Posts

Showing posts from September, 2014

ಇಂದಿನ ನೋಟ!

ಅದು ಕತ್ತಲು ಕರಗಿ ಬೆಳಗಾಗುವ ಸಮಯ! ಮೋಡದ ಪರದೆಯ ಸಲ್ಪ ಸಲ್ಪವಾಗಿ ತೆರೆದು ಇಣುಕುತ್ತಿರುವ ಸೂರ್ಯನ ಕಿರಣಗಳು!! ಕಾಲಿಯಾಗಿರುವ ರಸ್ತೆಗಳು, ರಾತ್ರಿ ಗಸ್ತು ಮುಗಿಸಿ ಮಲಗಿರುವ ನಾಯಿಗಳು! ವಾಹನಗಳ ಹೊಗೆಯಿಂದ ಸಲ್ಪವಷ್ಟೇ ಸ್ವಾತಂತ್ರ್ಯ ಪಡೆದು ಉಸಿರಾಡುತ್ತಿರವ ಅಷ್ಟೋ ಇಷ್ಟೋ ಗಿಡ ಮರಗಳು!! ಪೇಪರ್ ಹಾಕಲು ಸೈಕಲ್ ಸವಾರಿ ಮುಂದುವರಿಸುತ್ತಿರುವ ಹುಡುಗರು! , ರಭಸವಾಗಿ ನಡೆಯುತ್ತಾ ಸಾಗುತ್ತಿರುವ ಮನೆಕೆಲಸದಾಕೆಯರು!!, ಬೆಳಿಗ್ಗಿನ ವಾಕಿಂಗ್ ಮುಗಿಸಿ ವಾಪಸಗುತ್ತಿರುವ ಹಿರಿಯ ನಾಗರೀಕರು! ಇನ್ನು ಮುಸುಕು ಹೊದ್ದು ಮಲಗಿರುವ P G ಗಳು, ಕಣ್ಣು ಹೊರಳಿಸದ್ದಲ್ಲೆಲ್ಲ ಕಾಣುವ ಸದ್ದಿಲ್ಲದ ಅಪಾರ್ಟ್ ಮೆಂಟ್ ಗಳು .  ಇದು ಇವತ್ತಿನ ಬೆಳಿಗ್ಗೆ ಸುಮಾರು ಆರರ ನನ್ನ ಅಡಿಗೆ ಮನೆಯ ಕಿಟಕಿಯೊಳಗಿಂದ ಕಂಡ ದ್ರಶ್ಯ ! ಈ ನಿಮಿಷಕ್ಕೆ - 'ಬೆಂಗಳೂರು  ಎಷ್ಟು ಖಾಲಿಯಾಗಿದೆ' ಅನ್ನಿಸಬಹುದು !! ತಂಗಳು ಪೆಟ್ಟಿಗೆಯಿಂದ ಹಾಲು ತೆಗೆದು, ಕುದಿಸಿ , ಕಾಫಿ ಬೆರೆಸಿ ,ಲೋಟಕ್ಕೆ ಸೋಸಿ  ಇನ್ನೇನು ಕುಡಿಯುವ ಸಮಯ. ಹಾಗೆಯೇ  ಅದೇ ಕಿಟಕಿಯಿಂದ ಹೊರ ನೋಡಿದರೆ , ಬೇರೆಯದೇ ಪ್ರಪಂಚ!! ನಾನೇ ಮುಂದೆ ಹೋಗಬೇಕೆಂಬ ಸ್ಕೂಲ್ ಬಸ್ ಗಳು, ಹಿಂಬಿಡದ ಆಟೋ ಗಳು! ಶಾಲೆ ಗೆ ಮಗುವನ್ನು ಕಳಿಸಲು ನಿಂತಿರುವ ಪೋಷಕರು, ತರಕಾರಿ ಮಾರಲು ಹೊರಟಿರುವ ತಳ್ಳೋ ಗಾಡಿಗಳು! ಅದರೆಲ್ಲದರ ಮದ್ಯ ಅರ್ಜೆಂಟ್ ಆಗಿ ಕೆಲಸಕ್ಕೆ ಓಡುತ್ತಿರುವ ಜನಗಳು! ಸಕ್ಕರೆಗೆ ಇರುವೆ ಮುತ್ತಿದಂತೆ ಇರುವ ಟ್ರಾಫಿಕ್ !

