Posts

Being Ignored...

Was just sitting near the window watching the downpour. Road is fully covered with hailstones and is looking like a snowfall. Sipping coffee I observed a dog running all different directions to get a shelter and is shooed by people. I was just curious to know where that poor animal will hide from the heavy rain!! It finally got a place under the lorry which was stopped as the way was closed due to a fallen tree. Though there was rain dancing with the heavy wind to cool the weather, there was something boiling inside me which I couldn't ignore. I was relating myself to that dog. It was being ignored!! I was questioning myself, was the pain because  I was ignored by someone? My mind was churning all possible thoughts,  the heart couldn't digest it, but the stomach had no idea on anything and was happy for the coffee!! My Achilles' heel is my sensitive sixth sense. It somehow senses things very quickly. Sometimes its a boon!! I never want it to make me feel low as its menac...

NOT SO HAPPY BIRTHDAY!!!!

Oh! its so hot summer days I sighed and kept the bag over my desk. Shri was already at his desk and he looked his watch and said  "its 9.30, you are late by 30 minutes".. I just threw a wicked smile and went to comb my fizzy hair. It was common to meet Deepti there in the rest room every morning when I go to freshen up. with a clip in her mouth and a comb brushing her lengthy hair she just waved. I started with my usual complaint list. Its very hot out, monotonous work and feel like I am ripping my heart out when I leave my kid back at home and come to office. She too started with her list after she put her clip back into her hair. At the end we laughed out on our never ending list. Just came back to my seat and took out my lappy. So many emails in my outlook. I cursed mondays  and prayed  company should opt for holidays on monday too. Marked the important emails for later read and opened my facebook account. I never look upon the facebook notifications, but today I did....

ದಾರಿದೀಪ

ಅಮ್ಮ ಎಂದು ಓಡಿ ಬರುವ ಮುದ್ದು  ಎದೆಗವಚುವ ಸಾಹಸ  ನಿನದಾದರೆ  ಹೆಗಲಿನ ಭಾರವಿಳಿಸೋ ಆತುರ ನನಗೆ!! ಎಲ್ಲಿವರೆಗೆ ಈ ಪರದಾಟ  ಯಾಕೆ ಈ ಬಿಡುವಿಲ್ಲದ ದುಡಿಮೆ, ನಾನರಿಯೆ ಈ  ಪರಿಯ!! ನೀನಿಲ್ಲದೆ ಮನ ಮರುಗಿದೆ  ಮುದುಡಿ ಹೊರಳಾಡಿದೆ ನೀ!! ಸಮಯ ಮರು ತಿರುಗಲಾರದು ನಿನ್ನ ಸಾಹಸ ನೋಡಲು , ನನ್ನ ಕುರುಡು ಕಾಯಕ ಬಂಧಿಸಿದೆ ನನ್ನ , ಬಿಡಲಾರೆನು ನಿನ್ನ !! ಕಾಣುತಿರುವೆ ಕನಸೊಂದನು ನಿನ್ನ ಸುಖದ ಮೊಗದೊಂದಿಗೆ ಆ ನೀಲಾಕಾಶದಲಿ ಹಾರುವ ಸ್ವಚ್ಛಂದದ ನಿನ್ನ ಬದುಕಿಗಾಗಿ !! ಸೂತ್ರವಿಲ್ಲದ ಪತಾಕೆಯೇ ನೀ ಗುರಿ ಮುಟ್ಟುವ ವರೆಗೆ ಹಾರಿಬಿಡು!! ದುಡಿವೆ ನಿನ್ನೊಳಿತಿಗಾಗಿ ನಿನ್ನ ಗುರಿಗೆ ಗುರುವಾಗಿ !! ಸಮಯ ವ್ಯರ್ಥ ಮಾಡದೆ ಸವೆಯದ ಹಾದಿಯ ಸವೆಸುವ ಕಾಯದಲಿ ಮುನ್ನುಗ್ಗು ಛಲದೊಳು ಉರಿವೆ ನಾ ನಿನಗೆ ದಾರಿದೀಪವಾಗಿ !!

ನೀನೇನಾ..

