ದಾರಿದೀಪ

ಅಮ್ಮ ಎಂದು ಓಡಿ
ಬರುವ ಮುದ್ದು 
ಎದೆಗವಚುವ ಸಾಹಸ  ನಿನದಾದರೆ 
ಹೆಗಲಿನ ಭಾರವಿಳಿಸೋ ಆತುರ ನನಗೆ!!
ಎಲ್ಲಿವರೆಗೆ ಈ ಪರದಾಟ 
ಯಾಕೆ ಈ ಬಿಡುವಿಲ್ಲದ ದುಡಿಮೆ,
ನಾನರಿಯೆ ಈ  ಪರಿಯ!!
ನೀನಿಲ್ಲದೆ ಮನ ಮರುಗಿದೆ 
ಮುದುಡಿ ಹೊರಳಾಡಿದೆ ನೀ!!
ಸಮಯ ಮರು ತಿರುಗಲಾರದು
ನಿನ್ನ ಸಾಹಸ ನೋಡಲು ,
ನನ್ನ ಕುರುಡು ಕಾಯಕ
ಬಂಧಿಸಿದೆ ನನ್ನ ,
ಬಿಡಲಾರೆನು ನಿನ್ನ !!
ಕಾಣುತಿರುವೆ ಕನಸೊಂದನು
ನಿನ್ನ ಸುಖದ ಮೊಗದೊಂದಿಗೆ
ಆ ನೀಲಾಕಾಶದಲಿ
ಹಾರುವ ಸ್ವಚ್ಛಂದದ
ನಿನ್ನ ಬದುಕಿಗಾಗಿ !!
ಸೂತ್ರವಿಲ್ಲದ ಪತಾಕೆಯೇ
ನೀ ಗುರಿ ಮುಟ್ಟುವ ವರೆಗೆ
ಹಾರಿಬಿಡು!!
ದುಡಿವೆ ನಿನ್ನೊಳಿತಿಗಾಗಿ
ನಿನ್ನ ಗುರಿಗೆ ಗುರುವಾಗಿ !!
ಸಮಯ ವ್ಯರ್ಥ ಮಾಡದೆ
ಸವೆಯದ ಹಾದಿಯ
ಸವೆಸುವ ಕಾಯದಲಿ
ಮುನ್ನುಗ್ಗು ಛಲದೊಳು
ಉರಿವೆ ನಾ ನಿನಗೆ
ದಾರಿದೀಪವಾಗಿ !!





Comments

Popular posts from this blog

ಅವಳು!!!

ಹೋಗಿ ಬಾ ಮಗಳೇ !!

Life lessons on the way!!!