Posts

Showing posts from January, 2015

ಮಾತೆ ಬಂಗಾರ ಮಾನಿನಿಯರಿಗೆ!!

ಒಂದು ಸಣ್ಣ ಕವಿತೆ ಸೋಮಾರಿ ಕಟ್ಟೆ / jobless jacks/  hard  workers ಜನತೆಗೆ ನೆನಪುಗಳ ಕೆದಕಿ ,ವರುಷಗಳ ಹರಡಿ ಗೆಳತಿಯರ ಒಡಗೂಡಿ ಹೆಕ್ಕೆಕ್ಕಿ ತೆಗೆಯುತಾ ಆ  ಸುಮಧುರ ಕ್ಷಣಗಳನು, ಹೃದಯ ತುಂಬಿ ನಕ್ಕು ನಾ ಹಗುರಾದೆ ನೆನೆದು !! ಜೊತೆಯಲ್ಲೇ ಬೆಳೆದು , ಮನಸ್ಸು ಬಿಚ್ಚಿ ಹರಟಿ ಕಿವಿಗಳಾದವು  ಸಾಕ್ಷಿ ಪ್ರತಿಯೊಬ್ಬರ ಗುಟ್ಟುಗಳಿಗೆ. ಎಳೆ ಎಳೆಯಾಗಿ ಆ ವಿಷಯಗಳು ಬರುತಿರಲು ಎಲ್ಲರೊಂದಿಗೆ ಹಂಚಿ ನಾ ಹಕ್ಕಿಯಾದೆ!! ಸ್ಮೃತಿ ಪಟಲದಿಂದ  ಇಣುಕಿಣುಕಿ ಬಂದ ಜೊತೆ ತಿಂದ ಪೆಟ್ಟು ಗುರು ಹಿರಿಯರಿಂದ ಒಮ್ಮೆಗೆ ಝಲ್ ಎಂದರೂ ಮನ, ಹಿತವಾಗಿದೆ ಆ ನೋವು ನಿಮ್ಮೊಂದಿಗೆ ನೆನೆಯುವುದರಿಂದ!! ಮನದ ಪರದೆ ಸರಿಸಿ, ಜೊತೆಗೆ ನಗುವ ಬೆರೆಸಿ ಒಡಗೂಡಿ ತಿಂದ ಆ ದಿನವ ಸ್ಮರಿಸಿ ಬಾಯಿ ನೀರಾಡಿದರೂ, ಬಾಯ್ತುಂಬ ಉಸುರಿ ತೇವವಾದವು ಕಣ್ಣು ಆನಂದ ಬಾಷ್ಪದಿಂದ !! ದಿನ ಬೆಳಗಾದರೆ ಏನಾದರೊಂದು ಹೊಸ ಮೆಲುಕು ವಿಷಯ ಓದುತ್ತಿರುವಾಗ ಆ ಮುಗುಳುನಗು ಪ್ರತಿಯೊಂದು ನಿಮಿಷವೂ ಬಿಡುವಿಲ್ಲ ಮಾತಿಗೆ ಮಾತೆ ಬಂಗಾರ ಮಾನಿನಿಯರಿಗೆ !!!

ಅದೇನು ಠೀವಿ!!!

ಆಗ ನಾನು ಎರಡು ಮೂರು ವರ್ಷದವಳಿರಬೇಕು!! ಎಲ್ಲ ಮಕ್ಕಳು ಗುಂಪಾಗಿ ಒಟ್ಟಿಗೆ ಏನೋ ಕಿರುಚಿಕೊಂಡು ಗಲ್ಲಿಯ ಕೊನೆಯ ಮನೆಗೆ ಓಡಿ ಹೊಗುತ್ತಿದ್ದರು. ತಲೆ ಬುಡ ಏನು ಗೊತ್ತಿಲ್ಲದ ನಾನು ಸುಮ್ಮನೆ ಅವರೊಂದಿಗೆ, ಬಸವನ ಹಿಂದೆ ಬಾಲದಂತೆ ಓಡಿ ಹೋದೆ!! ಎಷ್ಟೊಂದು ಜನ ಆಗಾಗಲೇ ಅಲ್ಲಿ ಮುತ್ತಿದ್ದರು!! ಏನಾಗುತ್ತಿದೆ ಎಂದು ತಿಳಿಯದೆ ಸಲ್ಪ ಹೊತ್ತಿನ ತನಕ ನೋಡಿ ವಾಪಸ್ ಆದೆವು. ಮಾರನೇ ದಿನ ಅದೇ ಅದ್ಯಾಯ !! ಅವತ್ತು ಸಲ್ಪ ನೋಡ ಸಿಕ್ಕಿತು!! ಪುಟ್ಟ ಪುಟ್ಟ ಜನ ಅಷ್ಟು ಚಿಕ್ಕ ಡಬ್ಬದೊಳಗೆ!! ನಾವು ಆ ಡಬ್ಬಿ ಒಡೆದರೆ ಅವರು ಹೊರಗೆ ಬರಬಹುದೇ?? ಅವರು ಯಾಕೆ ಯಾವಾಗಲೂ ಕಪ್ಪು ಬಿಳುಪಿನ ಅಂಗಿ ಹಾಕಿದ್ದಾರೆ ?? ಇವೆಲ್ಲ ನಮ್ಮ ಗುಂಪಿನ ಸವಾಲುಗಳು !! ಆಗ ಅದನ್ನು ನೋಡಿ ಅದೇನು ಎಂದು ಎಲ್ಲರನ್ನೂ ಕೇಳಿದೆವು!! ನಿಜ !! ಅದು ಟಿ ವಿ !! ನಾವು ಮೊದಲ ಬಾರಿಗೆ ನೋಡಿದ ಕಪ್ಪು ಬಿಳುಪಿನ portable ಟಿ ವಿ ಅದು!! ಆ ಮನೆಯ ಜನಕ್ಕೆ ಹೇಗೆ ಅನ್ನಿಸುತ್ತಿತ್ತೋ ಗೊತ್ತಿಲ್ಲ!! ಭಾನುವಾರ ಸಂಜೆ 3ಕ್ಕೆ ಅವರ ಮನೆಯಲ್ಲಿ ಹಾಜರಾಗುತ್ತಿದ್ದೆವು!! ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಎಲ್ಲ ಮಕ್ಕಳು ಗುಂಪಿನಲ್ಲಿ ಒಬ್ಬೊಬ್ಬರೇ, ಕಳ್ಳ ಹೆಜ್ಜೆ ಇಟ್ಟು ನುಗ್ಗುತ್ತಿದ್ದೆವು!! ಹೀಗೆ ಸಲ್ಪ ತಿಂಗಳುಗಳು ನಡೆಯಿತು!! ನಂತರ ಅಪ್ಪನಿಗೆ ವರ್ಗಾವಣೆಯಾಗಿ ತೀರ್ಥಹಳ್ಳಿಗೆ ಹೋಗುವಂತಾಗಿ ಟಿ ವಿ ಎಲ್ಲಿ ನೋಡುವುದೆಂದು ಬೇಜಾರಾಗಿತ್ತು!! ಆದರೆ ನಮ್ಮ ಪಕ್ಕದ ಮನೆಯ ನನ್ನ ಗೆಳತಿಯ ಮನೆಯಲ್ಲೇ ಇದ್ದುದರಿ