Posts

Showing posts from October, 2014

ನಗು ಮಗು!!!

ಮಾನವನ ಜನ್ಮ ಪವಿತ್ರವಾದುದು. ಈ ಜನ್ಮ ನಮ್ಮ ಜನ್ಮದಾತರಿಗೆ ಸಮರ್ಪಣೆ! ಸಿಗುವ ಒಂದು ಜನ್ಮ ಪಾವನವಾಗುವುದು, ಅದನ್ನು ಅರ್ಥಪೂರ್ಣವಾಗಿ ಅನುಭವಿಸಿ ಬದುಕಿದಾಗ! ಒಂದು ಹೆಣ್ಣು ಮಗುವಿಗೆ , ಹೆಣ್ತನ ಸ್ವಾಭಾವಿಕ!! ಆದರೆ ತಾಯ್ತನ ದೈವಿಕ !! ನನ್ನ ಅಮ್ಮನ ನೆನೆಯುತ್ತ ಈ ಬರವಣಿಗೆ ಸಾಗಿದೆ! ಈ ಲೇಖನ ಅವಳಿಗೆ ಸಮರ್ಪಣೆ! ತಿಂಗಳುಗಟ್ಟಲೆ ವಾಂತಿ, ವಾರನುಗಟ್ಟಲೆ ತಲೆ ಸುತ್ತು , ದಿನಕ್ಕೊಂದರಂತೆ ಹೊಸ ನೋವು ಹಾಗು ಅನುಭವ!!! ನನ್ನೊಳಗಿನ ಜೀವ ಜೀವನ ಪಡೆಯಲು ಕೆಲವೇ ತಿಂಗಳು ಎಂದು ನೆನೆದಾಗ ಇವೆಲ್ಲ ನೋವು, ಸಂಕಟ ಶಮನವಾಗುತ್ತಿತ್ತು ! ಅವತ್ತು ಬೆಳಿಗ್ಗೆ ಆರಕ್ಕೆ ಏನೋ ಸಂಕಟ, ಬೇಗ ಬೇಗ ಅಮ್ಮನಿಗೆ  ಏನಾಗುತ್ತಿದೆ ಎಂದು ತಿಳಿಸಿ, ಆಫೀಸ್ ಕೆಲಸಗಳನ್ನೆಲ್ಲ ಬೇರೆಯವರಿಗೆ ರವಾನಿಸಿ, ಆ ಸಂಕಟ , ಆ ನೋವು ಹೆರಿಗೆ ನೋವೆಂದು ಖಾತ್ರಿಯಾದಾಗ ಕಾರ್ ಅಲ್ಲಿ ಆಸ್ಪತ್ರೆ ವರೆಗೆ ಪಯಣ! ಆ ನೋವಲ್ಲು ಆಸ್ಪತ್ರೆಯ ಎಲ್ಲ ವಿವರಗಳನ್ನು ಭರ್ತಿ ಮಾಡಿ, ಡಾಕ್ಟರಿಗೆ ಫೋನ್ ಮಾಡಿ , ನರ್ಸ್ ತೋರಿಸಿದ ಹಾಸಿಗೆ ಮೇಲೆ ಬಿದ್ದಿದ್ದಾಯ್ತು !! ವಿಧ ವಿಧವಾದ ಚೆಕ್ ಅಪ್ ಗಳು ,  ನೋವು ಅಳೆಯುವ ಮಾಪಕಗಳು , ಮತ್ತಿನ್ನೇನೋ ತರುತ್ತ ಓಡಾಡುತ್ತಿರುವ ನರ್ಸ್ ಗಳು!  ಕಂಗಾಲಾಗಿ ಏನಾಗುವುದೋ ಎನ್ನುವ  ಅಮ್ಮನ ಕಣ್ಣುಗಳು!! ಆಫೀಸ್ ಗೆ ಹೋಗಲಾರದೆ ಮರಳಿರುವ ತನ್ನವರು!! ನೋವೇನು ಅಷ್ಟು ಅನ್ನಿಸಲಿಲ್ಲ ಮೊದ ಮೊದಲು!! ಬರ ಬರುತ್ತಾ ಜಾಸ್ತಿ ಆಗಿ , ಮಗು ತಲೆ ತಿರುಗುತ್ತ ಇದೆ ಎಂದಾಗ ಸಿ-ಸ

ನೀ ಮಾಯೆಯೊಳಗೋ! ಮಾಯೆ ನಿನ್ನೊಳಗೋ!!

