ಅವಳು!!!
ಓಡಿ ಆಡೋ ಹೆಣ್ಣು ಮಗು ಮುಖ ಬಾಡಿ ಏಕೆ ನಿಂತಿಹುದೋ !!! ಕುಣಿದಾಡಿ ಆಡೋ ವೇಳೆಯಲ್ಲಿ ಹಲ ಭಾರಗಳ ಹೊತ್ತಿಹಳೊ !! ತಾಯಿ ಜೊತೆ ಮನೆ ಕೆಲಸ , ಮಗಳಿಗೆ ಪ್ರತಿ ದಿವಸ , ರೋಗದಿ ಮಲಗಿದರೆ ಪಕ್ಕದಲ್ಲಿ ಪ್ರತಿ ನಿಮಿಷ! ಬಾಗಿಲಿಗೆ ನೀರು ಹಾಕಿ, ಹಸುಗಳಿಗೆ ಹುಲ್ಲು ಹಾಕಿ, ಪಾತ್ರೆ ತೊಳೆವ , ಬಟ್ಟೆ ಒಗೆವ -ಹುಟ್ಟಿಸಿದನು ಬ್ರಹ್ಮ ಇವಳನು !! ಈ ಎಳೆ ಮಲ್ಲಿಗೆ ಬಾಲೆ, ಹಲ ಹೊರೆಯು ಇವಳ ಮೇಲೆ , ಅದ ನೆನೆದು ನೆನೆದು ಕೊರಗಿ ಕೊರಗಿ ಮನಸು ಮುಳ್ಳಿನ ಮಾಲೆ!! ಹಾಗೆ ಸುಮ್ಮನೆ ಮೇಲಿನ ಸಾಲುಗಳು ನೆನಪಾದವು!!! ನಾನು ಶಾಲೆಯಲ್ಲಿ ಓದುವಾಗ ಹಾಡಿದ ಹಾಡಿದು !! ಆಗ ಸುಮ್ಮನೆ ಬಾಯಿ ಪಾಠ ಮಾಡಿ ಹೇಳಿದ್ದೆ , ಯಾಕೋ ಇವತ್ತು ಗುನುಗುವಾಗ ನಿಜವಾದ ಅರ್ಥ ಅರಿವಾಯ್ತು !! ಮನೆಯಲ್ಲಿ ಯಾವುದೇ ಕೆಲಸಕ್ಕೆ ಅವಳು ಬೇಕು !! ಬೆಳಿಗ್ಗೆ ಎದ್ದೊಡನೆ ಹೀರುವ ಚಹಾ ಅವಳೇ ಮಾಡಿಡಬೇಕು! ನಂತರದ ತಿಂಡಿಯು ಅವಳೇ ಮಾಡಬೇಕು! ಜೊತೆಗೆ ಮಗುವಿದ್ದರೆ , ಅದಕ್ಕೂ ಅವಳ ಕೈಯಾರ ಮಾಡುಣಿಸಬೇಕು!! ಜೊತೆಗೆ ಅವಳು ಹೊರಗೆ ದುಡಿಯುವುದಾದರೆ ಮದ್ಯಾಹ್ನಕ್ಕೂ ಬೇಯಿಸಬೇಕು !! ಮನೆಯವರ ಇಷ್ಟಗಳನ್ನು ಪರಿಗಣಿಸಬೇಕು, ಅವರಿಗನುಗುಣವಾಗಿ ಅವಳು ಕೆಲಸ ಮಾಡಬೇಕು !! ಅಳುವ ಮಗುವನ್ನು ಸಂತೈಸಿ ಮಲಗಿಸಬೇಕು , ನಂತರ ಆಫೀಸ್ ಗೆ ಹೊರಡಬೇಕು! ಆಫೀಸ್ ನಲ್ಲಿರೋ ಭಾರಗಳನ್ನೂ ಸರಿದೂಗಿಸಬೇಕು!! ಮನೆಗೆ ಸಂಜೆ ವಾಪಾಸಾದರೆ ಯಥಾ ಪ್ರಕಾರದ ಕೆಲಸ ಅವಳಿಗೆ !! ಅವಳೇನಾದರೂ ಯಂತ...