ಮತ್ತೆ ಮತ್ತೆ ನೆನಪಾಗಿದೆ... ನೆನೆದಾಗ ಮನ ಖುಷಿಯಾಗಿದೆ ಆ ನೆನಪು ನಿನ್ನದೇನ... ಬೆಳಗಿನ ಮುಂಜಾವಲಿ ಕಂಬಳಿಯೊಳು ಬೆಚ್ಚನೆ ಆ ಅಪ್ಪುಗೆ ನಿನ್ನದೇನ.. ನೇಸರನ ಕಿರಣ ನನ್ನ ಸೋಗಲು ಮುನ್ನ ಆ ಚುಂಬನ ನಿನ್ನದೇನ.. ದಿನ ಶುರು ಮಾಡಲು ಮುನ್ನ ಹದವಾದ ಬಿಸಿ ಕಾಫಿ ಯ ಒಡೆಯ ನೀನೇ ನಾ.. ತಿನ್ನುವ ತಿಂಡಿಯಲೂ ಮೊದಲ ತುತ್ತು ಎನಗೆ ಇರಿಸುವುದು  ನೀನೇನಾ.. ಕೆಲಸಕ್ಕೆ ಹೊರಡಲೂ ಮುನ್ನ ಹೂ ಮುತ್ತು ಹಣೆಯಲಿ ನಿಂದೇನಾ.. ವಿರಹದ ಬೇಗೆಗೆ  ತಂಪೆರೆವ ಬಿಡುವಿಲ್ಲದ ಮೆಸೇಜ್ ನಿಂದೇನಾ.. ಸಂಜೆಯ ಮೊಬ್ಬಿನಲಿ ನನಗಾಗಿ ಕಾಯುವ ಕಾತರದ ಕಣ್ಣು ನಿನದೇನ... ದಣಿದ ಮನಕೆ ಪ್ರೀತಿಯ ಉಣಬಡಿಸುವ ಕರಗಳು ನಿನದೇನ.. ರಾತ್ರಿಯ ಮಗ್ಗುಲಲಿ ಮುಂಗುರುಳ ಆಟದಲಿ ಸೋತು ಹೇಳುವ ಕಥೆ ನಿಂದೇನಾ. ರೆಪ್ಪೆ ಮುಚ್ಚುವರೆಗೆ ಎನ್ನ ತಲೆ ತಟ್ಟುವ ಕೈ ನಿಂದೇನಾ.... ನಿದ್ದೆಯ ಜೊಂಪಲ್ಲೂ  ಬರುವ ಕಥೆಗಳ ನಾಯಕ ನೀನೇನಾ  ಗೆಳೆಯ ನೀನೇನಾ...

ಒಮ್ಮೆಯಾಗಿದ್ದರೆ.....

ಒಮ್ಮೆಯಾಗಿದ್ದರೆ ಸಹಿಸುತಲಿದ್ದೆ , ಮತ್ತೊಮ್ಮೆಯಾಗಿದ್ದರೂ ಪರಿಣಾಮ ಊಹಿಸುತಲಿದ್ದೆ, ಎಲ್ಲಿದ್ದವೋ ಈ ಎಣಿಕೆಗೆ ಸಿಗದಷ್ಟು ಕಷ್ಟ ಸಾಯಿಸದೆ, ಬದುಕಲೂ ಬಿಡದೆ ಗಂಟಲನ್ನು ಕುಯ್ಯುತ್ತಿವೆ!! ಒಮ್ಮೆಯಾಗಿದ್ದರೆ ಕ್ಷಮಿಸುತಲಿದ್ದೆ , ಮತ್ತೊಮ್ಮೆಯಾಗಿದ್ದರೂ ತಿಳಿ ಹೇಳುತಲಿದ್ದೆ , ಎಲ್ಲಿದ್ದವೋ ಇಷ್ಟೊಂದು ಹಿತ ಶತ್ರುಗಳ  ಒಕ್ಕೊರಲು ಉರಿಯುಲೂ ಬಿಡದೆ, ವಾಸಿಯೂ ಮಾಡದೆ  ಹಸಿ ಗಾಯಕ್ಕೆ ಉಪ್ಪು ಸುರಿಯುತ್ತಿವೆ !! ಒಮ್ಮೆಯಾಗಿದ್ದರೆ ಕಲಿಯುತಲಿದ್ದೆ, ಮತ್ತೊಮ್ಮೆಯಾಗಿದ್ದರೂ ನನ್ನನ್ನು ಅಣಿಗೊಳಿಸುತಲಿದ್ದೆ , ಎಲ್ಲಿದ್ದವೋ ಅಷ್ಟೊಂದು ಕೆಲಸ ನಾರಿಗೆ ಒಂದನ್ನೂ ಮುಗಿಸದೆ, ಮತ್ತೊಂದನ್ನು ಶುರುಮಾಡಲು ಬಿಡದೆ ಬೆಂಬಿಡದೆ ಕಾದು  ಕೂತಿವೆ !! ಒಮ್ಮೆಯಾಗಿದ್ದರೆ  ಸುಮ್ಮನಿರುತ್ತಿದ್ದೆ, ಮತ್ತೊಮ್ಮೆಯಾಗಿದ್ದರೂ  ಹಾರಿಕೆಯ ನಗುವಿಡುತ್ತಿದೆ, ಎಲ್ಲಿದ್ದರೋ ಕಾಲೆಳೆಯುವ ಅಷ್ಟೊಂದು ಮಂದಿ, ಮಾತನಾಡಲೂ ಬಿಡದೆ, ತಾವೂ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ!! ಒಮ್ಮೆಯಾಗಿದ್ದರೆ ಸುಮ್ಮನಿರುತ್ತಿದ್ದೆ ಮತ್ತೊಮ್ಮೆಯಾಗಿದ್ದರೂ ಇಣುಕಿ ನೋಡುತ್ತಿದ್ದೆ, ಎಲ್ಲಿದ್ದವೋ ಇಷ್ಟೊಂದು whatsapp messages ಯಾವ ಕೆಲಸವನ್ನೂ ಮಾಡಲು ಬಿಡದೆ, ನಿರ್ಲಕ್ಷಿಸಲೂ ಬಿಡದೆ ನನ್ನನ್ನು ಹಿಡಿದು ಕೂರಿಸಿವೆ :-) :-)