"USE ME"(NOT)

Head is getting exploded to the core with head ache!, heart is getting drenched by the tears and the 'happy-go-lucky' my inner self is consoling the external 'ME'. My mind is flooded with questions, and are still raining cats and dogs! The only request for all you know me is to "STOP USING ME FOR YOUR PURPOSE" - I AM NOT A "USE ME" BIN. Being good to all hurts sometimes. It does hurts really bad when some one really close stabs you from behind.Confrontation is not at all the way to solve differences! Being naive and calm externally with full of poison inside can make you feel 'Out of the world' for only short span of time!! When the true colors comes out, your shoes will not be exchanged to suit you. Remember you should be in your shoes!! , don't ever try to fit into others to suit your choice. A big tight virtual slap!- to whoever mess with me by using my abilities. I have reached my threshold now period. Thats it!!! no more gyaan a

ನನ್ನೊಳಗಿನ ಹಾಡು!!!!

ಮತ್ತದೇ ಬೇಸರ , ಅದೇ ಸಂಜೆ, ಅದೇ ಏಕಾಂತ....  ಹಾಡು ಕಿವಿಯೊಳೆಗ ಇಂಪಾಗಿ ಉಲಿಯುತ್ತಿರುವಗಲೇ  ನಂಗೆ ಸಂಜೆ ಆಗಿದ್ದೆಂದು ಗೊತ್ತಾಗಿದ್ದು.. ಎಂತ ಮಧುರವಾದ ಹಾಡು!  ನಿಸಾರ್ ಅಹಮದ್ ಅವ್ರು ಯಾವ್ ಮೂಡಲ್ಲಿ ಹಾಡು ಬರೆದರೋ ಗೊತ್ತಿಲ್ಲ!! ಆದರೆ ಈ ಹಾಡು ಕೇಳಿದಾಗೆಲ್ಲ ಮನಸ್ಸಲ್ಲಿ ಒಂದು ತಂತಿ ಮಿಡಿಯುವುದೆಂತು ನಿಜ. ಈ ಭಾವಗೀತೆಗಳೇ ಹಾಗೇ.. ನಮ್ಮ ಭಾವನೆಗಳನ್ನು ತಮ್ಮದಾಗಿಸಿಕೊಳ್ಳುತ್ತವೆ...  ಹಾಡು ಮುಗಿದೇ ಹೋಯ್ತು!!!  ಆದ್ರೆ playlist ಅಲ್ಲಿ ಮುಂದಿನ ಹಾಡು ರೆಡಿ ಆಗಿ ಕಾಡು ಕೂತಿದೆ. ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು.... ಸಲ್ಪ ಕೇಳಿ ನನ್ನ ಕೆಲಸ ಮುಂದುವರೆಸಣ ಅಂತ ಅಂದುಕೊಳ್ತೀನಿ, ಆದ್ರೆ ನನ್ನ ಭಾವಗೀತೆ ಲಿಸ್ಟ್ ಮುಂದುವರೆದ ಹಾಗೆ ನನ್ನ ಕೆಲಸಗಳು ಹಿಂದೆ ಹಿಂದೆ ಹೋಗ್ತಾ ಇರ್ತವೆ. ಸಂಗೀತಕ್ಕೆ ಇರುವ ಶಕ್ತಿಯೇ ಹಾಗೆ ಅನ್ಸತ್ತೆ.. ಒಂದೊಂದು ಹಾಡು ಮನಸ್ಸಲಿ ಒಂದೊಂದು ಅಲೆ ಹಬ್ಬಿಸುತ್ತವೆ. ರಾಗಗಳ ಬಗ್ಗೆ ನನಗಿರುವ ಪ್ರಜ್ಞೆ ಅಷ್ಟಕ್ಕಷ್ಟೇ.. ಆದ್ರೆ, ಆ ರಾಗಕ್ಕಿರುವ ಶಕ್ತಿ ಅಪಾರ . ಈ ಹಾಡನ್ನು ಕೇಳುತ್ತ ಎಷ್ಟೆಲ್ಲಾ ಸಂದರ್ಭಗಳು ಕಣ್ಣ ಮುಂದೆ ಮತ್ತೆ ಮರುಕಳಿಸುತ್ತವೆ . ಜೀವದ ಗೆಳತಿ ಮದುವೆಯಾಗಿ ಸಪ್ತ ಸಾಗರ ಹಾರಿ US ಗೆ ಹೋಗಿದ್ದು, ಆಗಾಗ ಮಾತಾಡುತ್ತಿದ್ದ ನೆಂಟರು ಸಂದರ್ಭಕ್ಕೆ ತಕ್ಕಂತೆ ವರ್ತಿಸಿದ್ದು , ಹೀಗೆ ಹತ್ತು ಹಲವಾರು.. ಈ ಹಾಡುಗಳು ಹಳೆಯದ್ದನ್ನೆಲ್ಲ ಕೆದಕಿ ಹರಡುತ್ತವೆ. Celion Dion ಹಾಡಿರೋ  I

ಮಲೆನಾಡ ಮಳೆಗಾಲ- ಅಳಿಯದೆ ಉಳಿದಿದೆ ಮನದಾಳ!!