ಈ ಬೃಹತ್  ಪ್ರಪಂಚದಲ್ಲಿ 'ನಾನು' ಎಂಬುದು ತೃಣ ಸಮಾನ ! ಹಾಗಿದ್ದರೂ ಜನ ನನ್ನತನವನ್ನು ಎತ್ತಿ ಹಿಡಿಯುವುದು ವ್ಯಂಗ್ಯವೆನಿಸುತ್ತದೆ. ವಿಸ್ತಾರವಾದ ಆಲೋಚನೆಗಳಿಲ್ಲದೆ , ಸಣ್ಣತನಗಳಿಂದ ಜನರನ್ನು ಅಳೆಯುವ 'ನಾನು' ಎಂಬುವ ಅಹಂಭಾವ ಇತ್ತೀಚಿಗೆ ತುಂಬಾ ಎನಿಸುವಷ್ಟು ಜನಗಳಲ್ಲಿ ಕಾಣುತ್ತಿದೆ! ಹಣತೆ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎನ್ನುವ ಹಾಗೆ , ಒಳ ಮನಸಿನ ಅಳಿವಿನ ಸಮಯದಲ್ಲಿ ಈ ರೀತಿಯಾದ ನನ್ನತನ ಜಾಸ್ತಿಯಗಬಹುದೇನೋ ??!! ಎಲ್ಲದರಲ್ಲೂ ಹುಳುಕು ಹುಡುಕುವ ನನ್ನತನವನ್ನು  ಮೊದಲ ಹಂತದಲ್ಲೇ ಚಿವುಟಲಿಲ್ಲವೆಂದರೆ ಹೆಮ್ಮರವಾಗುವುದು ಖಂಡಿತ !!! ನಾನೆಂಬ ಮಾಯೆ ಅರಸಿ ಬಂದಾಗ ಅದನ್ನು ಹಿಮ್ಮೆಟ್ಟಿ ನಿಂತರೆ ಬದುಕು ಹಸನಾಗುವುದು. ಆದರೆ, ಆ ಮಾಯೆ ಒಳ  ಹೊಕ್ಕಾಗ ಅಹಂ ವ್ಯಾಪಿಸುವುದು ಸಹಜ! ಮದುವೆಗೆ ಮುನ್ನ ಹುಡುಗ ತನ್ನ ಹುಡಗಿ ಹೇಗಿರಬೇಕೆಂದು ಮನಸ್ಸಿನಲ್ಲೇ ಚಿತ್ರ ಬಿಡಿಸಿ ಅವಳಿಗಾಗಿ ಮನಸ್ಸಲ್ಲಿ ಒಂದು ಗೂಡು ಕಟ್ಟಿ , ಅವಳಿಗಾಗಿ ಕಾದು ಆ ಮಾಯೆಗಾಗಿ ಹುಡುಕಾಡುವುದು ಸಹಜ! ಅಂತರಂಗದಲ್ಲಿ ಚಿತ್ರಿಸಿದ ಆಕೆಯ ಮುಖಚರ್ಯೆಗಾಗಿ ವರ್ಷಾನುಗಟ್ಟಲೆ ಹುಡುಕಿ , ತಡಕಾಡಿ  ಕೊನೆಗೆ ಸಿಕ್ಕರೆ ಮನಸ್ಸೊಳಗೆ ಖುಷಿ ಅಪಾರ. ನಂತರ ಆ ಮಾಯೆಗೆ ಬಲಿಯಾಗಿ ತನ್ನವರ ಮರೆತರೆ ತ್ರಿಶಂಕು ಸ್ವರ್ಗ ! ತಾನಾಗೆ ಹುಡುಕಿದ ಮಾಯೆ , ತನ್ನೊಳು ಹೊಕ್ಕಿ ತನ್ನತನಕ್ಕಾಗಿ  ಅಣು ಅಣುವಾಗಿ ಕೊಲ್ಲುವಾಗ  ಆಗುವ ವೇದನೆ ಮನುಷ್ಯನ ಜಾಡ್ಯವನ್ನೇ ಕುಗ್ಗಿಸುವಂತಹುದು !

ಹೀಗೊಬ್ಬ ಸಾಫ್ಟ್‌ವೇರ್ ಹೈದ!