ಮಾತೆ ಬಂಗಾರ ಮಾನಿನಿಯರಿಗೆ!!

ಒಂದು ಸಣ್ಣ ಕವಿತೆ ಸೋಮಾರಿ ಕಟ್ಟೆ / jobless jacks/  hard  workers ಜನತೆಗೆ ನೆನಪುಗಳ ಕೆದಕಿ ,ವರುಷಗಳ ಹರಡಿ ಗೆಳತಿಯರ ಒಡಗೂಡಿ ಹೆಕ್ಕೆಕ್ಕಿ ತೆಗೆಯುತಾ ಆ  ಸುಮಧುರ ಕ್ಷಣಗಳನು, ಹೃದಯ ತುಂಬಿ ನಕ್ಕು ನಾ ಹಗುರಾದೆ ನೆನೆದು !! ಜೊತೆಯಲ್ಲೇ ಬೆಳೆದು , ಮನಸ್ಸು ಬಿಚ್ಚಿ ಹರಟಿ ಕಿವಿಗಳಾದವು  ಸಾಕ್ಷಿ ಪ್ರತಿಯೊಬ್ಬರ ಗುಟ್ಟುಗಳಿಗೆ. ಎಳೆ ಎಳೆಯಾಗಿ ಆ ವಿಷಯಗಳು ಬರುತಿರಲು ಎಲ್ಲರೊಂದಿಗೆ ಹಂಚಿ ನಾ ಹಕ್ಕಿಯಾದೆ!! ಸ್ಮೃತಿ ಪಟಲದಿಂದ  ಇಣುಕಿಣುಕಿ ಬಂದ ಜೊತೆ ತಿಂದ ಪೆಟ್ಟು ಗುರು ಹಿರಿಯರಿಂದ ಒಮ್ಮೆಗೆ ಝಲ್ ಎಂದರೂ ಮನ, ಹಿತವಾಗಿದೆ ಆ ನೋವು ನಿಮ್ಮೊಂದಿಗೆ ನೆನೆಯುವುದರಿಂದ!! ಮನದ ಪರದೆ ಸರಿಸಿ, ಜೊತೆಗೆ ನಗುವ ಬೆರೆಸಿ ಒಡಗೂಡಿ ತಿಂದ ಆ ದಿನವ ಸ್ಮರಿಸಿ ಬಾಯಿ ನೀರಾಡಿದರೂ, ಬಾಯ್ತುಂಬ ಉಸುರಿ ತೇವವಾದವು ಕಣ್ಣು ಆನಂದ ಬಾಷ್ಪದಿಂದ !! ದಿನ ಬೆಳಗಾದರೆ ಏನಾದರೊಂದು ಹೊಸ ಮೆಲುಕು ವಿಷಯ ಓದುತ್ತಿರುವಾಗ ಆ ಮುಗುಳುನಗು ಪ್ರತಿಯೊಂದು ನಿಮಿಷವೂ ಬಿಡುವಿಲ್ಲ ಮಾತಿಗೆ ಮಾತೆ ಬಂಗಾರ ಮಾನಿನಿಯರಿಗೆ !!!