ಇನ್ನೇನು ಆಫೀಸ್ ಇಂದ ಮನೆಗೆ ಹೊರಡೋ ಸಮಯ.  ಹಾಳು ಮೂಳು ಕೆಲಸಗಳಿಗೆ ಫುಲ್ ಸ್ಟಾಪ್ ಹಾಕಿ ನನ್ನ laptop ನ ಅದರ ಚೀಲಕ್ಕೆ ತುಂಬಿ , ಅದನ್ನು ಹೆಗಲಿಗೇರಿಸಿ ಆಫೀಸ್ ಬಾಗಿಲಿಂದ ಹೊರಗೆ ಬರುವಷ್ಟರಲ್ಲಿ  ಮೂಗಿನ ಮೇಲೊಂದು ಹನಿ 'ಟಪ್ '! ಅಂತ ಬಿತ್ತು.  ಅಯ್ಯೋ! ದೇವರೇ, ಮನೆಗೆ ಹೇಗಪ್ಪಾ ಹೋಗೋದು ಅಂತ ಬೇಗ ಬೇಗ ಬಸ್ ಸ್ಟಾಂಡ್ ಕಡೆಗೆ ಹೆಜ್ಜೆ ಹಾಕಿದೆ.ಒಂದೊಂದೇ ಹನಿ ತಲೆ ಮೇಲೆ  ಬಿದ್ದ ಹಾಗೆ, ನೆನಪುಗಳು ಒಂದೊಂದಾಗಿ ಬಿಚ್ಚಿ ಗರಿಗೆದರಿದವು. ಇನ್ನೇನು ಬೇಸಿಗೆ ರಜೆ ಮುಗಿದು ಜೂನ್ ಬಂದೇ ಬಿಡ್ತು! ಶಾಲೆಗೆ  ಹೋಗ್ಬೇಕು ಅಂತ ನಮಗೆ ಅನ್ನಸಿದರೆ , ಅಬ್ಬಾ ಅಂತು ಇಂತು ರಜೆ ಮುಗಿತಲ್ಲಾ ಅನ್ನೋ ನೆಮ್ಮದಿಯ ನಿಟ್ಟುಸಿರು ಅಮ್ಮ ಅಪ್ಪಂಗೆ . ಶಾಲೆ ಗೆ ಹೊರಡೋ ದಿನಕ್ಕೆ ಸರಿಯಾಗಿ ಮಳೆ ಶುರು ಆಗೋದರಿಂದ ಮತ್ತೆ ಹೇಗಿದ್ರೂ ಮಳೆ ಜಾಸ್ತಿ ಆದ್ರೆ ರಜೆ ಸಿಕ್ಕೆ ಸಿಗುತ್ತೆ ಅನ್ನೋ ಖುಷಿ ಒಳಗೊಳಗೆ. ಎಲ್ಲೆಲ್ಲೊ ಹರಡಿದ್ದ ಬುಕ್ ಗಳನ್ನು ಬ್ಯಾಗ್ ಗೆ ಸೇರಿಸಿ ಹೊರಡೋ ಸಡಗರ. ನಮ್ಮ ಪಾದರಕ್ಷೆಗಳಿಗು ರಜೆಯಿಂದ ಮುಕ್ತಿ . ಕೈ ಯಲ್ಲಿ ಕೊಡೆಯಿದ್ರು ಬಿಚ್ಚದೆ, ಪಕ್ಕದ ಮನೆಯವರ ಗೊಪ್ಪೆಯೊಳಗೆ ಸೇರಿ ಶಾಲೆ ಸೇರಿದ್ದು ಇದೆ. ಹೋಗೋ ದಾರಿಯಲ್ಲಿ ಒಬ್ಬೊಬ್ಬರಾಗಿ ಕೂಡಿಕೊಳ್ಳುವ ಮಕ್ಕಳು . ಜನ ಹೆಚ್ಚಾದಂತೆ , ಹೋಗೋ ದಾರಿಯಲ್ಲಿ ಆಟಗಳೂ ಹೆಚ್ಚೇ ! ಒಬ್ಬ ಮಳೆ ನೀರಲ್ಲಿ ನೆಂದರೆ ಇನ್ನೊಬ್ಬ ಅವನಿಗಿಂತ ನಾನೇನು ಕಮ್ಮಿ ಇಲ್ಲ ಅನ್ನೋ ಹಾಗೆ ನೆನೆಯೊದು. ಹೋಗೋ ದಾರಿಯಲ್ಲಿ