ಮರುಳೊ, ಜಾತ್ರೆ ಮರುಳೋ  ಎನ್ನುವ ಹಾಗೆ ತುಂಬಿರೋ ಬಸ್ ಗಳು , ಶಾಲೆಯಿಂದ ಬಸ್ ನಲ್ಲಿ ಮನೆಗೆ ವಾಪಸಾಗುತ್ತಿರುವ ಹೂ ಮನಸಿನ ಪುಟಾಣಿಗಳು! , ಯಾವಾಗ ಹಸಿರು ನಿಶಾನೆ ಬೀಳುವುದೋ ಎಂದು ಮಿಡಿಯುತ್ತಿರುವ ಒಳ ಮನ ! ಹೋಗಿ ಏನು ಅಡಿಗೆ ಮಾಡಲಿ ಇನ್ನುವ ಹೆಣ್ಣು ಹೃದಯ! ಹೆಂಡತಿ ಬಿಸಿಯಾಗಿ ಕಾಫಿ ಮಾಡಿರಲಿ, ಹೋದ ಹಾಗೆ ಹೀರುವೆನೆನ್ನುವ ದರ್ಪದ ಗಂಡು ಪ್ರಾಣಿ! ಅವೆರಡರ ನಡುವೆ PG ಊಟ ತಿನ್ನಲಾರದೆ ಬೇಕರಿಯಲ್ಲಿ ಏನೋ ಖರೀದಿಸುತ್ತಿರುವ ಹುಡುಗ ಹುಡುಗಿಯರು! ಅಂತ ವಾಹನಗಳ ದಟ್ಟಣೆಯಲ್ಲೂ ವಾಕ್ ಮಾಡುತ್ತಿರುವ ಆಂಟಿಯರು!!! ನಮಗಾಗಿ ಕಾಯುತ್ತಿರುವ ರಸ್ತೆಯ ಇಕ್ಕೆಲಗಳಲ್ಲಿ ಇರೋ ಚಾಟ್ ಅಂಗಡಿಗಳು!! ಆ ಧೂಳಿನಲ್ಲು ಕಣ್ಣು ಮಿಟುಕುವಂತೆ ಮಾಡುವ ಸೂರ್ಯ ರಶ್ಮಿಗಳು !!!
ಇಷ್ಟೆಲ್ಲಾ ಅಡೆತಡೆ ಇದ್ದರೂ ತನ್ನ ಕೆಲಸವ ಚಾಚು ತಪ್ಪದೆ ಮುಂದುವರಿಸಿದ್ದಾನೆ ನೇಸರ!

ಈ ಟ್ರಾಫಿಕ್ , ಈ ವಾತಾವರಣ , ಭಿನ್ನ ಭಿನ್ನ ಜನ , ವಿಧ ವಿಧವಾದ ಭಾಷೆ , ಆ ಜನ ಸಂದಣಿ  ಮತ್ತಷ್ಟು ಹೊಗೆ !! ಇಷ್ಟಿದ್ದರೂ ಬೆಂಗಳೂರಿಗೆ ಅದೇನೋ ಆಕರ್ಷಣೆ ಮಾಡುವ ತಾಕತ್ತಿದೆ! ಎಷ್ಟು ಜನ ಬಂದರೂ ಕೈ ಚಾಚಿ ತನ್ನ ಮಡಿಲಲ್ಲಿ ಜಾಗವಿರಿಸುತ್ತದೆ!
ಬೆಂಗಳೂರಿಗೆ ಬಂದು ಹತ್ತಿರ ಎಂಟು ವರ್ಷದ ಸಮಯದಲ್ಲಿ ಆಗಿರುವ ಬದಲಾವಣೆ ಅಪಾರವಾದರೂ, ಈ ಜಾಗವನ್ನು ಬಿಟ್ಟಿರಿಲಾರದ ಉದ್ಯೋಗ!! ಮಾಲ್ ಗಳ ಕಮಾಲು ಅತಿಯಾದಂತಿದ್ದರೂ, ರೋಡ ಬದಿಯಲ್ಲಿನ ವ್ಯಾಪಾರಿಗಳ ಮುಗುಳ್ನಗು ನಮ್ಮನ್ನು ಇನ್ನೂ ಹೆಚ್ಚಿಗೆ ಆಕರ್ಷಿಸಿದೆ !! ಮತ್ತಿನ್ನೇನು ಬದಲಾವಣೆಗೆ ಸಾಕ್ಷಿಯಾಗಲಿದೆಯೋ ಈ ಬೆಂದಕಾಳೂರು! ಕಾದು ನೋಡೋಣ!! 






Comments

  1. Kaadu nodonaa(Hiremagalooru kannan) - Munde banni haadu, phone names use madi song remake.. ellavu adbhutha.. :)

    ReplyDelete
  2. This comment has been removed by the author.

    ReplyDelete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020