ಅದೇನು ಠೀವಿ!!!

ಆಗ ನಾನು ಎರಡು ಮೂರು ವರ್ಷದವಳಿರಬೇಕು!! ಎಲ್ಲ ಮಕ್ಕಳು ಗುಂಪಾಗಿ ಒಟ್ಟಿಗೆ ಏನೋ ಕಿರುಚಿಕೊಂಡು ಗಲ್ಲಿಯ ಕೊನೆಯ ಮನೆಗೆ ಓಡಿ ಹೊಗುತ್ತಿದ್ದರು. ತಲೆ ಬುಡ ಏನು ಗೊತ್ತಿಲ್ಲದ ನಾನು ಸುಮ್ಮನೆ ಅವರೊಂದಿಗೆ, ಬಸವನ ಹಿಂದೆ ಬಾಲದಂತೆ ಓಡಿ ಹೋದೆ!! ಎಷ್ಟೊಂದು ಜನ ಆಗಾಗಲೇ ಅಲ್ಲಿ ಮುತ್ತಿದ್ದರು!! ಏನಾಗುತ್ತಿದೆ ಎಂದು ತಿಳಿಯದೆ ಸಲ್ಪ ಹೊತ್ತಿನ ತನಕ ನೋಡಿ ವಾಪಸ್ ಆದೆವು. ಮಾರನೇ ದಿನ ಅದೇ ಅದ್ಯಾಯ !! ಅವತ್ತು ಸಲ್ಪ ನೋಡ ಸಿಕ್ಕಿತು!! ಪುಟ್ಟ ಪುಟ್ಟ ಜನ ಅಷ್ಟು ಚಿಕ್ಕ ಡಬ್ಬದೊಳಗೆ!! ನಾವು ಆ ಡಬ್ಬಿ ಒಡೆದರೆ ಅವರು ಹೊರಗೆ ಬರಬಹುದೇ?? ಅವರು ಯಾಕೆ ಯಾವಾಗಲೂ ಕಪ್ಪು ಬಿಳುಪಿನ ಅಂಗಿ ಹಾಕಿದ್ದಾರೆ ?? ಇವೆಲ್ಲ ನಮ್ಮ ಗುಂಪಿನ ಸವಾಲುಗಳು !! ಆಗ ಅದನ್ನು ನೋಡಿ ಅದೇನು ಎಂದು ಎಲ್ಲರನ್ನೂ ಕೇಳಿದೆವು!! ನಿಜ !! ಅದು ಟಿ ವಿ !! ನಾವು ಮೊದಲ ಬಾರಿಗೆ ನೋಡಿದ ಕಪ್ಪು ಬಿಳುಪಿನ portable ಟಿ ವಿ ಅದು!! ಆ ಮನೆಯ ಜನಕ್ಕೆ ಹೇಗೆ ಅನ್ನಿಸುತ್ತಿತ್ತೋ ಗೊತ್ತಿಲ್ಲ!! ಭಾನುವಾರ ಸಂಜೆ 3ಕ್ಕೆ ಅವರ ಮನೆಯಲ್ಲಿ ಹಾಜರಾಗುತ್ತಿದ್ದೆವು!! ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಎಲ್ಲ ಮಕ್ಕಳು ಗುಂಪಿನಲ್ಲಿ ಒಬ್ಬೊಬ್ಬರೇ, ಕಳ್ಳ ಹೆಜ್ಜೆ ಇಟ್ಟು ನುಗ್ಗುತ್ತಿದ್ದೆವು!! ಹೀಗೆ ಸಲ್ಪ ತಿಂಗಳುಗಳು ನಡೆಯಿತು!! ನಂತರ ಅಪ್ಪನಿಗೆ ವರ್ಗಾವಣೆಯಾಗಿ ತೀರ್ಥಹಳ್ಳಿಗೆ ಹೋಗುವಂತಾಗಿ ಟಿ ವಿ ಎಲ್ಲಿ ನೋಡುವುದೆಂದು ಬೇಜಾರಾಗಿತ್ತು!! ಆದರೆ ನಮ್ಮ ಪಕ್ಕದ ಮನೆಯ ನನ್ನ ಗೆಳತಿಯ ಮನೆಯಲ್ಲೇ...