ಒಂದು ಸರಳ ಯಂತ್ರ ! ಎರಡು ಕೈಗಳುಳ್ಳ ಯಂತ್ರ.. ನಮಗೇನು ಬೇಕೆನಿಸುತ್ತದೋ ಅದನ್ನು ತರುವ ಅಕ್ಷಯ ಯಂತ್ರ! ಅಥವಾ ವರ ಕೊಡುವ ಕೈಗಳು ಆದರೆ ಅದೊಂದು ಯಂತ್ರ! ನಮ್ಮ ಹತೋಟಿಯಲ್ಲಿರುವ ಚಿಕ್ಕದಾದ ಯಂತ್ರ !  ಇದರ ಅನ್ವೇಷಣೆಗಾಗಿ ನಮ್ಮ ಗುಂಡನಿಗೆ ಪಾರಿತೋಷಕ ಕೊಡುವ ಸಮಯ.. ಗುಂಡನ ಸಂತೋಷಕ್ಕೆ ಪಾರವೇ ಇಲ್ಲ! ಹಾಗೆ ಗುಂಡನಿಗೆ ಸಿಹಿ ತಿನ್ನಬೇಕೆಂದು ಅನಿಸಿದಾಗ ಬಾಯಿ ತೆರೆದುಕೊಂಡು ಅವನ ಈ ಹೊಸ ಯಂತ್ರಕ್ಕೆ ಆದೇಶ ಕಳುಹಿಸುವುದಷ್ಟೇ ಆತನ ಕೆಲಸ! ಎರಡು ಕೈಗಳುಳ್ಳ ಈ ಯಂತ್ರ ದೊಡ್ಡ ಪಾತ್ರೆ ತುಂಬ ತರ ತರವಾದ ಸಿಹಿ ಖಾದ್ಯಗಳನ್ನು ತರುತ್ತಾ ಇದೆ!! ಗುಂಡ ಬಾಯಿ ತೆರೆಯುತ್ತಾ  ಇದ್ದಾನೆ ! ಗುಂಡನ ರೂಂಮೇಟ್  ಆತನ ಬಾಯೊಳಗೆ ಪೇಪರ್ ತುರುಕಿದಾಗ, ಅದು ಸಿಹಿ ಎನಿಸದೆ  ಕಣ್ತೆರೆದು ನೋಡಿಗಾದ ಗುಂಡನಿಗೆ ತನ್ನ ಕನಸಿನ ಅರಿವಾಗಿ, ಆತುರವಾಗಿ ಆಫೀಸಿಗೆ ಹೊರಡಲು ಅಣಿಯಾದ!! ನಮ್ಮ ಗುಂಡನ ದೊಡ್ಡ ಆಸ್ತಿ ಅವನ ಗೋಳಾಕಾರದ ಉದರ! ಅದನ್ನು ತುಂಬಿಸುವುದಕ್ಕೆ ಅವನು ಎಲ್ಲ ಮೋಸಮಾಡುವುದಿಲ್ಲ. ಬೆಳಿಗ್ಗೆ ಸುಮ್ಮನೆ ಹಾಲಿನೊಂದಿಗೆ ಕಾರ್ನ್ ಫ್ಲೇಕ್ಗಳನ್ನು ಅವನ ರೂಮ್ನಲ್ಲಿ ತಿನ್ನುವ ಅವನು ಕ್ಯಾಬ್ ಗಾಗಿ ಓಡುವುದರಲ್ಲಿ ಅದನ್ನು ಅರಗಿಸಿಕೊಳ್ಳುತ್ತಾನೆ. ಆಫೀಸ್ ತಲುಪುವ ವರೆಗೆ ಒಳ್ಳೆಯದೊಂದು ನಿದ್ದೆ ಮಾಡಿ, laptop ಬ್ಯಾಗ್ ನ್ನು  ಅವನ ಸ್ಥಳದಲ್ಲಿ ಬಿಸಾಡಿ , ಅವನ ಆಯಾಸಗೊಂಡ ಕಾಲುಗಳು ಅವನ ತೂಕವನ್ನು ಲೆಕ್ಕಿಸದೆ ಕೆಫೆಟೇರಿಯಾ ಸೇರಿಸುತ್ತವೆ. ಹೇಗಿದ್ರೂ sudexo ಕೂಪನ